Decreasing life Corona : ಕೊರೊನಾದಿಂದ ಇಳಿಕೆಯಾಗುತ್ತೆ ಆಯುಷ್ಯ ! ವಿಶ್ವಕ್ಕೇ ಶಾಕ್ ಕೊಟ್ಟ ಆಕ್ಸ್ ಫರ್ಡ್ ವಿವಿ ವರದಿ

ಲಂಡನ್ : ಕೊರೊನಾ ಹೆಮ್ಮಾರಿಯಿಂದಾಗಿ ವಿಶ್ವದಲ್ಲಿ ಕೋಟ್ಯಾಂತರ ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥ ರಾಗಿದ್ದಾರೆ. ಜನರ ನೆಮ್ಮದಿ, ಅಭಿವೃದ್ದಿ, ಆರ್ಥಿಕತೆಗೆ ಕೊಡಲಿಯೇಟು ಕೊಟ್ಟಿದೆ. ಆದ್ರೀಗ ಆಕ್ಸ್ ಫರ್ಡ್ ವಿವಿ ನೀಡಿರುವ ವರದಿ ಇದೀಗ ವಿಶ್ವಕ್ಕೆ ಶಾಕ್‌ ಕೊಟ್ಟಿದೆ.

ಲಂಡನ್‌ನ ಆಕ್ಸ್ ಫರ್ಡ್ ನ ಲೆವೆರ್ ಹೆಲ್ಮ್ ಸೆಂಟರ್ ಫಾರ್ ಡೆಮಾಗ್ರಾಫಿಕ್ ಸೈನ್ಸ್ ನ ಸಂಶೋಧಕರು ಕೊರೊನಾ ವೈರಸ್‌ ಸೋಂಕಿನ ಬೆನ್ನಲ್ಲೇ ಸಂಶೋಧನೆ ನಡೆಸಿದ್ದಾರೆ. ಪ್ರಮುಖ ವಾಗಿ ಯುರೋಪ್, ಅಮೇರಿಕಾ ಹಾಗೂ ಚಿಲಿ ಸೇರಿ 29 ದೇಶಗಳಲ್ಲಿ ಕೊರೊನಾ ಸೋಂಕಿನ ನಂತರದಲ್ಲಿನ ಮರಣಪ್ರಮಾಣದ ದಾಖಳೆಯ ಮೇಲೆ ಅಧ್ಯಯನ ನಡೆಸಲಾಗಿದೆ. ಈ 29 ದೇಶಗಳಲ್ಲಿ 2022 ರಲ್ಲಿ 2019 ಕ್ಕೆ ಹೋಲಿಸಿದರೆ ಜೀವಿತಾವಧಿಯು ಆರು ತಿಂಗಳಿಗಿಂತಲೂ ಕಡಿಮೆಯಾಗಲಿದೆಯಂತೆ. ಕೊರೊನಾ ಹೆಮ್ಮಾರಿಯಿಂದ ಮನುಷ್ಯನ ಜೀವಿತಾವಧಿ ಕಡಿಮೆಯಾಗಲಿದೆ ಅನ್ನೋದು ಅಧ್ಯಯನದ ವರದಿಯಿಂದ ಬಯಲಾಗಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಕೊರೊನಾ ವೈರಸ್‌ ಸೋಂಕು ಮಹಿಳೆಯರಿಗಿಂತ ಪುರಷರ ಮೇಲೆಯೇ ಹೆಚ್ಚು ನಕರಾತ್ಮಕ ಪರಿಣಾಮವನ್ನು ಉಂಟು ಮಾಡಿದೆ. ಅಧ್ಯಯನ ನಡೆಸಿದ ಬಹುತೇಕ ದೇಶಗಳಲ್ಲಿ ಮಹಿಳೆ ಯರಿಗಿಂತ ಪುರುಷರ ಜೀವಿತಾವಧಿಯಲ್ಲಿ ಹೆಚ್ಚಿನ ಕುಸಿತ ಕಂಡುಬಂದಿದೆ. ಅಮೇರಿಕಾದಲ್ಲಿ ಪುರಷರ ಜೀವಿತಾವಧಿ ಕಳೆದ ಎರಡು ವರ್ಷಕ್ಕೆ ಹೋಲಿಸಿದ್ರೆ 2.2 ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಅಧ್ಯಯನದ ವರದಿ ಹೇಳಿದೆ.

ಕೊರೊನಾ ಅನ್ನೋ ಮೂರಕ್ಷರದ ಮಹಾಮಾರಿ ವಿಶ್ವದಲ್ಲಿ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಹಲವು ಶಾಕಿಂಗ್‌ ಮಾಹಿತಿಯನ್ನು ಕೊಟ್ಟಿದ್ದು, ಇದೀಗ ಕೊರೊನಾ ಹೆಮ್ಮಾರಿ ಜನರ ಜೀವಿತಾವಧಿಗೆ ಕೊಡಲಿಯೇಟು ಕೊಟ್ಟಿದೆ.

ಇದನ್ನೂ ಓದಿ : ಪೊಲೀಸಪ್ಪನ ಕಾಮಪುರಾಣ : ಅಪ್ರಾಪ್ತ ಯುವತಿಗೆ ಅಬಾರ್ಷನ್‌ ಮಾಡಿಸಿದ್ದ ಪೊಲೀಸ್‌ ಶಿವರಾಜ್‌ ವಿರುದ್ದ ದೂರು

ಇದನ್ನೂ ಓದಿ : ಭಾರೀ ಮಳೆಯಿಂದ ನದಿಯಲ್ಲಿ ಮುಳುಗಿದ ಬಸ್‌ : 22 ಮಂದಿ ನಾಪತ್ತೆ, 6 ಮಂದಿಯ ರಕ್ಷಣೆ

( Decreasing life from Corona! Shocked Oxford V V Report to the World )

Comments are closed.