Post Office Recruitment 2022:188 ಪೋಸ್ಟ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

(Post Office Recruitment 2022)ಗುಜರಾತ್ ಪೋಸ್ಟಲ್ ಸರ್ಕಲ್ ಇಲಾಖೆಯಲ್ಲಿ ಖಾಲಿ ಇರುವ 188 ಅಂಚೆ, ವಿಂಗಡಣೆ ಸಹಾಯಕರು, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗುಜರಾತ್ ಭಾಗದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೆಂಬರ್ 22 2022 ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

(Post Office Recruitment 2022)ಗುಜರಾತ್ ಪೋಸ್ಟಲ್ ಸರ್ಕಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
ಸಂಸ್ಥೆಯ ಹೆಸರು: ಗುಜರಾತ್ ಪೋಸ್ಟಲ್ ಸರ್ಕಲ್ ಇಲಾಖೆ (ಗುಜರಾತ್ ಪೋಸ್ಟ್ ಆಫೀಸ್)
ಹುದ್ದೆಯ ಹೆಸರು: ಅಂಚೆ ,ವಿಂಗಡಣೆ ಸಹಾಯಕರು, ಪೋಸ್ಟ್‌ಮ್ಯಾನ್ ,ಮೇಲ್ ಗಾರ್ಡ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)
ಹುದ್ದೆಗಳ ಸಂಖ್ಯೆ:188
ಉದ್ಯೋಗ ಸ್ಥಳ: ಗುಜರಾತ್

ಗುಜರಾತ್ ಪೋಸ್ಟಲ್ ಸರ್ಕಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಸಂಖ್ಯೆಯ ವಿವರ:
ಅಂಚೆ/ ವಿಂಗಡಣೆ ಸಹಾಯಕರು – 71 ಹುದ್ದೆಗಳು
ಪೋಸ್ಟ್‌ಮ್ಯಾನ್/ ಮೇಲ್ ಗಾರ್ಡ್ – 56 ಹುದ್ದೆಗಳು
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) – 61 ಹುದ್ದೆಗಳು

ವಿದ್ಯಾರ್ಹತೆ ವಿವರ:
ಗುಜರಾತ್ ಪೋಸ್ಟಲ್ ಸರ್ಕಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಹತ್ತು ಮತ್ತು ದ್ವೀತಿಯ ಪಿಯುಸಿ ಪೂರ್ಣಗೊಳಿಸಿರಬೇಕು.

ಗುಜರಾತ್ ಪೋಸ್ಟಲ್ ಸರ್ಕಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯ ವೇತನದ ವಿವರ:
ಅಂಚೆ /ವಿಂಗಡಣೆ ಸಹಾಯಕರು:25,500 ರಿಂದ 81,100ರೂ.
ಪೋಸ್ಟ್‌ಮ್ಯಾನ್/ಮೇಲ್ ಗಾರ್ಡ್:21,700 ರಿಂದ 69,100ರೂ.
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS):18,000 ರಿಂದ 56,900ರೂ.

ಇದನ್ನೂ ಓದಿ:HPSC Recruitment 2022 :53 ಉಪವಿಭಾಗೀಯ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ:Zilla Panchayat Recruitment 2022: ಮಹಿಳಾ ಕ್ಲೀನರ್ ಮತ್ತು ಸೆಕ್ಯುರಿಟಿ ಹುದ್ದೆಗೆ ಅರ್ಜಿ ಆಹ್ವಾನ

ವಯೋಮಿತಿ ವಿವರ:
ಅಂಚೆ ಸಹಾಯಕ/ವಿಂಗಡಣಾ ಸಹಾಯಕ: 18ರಿಂದ27 ವಯಸ್ಸಾಗಿರಬೇಕು.
ಪೋಸ್ಟ್‌ಮ್ಯಾನ್/ಮೇಲ್ ಗಾರ್ಡ್: 18ರಿಂದ27 ವಯಸ್ಸಾಗಿರಬೇಕು.
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ(MTS): 18ರಿಂದ25 ವಯಸ್ಸಾಗಿರಬೇಕು.

ಗುಜರಾತ್ ಪೋಸ್ಟಲ್ ಸರ್ಕಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ:
ಗುಜರಾತ್ ಪೋಸ್ಟಲ್ ಸರ್ಕಲ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್‌ ಹಾಗೂ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ)24-10-2022 ರಿಂದ22-11-2022 ರವರೆಗೆ ಗುಜರಾತ್ ಪೋಸ್ಟಲ್ ಸರ್ಕಲ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಆದ www.indiapost.gov.inನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

Post Office Recruitment 2022:Application Invitation for 188 Posts of Postman

Comments are closed.