Lankan President’s Pool : ಶ್ರೀಲಂಕಾ ಅಧ್ಯಕ್ಷರ ಮನೆಗೆ ಮುತ್ತಿಗೆ : ಈಜುಕೊಳದಲ್ಲಿ ಮಸ್ತಿ ಮಾಡಿದ ಪ್ರತಿಭಟನಾಕಾರರು

ಶ್ರೀಲಂಕಾ : Lankan President’s Pool: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಇಲ್ಲಿನ ಜನರ ಜೀವನದ ಸ್ಥಿತಿ ಸಂಪೂರ್ಣವಾಗಿ ಬೀದಿಗೆ ಬಂದಿದೆ. ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ಕಂಗೆಟ್ಟು ಹಲವು ದಿನಗಳೇ ಕಳೆದಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಶ್ರೀಲಂಕಾ ಸರ್ಕಾರದ ವಿರುದ್ಧ ಶ್ರೀಲಂಕಾದ ಜನತೆ ಸಿಡಿದೆದ್ದಿದ್ದಾರೆ. ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಇದರಿಂದ ಭಯಗೊಂಡ ಗೋತಬಯ ಸ್ಥಳದಿಂದ ಪಲಾಯನಗೊಂಡಿದ್ದಾರೆ ಎನ್ನಲಾಗಿದೆ. ರಾಜಪಕ್ಸೆ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಈಜುಕೊಳದಲ್ಲಿ ಈಜಾಡುವ ಮೂಲಕ ಹಾಗೂ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಮೂಲಕ ಮೋಜು ಮಸ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಅಧ್ಯಕ್ಷರ ನಿವಾಸದಲ್ಲಿ ತುಂಬಿ ತುಳುಕುತ್ತಾ ಇದ್ದು ಪ್ರತಿಭಟನಾಕಾರರ ಗುಂಪು ದೊಡ್ಡ ಟೇಬಲ್​ನ ಸುತ್ತಲೂ ಪಾತ್ರೆ ಸೇರಿದಂತೆ ವಿವಿಧ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾಕಿದೆ. ಹಾಗೂ ಇನ್ನೊಂದು ಗುಂಪು ಅಡುಗೆ ಮಾಡುತ್ತಿರೋದನ್ನು ಕಾಣಬಹುದಾಗಿದೆ. ಪರಿಸ್ಥಿತಿ ನಿಯಂತ್ರಣ ಕೈ ತಪ್ಪಲಿದೆ ಎಂದು ಗುಪ್ತಚರ ವರದಿಗಳು ಎಚ್ಚರಿಕೆ ನೀಡಿದ ನಂತರ ಅಧ್ಯಕ್ಷ ರಾಜಪಕ್ಸೆ ಪಲಾಯನಗೊಂಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲವೊಂದು ತಿಳಿಸಿದೆ.ಪ್ರಧಾನಿ ರನಿಲ್ ವಿಕ್ರಮಸಿಂಘೆ ಪಕ್ಷದ ನಾಯಕರ ತುರ್ತು ಸಭೆಯನ್ನು ಕರೆದಿದ್ದು, ಪರಿಸ್ಥಿತಿಗೆ ಪರಿಹಾರವನ್ನು ಚರ್ಚಿಸಲು ನಿರ್ಧರಿಸಿದ್ದಾರೆ. ವಿಕ್ರಮಸಿಂಘೆ ಅಧಿವೇಶನ ಕರೆಯುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.

ಶ್ರೀಲಂಕಾದಲ್ಲಿ ಆಹಾರ ಹಾಗೂ ಇಂಧನದ ಕೊರತೆ ಮಿತಿಮೀರಿದೆ. ಇಲ್ಲಿ 22 ಮಿಲಿಯನ್​ ಜನರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಅಕ್ಕಿ, ಹಾಲಿನಂತಹ ಅಗತ್ಯ ವಸ್ತುಗಳಿಗೂ ಶ್ರೀಲಂಕಾದಲ್ಲಿ ಅಭಾವವಿದೆ.ಅಲ್ಲದೇ 51 ಶತಕೋಟಿ ಡಾಲರ್​ ಬಾಹ್ಯಸಾಲವನ್ನು ಸಹ ಹೊಂದಿದೆ. ಚೀನಾ ಹಾಗೂ ಜಪಾನ್​ ದೇಶಗಳೊಂದಿಗೆ ಶ್ರೀಲಂಕಾ ದೊಡ್ಡ ಮೊತ್ತದ ಸಾಲವನ್ನು ಹೊಂದಿದೆ.

ಇದನ್ನು ಓದಿ :amarnath yatra : ಅಮರನಾಥ ಯಾತ್ರೆಯಲ್ಲಿರುವ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ : ಸಿಎಂ ಬೊಮ್ಮಾಯಿ

ಇದನ್ನೂ ಓದಿ : ravindra jadeja : ಸಿಎಸ್​ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ ರವೀಂದ್ರ ಜಡೇಜಾ

ಇದನ್ನೂ ಓದಿ : ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನಿರ್ಣಯ ಘೋಷಿಸಿದ ರನಿಲ್​ ವಿಕ್ರಮ್​ಸಿಂಘೆ

Video: Protesters Swim In Lankan President’s Pool

Comments are closed.