ಮುಂದುವರೆಯಿತು ದುಬಾರಿ ಹುಡುಗನ ದರ್ಬಾರ್: ಪ್ರೇಮ್ ಜೊತೆ ಧ್ರುವ್ ಸರ್ಜಾ ಹೊಸ ಚಿತ್ರ.

 ಒಂದಾದ ಮೇಲೊಂದರಂತೆ ಸಿನಿಮಾ ಘೋಷಿಸುತ್ತಿರುವ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ, ತಮ್ಮ 6 ನೇ ಚಿತ್ರಕ್ಕೆ ಸಜ್ಜಾಗಿದ್ದಾರೆ. ಧ್ರುವ್ ಆರನೇ ಸಿನಿಮಾಗೆ ಸ್ಯಾಂಡಲ್ ವುಡ್ ನ ಫೇಮಸ್ ನಿರ್ದೇಶಕ ಜೋಗಿ ಪ್ರೇಮ್ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಎ.ಪಿ.ಅರ್ಜುನ್ ಜೊತೆ ಮಾರ್ಟಿನ್ ಸಿನಿಮಾ ಘೋಷಿಸಿದ್ದ ಧ್ರುವ್ ಸರ್ಜಾ ನೆಕ್ಸ್ಟ್ ಮೂವಿ ಅಗಸ್ಟ್ 24 ರಂದು ಘೋಷಣೆಯಾಗಲಿದೆ. ಈ ಸಿನಿಮಾಗೆ ಕೆವಿಎನ್ ಸಂಸ್ಥೆ ಬಂಡವಾಳ ಹೂಡಲಿದ್ದು, ಇದೇ ಮೊದಲ ಬಾರಿಗೆ ಪ್ರೇಮ್ ಹಾಗೂ ಧ್ರುವ್ ಒಂದಾಗುತ್ತಿದ್ದಾರೆ.

ಸದ್ಯ ಸಿನಿಮಾ ಮಾತ್ರ ಅನೌನ್ಸ್ ಮಾಡಿರೋ ಪ್ರೇಮ್, ಟೈಟಲ್ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಮಾಸ್ ಎಂಟರಟೈನಮೆಂಟ್ ಸಿನಿಮಾ ಎನ್ನಲಾಗ್ತಿದ್ದು, ಸಖತ್ ಆಕ್ಷ್ಯನ್ ದೃಶ್ಯಗಳಲ್ಲೂ ಧ್ರುವ್ ಸರ್ಜಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚಿಗೆ ರಿಲೀಸ್ ಆದ ಮಾರ್ಟಿನ್ ಸಿನಿಮಾದ ಪೋಸ್ಟರ್ ಕೂಡ ಸಖತ್ ಮಾಸ್ ಲುಕ್ ಹೊಂದಿದ್ದು, ಧ್ರುವ್ ಸರ್ಜಾ ಗ್ರೈನೈಡ್ ನಿಂದ ಸಿಗರೇಟ್ ಹೊತ್ತಿಸಿಕೊಳ್ಳುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.

Comments are closed.