ಯುವ ಆಟಗಾರನ ಹಾದಿಗೆ ವಿರಾಟ್ ಅಡ್ಡಗಾಲು, ಈಗೇನ್ಮಾಡ್ತಾರೆ ಟೀಮ್ ಇಂಡಿಯಾ ಹೀರೋ ?

ಬರ್ಮಿಂಗ್’ಹ್ಯಾಮ್: (Virat Kohli vs Deepak Hooda) ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 50 ರನ್’ಗಳ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಶನಿವಾರ 2ನೇ ಟಿ20 ಪಂದ್ಯವನ್ನಾಡಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶಕ್ಕೆ ಟೀಮ್ ಇಂಡಿಯಾ ಪ್ಲಾನ್ ಮಾಡಿದೆ. ಆದರೆ ಭಾರತಕ್ಕೆ ಇಲ್ಲೊಂದು ಸಣ್ಣ ತಲೆನೋವು ಶುರುವಾಗಿದೆ. ಅದೇನಂದ್ರೆ ಪ್ರಥಮ ಟಿ20 ಪಂದ್ಯದಿಂದ ಹೊರಗುಳಿದಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದ ಮೂಲಕ ಆಡುವ ಬಳಗಕ್ಕೆ ವಾಪಸ್ಸಾಗಲಿದ್ದಾರೆ. ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದರೆ 3ನೇ ಕ್ರಮಾಂಕದಲ್ಲಿ ಆಡುವುದು ಪಕ್ಕಾ. ಆಗ ಕೊಹ್ಲಿಗಾಗಿ ಯುವ ಆಲ್ರೌಂಡರ್ ದೀಪಕ್ ಹೂಡ ಜಾಗ ಬಿಟ್ಟುಕೊಡಬೇಕಾಗುತ್ತದೆ.

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 28 ವರ್ಷದ ದೀಪಕ್ ಹೂಡ, ಅಮೋಘ ಫಾರ್ಮ್’ನಲ್ಲಿದ್ದಾರೆ. ಸೌಥಾಂಪ್ಟನ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಬ್ಬರಿಸಿದ್ದ ಹೂಡ, ಕೇವಲ 17 ಎಸೆತಗಳಲ್ಲಿ 33 ರನ್ ಸಿಡಿಸಿದ್ದರು. 3 ಬೌಂಡರಿ ಹಾಗೂ 2 ಸಿಕ್ಸರ್ಸ್ ಬಾರಿಸಿದ್ದ ಹೂಡ 194ರ ಅಮೋಘ ಸ್ಟ್ರೈಕ್’ರೇಟ್’ನಲ್ಲಿ ಬ್ಯಾಟ್ ಬೀಸಿದ್ದರು.

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮೊದಲು ನಡೆದ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲೂ ಹೂಡ ಭರ್ಜರಿ ಪ್ರದರ್ಶನ ತೋರಿದ್ದರು. ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅಜೇಯ 47 ರನ್ ಬಾರಿಸಿದ್ದ ಹೂಡ, 2ನೇ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಲಿಳಿದು ಸಿಡಿಲಬ್ಬರದ ಶತಕ ಸಿಡಿಸಿ ಗಮನ ಸೆಳೆದಿದ್ದರು.

ಕಳೆದ 3 ಟಿ20 ಪಂದ್ಯಗಳಲ್ಲಿ ದೀಪಕ್ ಹೂಡ:
47*(26) Vs ಐರ್ಲೆಂಡ್
104(57) Vs ಐರ್ಲೆಂಡ್
33(17) Vs ಇಂಗ್ಲೆಂಡ್

ಅಮೋಘ ಸ್ಟ್ರೈಕ್’ರೇಟ್’ನೊಂದಿಗೆ ಆಡುತ್ತಿರುವ ದೀಪಕ್ ಹೂಡ, ಸದ್ಯ 3ನೇ ಕ್ರಮಾಂಕಕ್ಕೆ ಸಮರ್ಥ ಆಟಗಾರ. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ಲೇಯಿಂಗ್ XIಗೆ ಮರಳಿದರೆ ದೀಪಕ್ ಹೂಡ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಹಾಗಾದ್ರೆ ಭರ್ಜರಿ ಫಾರ್ಮ್’ನಲ್ಲಿರುವ ಹೂಡಗಾಗಿ ಕೊಹ್ಲಿ ಸ್ಥಾನ ತ್ಯಾಗ ಮಾಡ್ತಾರಾ..?

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ವಿರಾಟ್ ಕೊಹ್ಲಿ ಪಾಲಿಗೂ ಮಹತ್ವದ್ದು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕಾದರೆ ವಿರಾಟ್ ಕೊಹ್ಲಿ ಈಗ ಫಾರ್ಮ್ ಕಂಡುಕೊಳ್ಳಲೇಬೇಕು. ಹೀಗಾಗಿ ಎಲ್ಲರ ಕಣ್ಣು ಈಗ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ.

ಇದನ್ನೂ ಓದಿ : India tour of Zimbabwe : ಆಗಸ್ಟ್‌ನಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ ಟೂರ್, ಭಾರತ ತಂಡಕ್ಕೆ ಕ್ಯಾಪ್ಟನ್ ಯಾರು ?

ಇದನ್ನೂ ಓದಿ : India Vs England T20 : ಇಂದು ಇಂಡಿಯಾ Vs ಇಂಗ್ಲೆಂಡ್ 2ನೇ ಟಿ20, ಕೊಹ್ಲಿ ಆಡಬೇಕಾದರೆ ಇದೊಂದೇ ದಾರಿ

Virat Kohli vs Deepak Hooda, Kohli Computation for Deepak Hooda

Comments are closed.