Aadhar-Voter ID link: ಮೊಬೈಲ್‌ನಲ್ಲೇ ಆಧಾರ್‌ ಜೊತೆ ಓಟರ್‌ ಐಡಿ ಲಿಂಕ್‌ ಮಾಡಬೇಕಾ : ಹಾಗಾದ್ರೆ ಇಲ್ಲಿ ಕ್ಲಿಕ್‌ ಮಾಡಿ

(Aadhar-Voter ID link)ಚುನಾವಣೆಯ ವೇಳೆಯಲ್ಲಿ ಅಕ್ರಮ ಮತದಾನವು ನೆಡೆಯುತ್ತಿದ್ದು, ಅದನ್ನು ತಡೆಗಟ್ಟಲು ಚುನಾವಣೆ ಆಯೋಗವು ಮತದಾರರ ಗುರುತಿನ ಚೀಟಿಯನ್ನು ಆಧಾರ ಕಾರ್ಡ್ ನೊಂದಿಗೆ ಲಿಂಕ್‌ ಮಾಡಲು ಭಾರತೀಯ ಚುನಾವಣಾ ಆಯೋಗ (ECI)ಹೇಳಿದೆ. ಆ ಕುರಿತು ಭಾರತೀಯ ಚುನಾವಣೆ ಆಯೋಗ(ECI)ವು ಕಳೆದ ವರ್ಷ ಡಿಸೆಂಬರ್‌ನಲ್ಲಿಯೇ ಸಂಸತ್ತು ಚುನಾವಣಾ ಕಾನೂನುಗಳ(ತಿದ್ದುಪಡಿ) ಕಾಯಿದೆಯನ್ನು ಅಂಗೀಕರಿಸಿತ್ತು. ಈ ಕಾಯಿದೆ 2021ರ ಅನ್ವಯ ದೇಶದ ಪ್ರತಿಯೊಬ್ಬ ಮತದಾರನೂ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ ನೊಂದಿಗೆ ಲಿಂಕ್‌ ಮಾಡಬೇಕಾಗಿದೆ.

(Aadhar-Voter ID link)ಆಧಾರ್‌ ಜೊತೆಗೆ ಮತದಾರರ ಗುರುತಿನ ಚೀಟಿಯನ್ನು ಜೋಡಣೆ ಮಾಡುವ ಮುಖ್ಯ ಉದ್ದೇಶ ಅಕ್ರಮ ಮತದಾನವನ್ನು ತಡೆಯುವುದು. ಆದರೆ ಮತದಾರರ ಗುರುತಿನ ಅಥವಾ ಚುನಾವಣಾ ಗುರುತಿನ ಚೀಟಿ (EPIC)ನೊಂದಿಗೆ ಆಧಾರ್‌ ಲಿಂಕ್‌ ಮಾಡುವುದನ್ನು ಭಾರತೀಯ ಚುನಾವಣೆ ಆಯೋಗ (ECI)ಇನ್ನೂ ಕಡ್ಡಾಯಗೊಳಿಸಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ. ಆಧಾರ ಸಂಖ್ಯೆಯನ್ನು ನೀಡುವುದ್ದರಿಂದ ಚಾಲ್ತಿಯಲಿರುವ ಮತದಾರರ ಹೆಸರನ್ನು ಚುನಾವಣಾ ಪಟ್ಟಿಯಿಂದ ತೆಗೆದು ಹಾಕುವುದಿಲ್ಲ ಎಂದು ಚುನಾವಣಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

ಹಾಗಾಗಿ ನೀವು ಏನಾದರೂ ಆಧಾರ್‌ ಕಾರ್ಡ್‌ ಅನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಆನ್‌ ಲೈನ್ ನಲ್ಲಿ ಲಿಂಕ್‌ ಮಾಡಲು ಇಚ್ಛಿಸಿದರೆ, ಅದಕ್ಕೆ ಚುನಾವಣಾ ಆಯೋಗವು ಕೆಲವು ಸುಲಭದ ಹಂತಗಳನ್ನು ಹಂಚಿಕೊಂಡಿದೆ. ನಿಮ್ಮ ಆಧಾರ್‌ ಮತ್ತು ಮತದಾರರ ಗುರುತಿನ ಚೀಟಿಯನ್ನು ಲಿಂಕ್‌ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಇದನ್ನೂ ಓದಿ : ಸೊರಬ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ದ ಅಸಮಾಧಾನ

ಇದನ್ನೂ ಓದಿ : ಸುಮಲತಾರ ಆಣೆ – ಪ್ರಮಾಣದ ಸವಾಲ್​ ಸ್ವೀಕರಿಸಿದ ಮೇಲುಕೋಟೆ ಶಾಸಕ ಸಿ.ಎಸ್​ ಪುಟ್ಟರಾಜು

ಇದನ್ನೂ ಓದಿ : ಭಾರತ್​ ಜೋಡೋ ಯಾತ್ರೆ ಬೆನ್ನಲ್ಲೇ ಪ್ರತ್ಯೇಕ ರಥಯಾತ್ರೆಗೆ ಸಿದ್ದರಾಮಯ್ಯ ಸಿದ್ಧತೆ

ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಕಾರ್ಡ್ ನೊಂದಿಗೆ ಲಿಂಕ್‌ ಮಾಡುವ ವಿಧಾನ ಈ ಕೆಳಗಿನಂತಿದೆ:

  • ಹಂತ 1: ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
  • ಹಂತ 2: ಅಪ್ಲಿಕೇಶನ್ ತೆರೆಯಿರಿ ಮತ್ತು ‘ನಾನು ಒಪ್ಪುತ್ತೇನೆ’ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ‘ಮುಂದೆ’ ಟ್ಯಾಪ್ ಮಾಡಿ.
  • ಹಂತ 3: ಮೊದಲ ಆಯ್ಕೆ ‘ಮತದಾರರ ನೋಂದಣಿ’ ಮೇಲೆ ಟ್ಯಾಪ್ ಮಾಡಿ.
  • ಹಂತ 4: ಎಲೆಕ್ಟೋರಲ್ ಅಥೆಂಟಿಕೇಶನ್ ಫಾರ್ಮ್ (ಫಾರ್ಮ್ 6B) ಅನ್ನು ಕ್ಲಿಕ್ ಮಾಡಿ ಮತ್ತು ತೆರೆಯಿರಿ.
  • ಹಂತ 5: ‘ಲೆಟ್ಸ್ ಸ್ಟಾರ್ಟ್’ ಕ್ಲಿಕ್ ಮಾಡಿ.
  • ಹಂತ 6: ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಕಳುಹಿಸು ಟ್ಯಾಪ್ ಮಾಡಿ.
  • ಹಂತ 7: ನೀವು ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು ‘ಪರಿಶೀಲಿಸು’ ಕ್ಲಿಕ್ ಮಾಡಿ.
  • ಹಂತ 8: ಯೆಸ್ ಐ ಹ್ಯಾವ್ ವೋಟರ್ ಐಡಿ ಕ್ಲಿಕ್ ಮಾಡಿ ನಂತರ ‘ಮುಂದೆ’ ಕ್ಲಿಕ್ ಮಾಡಿ.
  • ಹಂತ 9: ನಿಮ್ಮ ಮತದಾರರ ID ಸಂಖ್ಯೆಯನ್ನು ನಮೂದಿಸಿ (EPIC), ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ‘ವಿವರಗಳನ್ನು ಪಡೆದುಕೊಳ್ಳಿ’ ಕ್ಲಿಕ್ ಮಾಡಿ.
  • ಹಂತ 10: ‘ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಿ.
  • ಹಂತ 11: ಆಧಾರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ದೃಢೀಕರಣದ ಸ್ಥಳವನ್ನು ಭರ್ತಿ ಮಾಡಿ ಮತ್ತು ‘ಮುಗಿದಿದೆ’ ಕ್ಲಿಕ್ ಮಾಡಿ.
  • ಹಂತ 12: ಫಾರ್ಮ್ 6B ಪೂರ್ವವೀಕ್ಷಣೆ ಪುಟ ತೆರೆಯುತ್ತದೆ. ನಿಮ್ಮ ವಿವರಗಳನ್ನು ಮರು-ಪರಿಶೀಲಿಸಿ ಮತ್ತು ನಿಮ್ಮ ಫಾರ್ಮ್ 6B ನ ಅಂತಿಮ ಸಲ್ಲಿಕೆಗಾಗಿ ‘ದೃಢೀಕರಿಸಿ’ ಕ್ಲಿಕ್ ಮಾಡಿ.

Do you need to link Otter ID with Aadhaar on mobile itself: If yes then click here

Comments are closed.