Inzamam-ul-Haq : ಪಾಕಿಸ್ತಾನ ಕ್ರಿಕೆಟ್​ನ ಮಾಜಿ ನಾಯಕ ಇಂಜಮಾಮ್​​​ ಉಲ್​ ಹಕ್​ಗೆ ಹೃದಯಾಘಾತ

ನವದೆಹಲಿ : ಪಾಕಿಸ್ತಾನದ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್​​​ ಉಲ್​ ಹಕ್​ಗೆ ಹೃದಯಾಘಾತವಾಗಿದ್ದು ಸೋಮವಾರ ಆಂಜಿಯೋಪ್ಲಾಸ್ಟ್​ ಸರ್ಜರಿಗೆ ಒಳಗಾಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಕಳೆದ ಮೂರು ದಿನಗಳಿಂದ ಇಂಜಮಾಮ್​ ಎದೆ ನೋವಿನಿಂದ ಬಳಲುತ್ತಿದ್ದರು. ಪ್ರಾಥಮಿಕ ಪರೀಕ್ಷೆಗಳಲ್ಲಿ ಇಂಜಮಾಮ್​ಗೆ ಯಾವುದೇ ತೊಂದರೆ ಇದ್ದದ್ದು ಕಂಡು ಬಂದಿರಲಿಲ್ಲ. ಆದರೆ ಸೋಮವಾರ ನಡೆಸಲಾದ ಪರೀಕ್ಷೆಯಲ್ಲಿ ಇಂಜಮಾಮ್​​ಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Moeen Ali Retires : ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಮೋಯಿನ್‌ ಆಲಿ

ಕೂಡಲೇ ಇಂಜಮಾಮ್​ರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಇಂಜಮಾಮ್​ ಆರೋಗ್ಯ ಸದ್ಯ ಸುಧಾರಿಸಿದೆ. ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ.
51 ವರ್ಷದ ಇಂಜಮಾಮ್​​ ಆಡಿರುವ 375 ಪಂದ್ಯಗಳಲ್ಲಿ 11,701 ರನ್​ಗಳನ್ನು ಗಳಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ರನ್​ ಗಳಿಸಿದ ಪಾಕಿಸ್ತಾನದ ಕ್ರಿಕೆಟಿಗ ಎಂಬ ಕೀರ್ತಿಯನ್ನು ಹೊಂದಿದ್ದಾರೆ.

ಯೂನಿಸ್‌ ಖಾನ್‌ ಹಾಗೂ ಜಾವೆದ್‌ ಮಿಯಾಂದದ್‌ ಬಳಿಕ ಟೆಸ್ಟ್​ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೂರನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನೂ ಇಂಜಮಾಮ್‌ ಉಲ್‌ ಹಕ್‌(8829) ಹೊಂದಿದ್ದಾರೆ.

ಇದನ್ನೂ ಓದಿ: Virat Kohli – RCB : IPL ಬೆನ್ನಲ್ಲೇ ಆರ್‌ಸಿಬಿ ನಾಯಕತ್ವಕ್ಕೆ ಕೊಯ್ಲಿ ರಾಜೀನಾಮೆ

(Former Pakistan cricketer Inzamam ul Haq has a heart attack)

Comments are closed.