Ration Card: ಅಕ್ರಮ ಪಡಿತರದಾರರಿಗೆ ಬಿಗ್ ಶಾಕ್: ಸದ್ಯದಲ್ಲೇ ಬದಲಾಗಲಿದೆ ರೇಶನ್ ಕಾರ್ಡ್ ಮಾನದಂಡ

ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿಯ ಮಾನದಂಡದಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ. ಇದಕ್ಕಾಗಿ ಸಂಪೂರ್ಣ ಯೋಜನೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಪಡಿತರ ಚೀಟಿಯ ಮಾನದಂಡಗಳನ್ನು ಬದಲಾಯಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಆಹಾರ ಭದ್ರತಾ ಮಾನದಂಡಗಳನ್ನು ಶೀಘ್ರದಲ್ಲೇ ಬದಲಾಯಿಸಲಿದ್ದು, ನಂತರ ಆರ್ಥಿಕವಾಗಿ ಸದೃಢವಾಗಿರುವವರಿಗೆ ಒಂದು ದೇಶ ಒಂದು ಪಡಿತರ ಚೀಟಿ  ಯೋಜನೆಯ ಲಾಭ  ಸಿಗುವುದಿಲ್ಲ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ ಪ್ರಸ್ತುತ ದೇಶದಲ್ಲಿ 80 ಕೋಟಿ ಜನರು  ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಲಾಭವನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಆರ್ಥಿಕವಾಗಿ ಸಮರ್ಥವಾಗಿರುವವರು ಹಲವರಿದ್ದು, ಅವರನ್ನು ಗಮನದಲ್ಲಿಟ್ಟುಕೊಂಡೇ ಮಾನದಂಡವನ್ನು ಬದಲಾಯಿಸಲಾಗುತ್ತಿದೆ.

ಹೊಸ ಮಾನದಂಡಗಳನ್ನು ಅನುಷ್ಠಾನಗೊಳಿಸಿದ ಬಳಿಕ ಅರ್ಹ ವ್ಯಕ್ತಿಗಳಿಗೆ ಮಾತ್ರ ಯೋಜನೆಯ ಲಾಭ ಸಿಗಲಿದ್ದು, ನಿರ್ಗತಿಕರನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

department of food and public distribution will change the standards for ration card

Comments are closed.