ಟ್ಯೂಷನ್‌ಗೆ ಬರ್ತಿದ್ದ ವಿದ್ಯಾರ್ಥಿಯ ಮೇಲೆ 3 ಬಾರಿ ಅತ್ಯಾಚಾರವೆಸಗಿದ ಶಿಕ್ಷಕಿ

ಕ್ಯಾಲಿಪೋರ್ನಿಯಾ : ಗುರು ದೇವೋಭವ ಅಂತಾ. ಭವಿಷ್ಯದ ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಆದ್ರೆ ಇಲ್ಲೋರ್ವ ಶಿಕ್ಷಕಿ ಇಡೀ ಶಿಕ್ಷಕರ ಸಮುದಾಯ ಅಪಚಾರವೆಸಗುವ ಕಾರ್ಯವನ್ನು ಮಾಡಿದ್ದಾಳೆ. ಟ್ಯೂಷನ್‌ಗೆ ಬರುತ್ತಿದ್ದ 14 ವರ್ಷದ ಬಾಲಕನ ಮೇಲೆ ಟ್ಯೂಷನ್‌ ಶಿಕ್ಷಕಿ ಮೂರು ಬಾರಿ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ.

ಅಮೇರಿಕಾದ ಕ್ಯಾಲಿಪೋರ್ನಿಯಾದಲ್ಲಿ ಈ ಘಟನೆ ನಡೆದೆ. ಇಲ್ಲಿನ ಮೌಂಟೇನ್‌ ವ್ಯೂ ಇಂಡಿಪೆಂಡೆಂಟ್‌ ಶಾಲೆಯಲ್ಲಿ ಶಿಕ್ಷಕಯಾಗಿರುವ ಕ್ರಿಸ್ಟಲ್‌ ಜಾಕ್ಸನ್‌ (39 ವರ್ಷ) ಎಂಬಾಕೆಯೇ ವಿದ್ಯಾರ್ಥಿ ಮೇಲೆ ಅತ್ಯಾಚಾರವೆಸಗಿರುವ ಶಿಕ್ಷಕಿ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಕ್ರಿಸ್ಟಲ್‌ ಶಾಲಾ ಅವಧಿಯ ನಂತರ ಮಕ್ಕಳಿಗೆ ಟ್ಯೂಷನ್‌ ಹೇಳಿಕೊಡುತ್ತಿದ್ದಳು. ಟ್ಯೂಷನ್‌ಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಕಣ್ಣು ಹಾಕಿದ್ದ ಕ್ರಿಸ್ಟಲ್‌, ವಿದ್ಯಾರ್ಥಿಯ ಮನವೊಲಿಸಿ ಅತ್ಯಾಚಾರವೆಸಗಿದ್ದಾಳೆ.

ವಿದ್ಯಾರ್ಥಿ ನಡೆದ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆಯ ವೇಳೆಯಲ್ಲಿ ಹಲವು ವಿಚಾರಗಳನ್ನು ಆರೋಪಿ ಶಿಕ್ಷಕಿ ಬಾಯ್ಬಿಟ್ಟಿದ್ದಾಳೆ. ಇದೀಗ ಶಿಕ್ಷಕಿ ವಿರುದ್ದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.