ವಿವಾಹಕ್ಕೆ ಸಿದ್ಧವಾದ ಟಾಲಿವುಡ್ ನಟ: ಅದ್ದೂರಿಯಾಗಿ ನಡೀತು ಕಾರ್ತಿಕೇಯ ನಿಶ್ಚಿತಾರ್ಥ

ತೆಲುಗಿನ ಖ್ಯಾತ ನಟ ಕಾರ್ತಿಕೇಯ ಹೊಸಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕೊರೋನಾ ನಿಯಮಗಳ ನಡುವೆಯೇ ತಮ್ಮ ಬಹುಕಾಲದ ಗೆಳತಿ ಲೋಹಿತಾ ಕೈಗೆ ಕಾರ್ತಿಕೇಯ್ ನಿಶ್ಚಿತಾರ್ಥದ ಉಂಗುರ ತೊಡಿಸಿದ್ದಾರೆ. ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಸೆಟ್ ನಲ್ಲಿ ಸಮಾರಂಭ ನಡೆದಿದೆ.

ತಮ್ಮ ಎಂಗೇಜಮೆಂಟ್ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರೋ ಕಾರ್ತಿಕೇಯ ನನ್ನ ಬೆಸ್ಟ್ ಪ್ರೆಂಡ್ ಜೊತೆ ನನ್ನ ವಿವಾಹ ನಿಶ್ಚಿತಾರ್ಥವಾಯಿತು ಅನ್ನೋದನ್ನು ತಿಳಿಸಲು ಖುಷಿಯಾಗ್ತಿದೆ. ನಾನು ಮೊದಲು ಲೋಹಿತಾರನ್ನು ಭೇಟಿ ಮಾಡಿದ್ದು, ಎನ್ಐಟಿ  ವಾರಂಗಲ್ ನಲ್ಲಿ ಎಂದಿದ್ದಾರೆ. ಮಾತ್ರವಲ್ಲ 2010 ರಲ್ಲಿ ಭೇಟಿಯಾದ ಪೋಟೋ ಮತ್ತು ಎಂಗೇಜ್ ಮೆಂಟ್ ಪೋಟೋವನ್ನು ನಟ ಹಂಚಿಕೊಂಡಿದ್ದಾರೆ.

https://www.instagram.com/p/CS64VjtltZH/?utm_source=ig_web_copy_link

ಪ್ರೇಮತೋ ಮೀ ಕಾರ್ತಿಕ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಾರ್ತಿಕೇಯ, ಆರ್ ಎಕ್ಸ್ 100 ಚಿತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಗುಣ, 369 ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ ಕಾರ್ತಿಕೇಯ ಬಳಿ ಸದ್ಯ ವಾಲಿಮೈ ಮತ್ತು ರಾಜಾವಿಕ್ರಮಾರ್ಕ್ ಸಿನಿಮಾಗಳಿವೆ.

ಕಾರ್ತಿಕೇಯ ನಿಶ್ಚಿತಾರ್ಥಕ್ಕೆ ಸಿನಿತಾರೆಯರು ಹಾಗೂ ಅಭಿಮಾನಿಗಳು ಶುಭಹಾರೈಸಿದ್ದಾರೆ.

Comments are closed.