Bharat Jodo Yatra : ಕಾಂಗ್ರೆಸ್​​ನವರು ಭಾರತ್​ ಜೋಡೋ ಅಲ್ಲ, ಕಾಂಗ್ರೆಸ್​ ಜೋಡೋ ಯಾತ್ರೆ ಮಾಡಲಿ : ಸಚಿವ ಸುನೀಲ್​ ಕುಮಾರ್​ ವ್ಯಂಗ್ಯ

ಉಡುಪಿ : Bharat Jodo Yatra : ದೇಶದಲ್ಲಿ ಕಾಂಗ್ರೆಸ್​ ನಡೆಸುತ್ತಿರುವ ಭಾರತ್​ ಜೋಡೋ ಯಾತ್ರೆಯ ವಿಚಾರವಾಗಿ ಉಡುಪಿಯಲ್ಲಿ ವ್ಯಂಗ್ಯವಾಡಿದ ಇಂಧನ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್​ ಕುಮಾರ್​, ದೇಶ ಮುರಿದವರು ಭಾರತ್​ ಜೊಡೋ ಯಾತ್ರೆಯನ್ನು ಹೇಗೆ ಮಾಡ್ತಾರೆ..? ದೇಶ ಮುರಿದವರಿಗೆ ಭಾರತ್​ ಜೋಡೋ ಯಾತ್ರೆ ಮಾಡುವ ಯಾವುದೇ ನೈತಿಕತೆ ಇಲ್ಲ. ದೇಶದಲ್ಲಿ ಕಾಂಗ್ರೆಸ್​ ಪಕ್ಷವೇ ಇಲ್ಲ .ಹೀಗಾಗಿ ನೀವು ಮೊದಲು ಕಾಂಗ್ರೆಸ್​ ಜೋಡೋ ಯಾತ್ರೆ ಮಾಡಿ ಎಂದು ಕಾಲೆಳೆದಿದ್ದಾರೆ .


ದಕ್ಷಿಣದಲ್ಲಿ ಕಾಂಗ್ರೆಸ್​ ಜೋಡೋ ನಡೆಯುತ್ತಿದ್ದರೆ ಉತ್ತರದಲ್ಲಿ ಹಿರಿಯ ನಾಯಕರು ಕಾಂಗ್ರೆಸ್​ ತೊರೆಯುತ್ತಿದ್ದಾರೆ. ದಕ್ಷಿಣದವರು ಯಾತ್ರೆ ಮುಗಿಸಿ ಉತ್ತರ ಭಾರತ ತಲುಪುವಷ್ಟರಲ್ಲಿ ಅಲ್ಲಿ ಕಾಂಗ್ರೆಸ್​ ಪಕ್ಷವೇ ಇರೋದಿಲ್ಲ. ಮುಂದಿನ ದಿನಗಳಲ್ಲಿ ಏಕಾಂಗಿಯಾಗಿ ಪಾದಯಾತ್ರೆ ಮಾಡುವ ಸಂದರ್ಭ ಬರಲೂಬಹುದು .ಮಧ್ಯ ಪ್ರದೇಶ ದಾಟುತ್ತಿದ್ದಂತೆಯೇ ವಿಚಿತ್ರ ಪರಿಸ್ಥಿತಿ ಎದುರಾಗಬಹುದು. ಪಾದಯಾತ್ರೆ ಮೊಟಕುಗೊಳಿಸಿ ನಿಮ್ಮ ಕಾಂಗ್ರೆಸ್ ಪಕ್ಷವನ್ನು ಮೊದಲು ಉಳಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.


ನಾರಾಯಣ ಗುರು ಜಯಂತಿ ಆಚರಣೆಗೆ ದಕ್ಷಿಣ ಕನ್ನಡದಲ್ಲಿ ವಿವಾದ ವಿಚಾರವಾಗಿಯೂ ಇದೇ ವೇಳೆ ಸ್ಪಷ್ಟೀಕರಣ ನೀಡಿದ ಸಚಿವ ಸುನೀಲ್​ ಕುಮಾರ್​, ಮಹಾಪುರುಷರ ಜಯಂತಿ ಆಚರಿಸಲು ಆರು ತಿಂಗಳ ಹಿಂದೆಯೇ ಸರ್ಕಾರ ನಿರ್ಧರಿಸಿತ್ತು. ಕೇವಲ ಬೆಂಗಳೂರು ಕೇಂದ್ರೀಕೃತವಾಗಿ ಯಾವುದೇ ಆಚರಣೆ ನಡೆಯಬಾರದು. ಬೆಂಗಳೂರು ಮಾತ್ರವಲ್ಲ ಪ್ರತಿ ಜಿಲ್ಲೆಯನ್ನೂ ಕೇಂದ್ರೀಕರಿಸುವುದು ನಮ್ಮ ಉದ್ದೇಶವಾಗಿದೆ. ಮಹಾಪುರುಷರು , ದಾರ್ಶನಿಕರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಸಬಾರದು. ಎಲ್ಲಾ ಸಮುದಾಯದವರು ಒಂದೊಂದು ಜಯಂತಿ ಆಚರಿಸಬೇಕು ಎಂದು ಹೇಳಿದ್ದಾರೆ.


ಬೆಂಗಳೂರಿನಲ್ಲಿ ನೆರೆ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲಗೊಂಡಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಸುನೀಲ್​ ಕುಮಾರ್​, ಅಕಾಲಿಕವಾಗಿ ಬಂದ ಮಳೆಯಿಂದಾಗಿ ನೆರೆ ಉಂಟಾಗಿದೆ. ನೂರಿನ್ನೂರು ವರ್ಷಗಳ ಬಳಿಕ ಈ ರೀತಿ ಮಳೆಯಾಗಿದೆ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಏಕಕಾಲದಲ್ಲಿ ಮಳೆ ಸುರಿದರೆ ಪ್ರವಾಹ ಸ್ಥಿತಿ ನಿರ್ಮಾಣವಾಗುವುದು ಸರ್ವೇ ಸಾಮಾನ್ಯ. ನೆರೆಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎನ್ನುವುದು ಜನರ ಅಭಿಪ್ರಾಯವಾಗಿದೆ. ಅದನ್ನು ನಾವು ಗೌರವಿಸ್ತೇವೆ. ರಾಜ್ಯ ಸರ್ಕಾರವೇನು ಕೈಕಟ್ಟಿ ಕುಳಿತಿಲ್ಲ ಎಂದು ಹೇಳಿದರು.

ಇದನ್ನು ಓದಿ : Road Safety Series 2022 : ಇಂದಿನಿಂದ ದಿಗ್ಗಜರ ಕ್ರಿಕೆಟ್; ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಕೆಟ್ ದೇವರು

ಇದನ್ನೂ ಓದಿ : Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?

Minister Sunil Kumar satirized Congress leaders’ Bharat Jodo Yatra

Comments are closed.