Burqa: ತಾಲಿಬಾನ್ ಎಫೆಕ್ಟ್ : ಆಹಾರದ ಜೊತೆ ಗಗನಕ್ಕೇರಿತು ಬುರ್ಖಾ ಬೆಲೆ:

ಅಪ್ಘಾನಿಸ್ತಾನ್ ಭೂಲೋಕದ ನರಕವಾಗುತ್ತಿದೆ. ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಾಬೂಲ್ ಏರ್ ಪೋರ್ಟ್ ನಲ್ಲಿ ಅನ್ನ,ನೀರಿನ‌ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಅಪ್ಘಾನಿಸ್ತಾನ್ ನಲ್ಲಿ ಬುರ್ಖಾ ಬೆಲೆ ದುಪ್ಪಟ್ಟಾಗಿದೆ.

ತಾಲಿಬಾನ್ ಉಗ್ರರು ಅಪ್ಘಾನಿಸ್ತಾನ್ ದಲ್ಲಿ ಬುರ್ಖಾ ಬೆಲೆ ಒಂದು ಸೆಟ್ ಗೆ ೫೦೦ ರೂಪಾಯಿಗಳಷ್ಟಿತ್ತು. ಆದರೆ ಈಗ ತಾಲಿಬಾನಿಗಳ ಕಪಿ ಮುಷ್ಟಿ ಯಲ್ಲಿ ಸಿಲುಕುತ್ತಿದ್ದಂತೆ ಬುರ್ಖಾ ಸೆಟ್ ವೊಂದರ ದರ ೨೫೦೦ ರೂಪಾಯಿಗಳಿಂದ ೩ ಸಾವಿರಕ್ಕೆ ತಲುಪಿದೆ.

effect-

ತಾಲಿಬಾನಿಗಳು ಅಪ್ಘಾ‌‌ನಿಸ್ತಾನ್ ದಲ್ಲಿ ಶರಿಯಾ ಕಾನೂನು ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ. ಮಾತ್ರವಲ್ಲದೇ ಹೆಣ್ಣುಮಕ್ಕಳು ಬುರ್ಖಾ ಧರಿಸುವುದು ಕಡ್ಡಾಯ ಎಂದಿದ್ದಾರೆ. ಹೀಗಾಗಿ ತಾಲಿಬಾನಿಗಳ ಕಠಿಣ ಶಿಕ್ಷೆಗೆ ಹೆದರಿ ಮಹಿಳೆಯರು ಬುರ್ಖಾ ಖರೀದಿಗೆ ಮುಗಿಬಿದ್ದಿದ್ದು ದರ ಕೂಡ ಏರಿಕೆ ಕಂಡಿದೆ.

ಈಗಾಗಲೇ ತಾಲಿಬಾನಿಗಳು ಮಹಿಳಾ ಆಂಕ್ಯರ್ ಗಳು ಸೇರಿದಂತೆ ಮಹಿಳಾ ಉದ್ಯೋಗಿಗಳ ಕೆಲಸ ಮೇಲೆ ಕೆಂಗಣ್ಣು ಬೀರಿದ್ದಾರೆ. ಅಲ್ಲದೆ ಮಹಿಳೆಯರು ಜೀನ್ಸ್ , ಹೀಲ್ಸ್ ಧರಿಸುವಂತಿಲ್ಲ. ನೇಲ್ ಪಾಲೀಶ್ ಹಚ್ಚುವಂತಿಲ್ಲ ಎಂದು ಆದೇಶಿಸಿದ್ದಾರೆ.

Comments are closed.