80 ಕ್ಕೂ ಹೆಚ್ಚು ಉಕ್ರೇನ್ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ಉಕ್ರೇನ್ ವಿಮಾನವನ್ನು ಶಸ್ತ್ರಾಸ್ತ್ರದಾರಿಗಳು ಅಪಹರಿಸಿದ್ದಾರೆ ಎಂದು ಉಕ್ರೇನ್ ಸಚಿವರು ಹೇಳಿದ್ದಾರೆ. ಭಾನುವಾರವೇ ಅಪಹರಣ ನಡೆದಿದೆ ಎನ್ನಲಾಗಿದೆ.

ಅಪರಿಚಿತ ಶಸ್ತ್ರಾಸ್ತ್ರದಾರಿಗಳು ವಿಮಾನವನ್ನು ಕಿಡ್ನಾಪ್ ಮಾಡಿದ್ದು, ಇರಾನ್ ನತ್ತ ಹಾರುವಂತೆ ಮಾಡಿದ್ದಾರೆ ಎಂದು ಉಕ್ರೇನ್ ನ ಉಪವಿದೇಶಾಂಗ ಸಚಿವ ಯೆವಗ್ನಿನಿ ಯೆನಿನ್ ಮಾಹಿತಿ ನೀಡಿದ್ದಾರೆ.
ರಷ್ಯಾದ ಸುದ್ದಿಸಂಸ್ಥೆಗಳು ಈ ಸುದ್ದಿಯನ್ನು ವರದಿ ಮಾಡಿದೆ. ಅಪಹರಣಕ್ಕೊಳಗಾದ ವಿಮಾನ ಇರಾನ್ ನಲ್ಲಿ ಲ್ಯಾಂಡ್ ಆಗಿದೆ ಎನ್ನಲಾಗುತ್ತಿದೆ.
ಆದರೆ ಉಕ್ರೇನ್ ವಿಮಾನ ಅಪಹರಣ ಸಂಗತಿಯನ್ನು ಇರಾನ್ ತಳ್ಳಿಹಾಕಿದ್ದು, ಉಕ್ರೇನ್ ಗೆ ಸೇರಿದ ವಿಮಾನವೊಂದು ಇಂಧನ ತುಂಬಿಕೊಳ್ಳಲು ಇರಾನ್ ನಲ್ಲಿ ಲ್ಯಾಂಡ್ ಆಗಿತ್ತು ಸ್ಪಷ್ಟನೆನೀಡಿದೆ.