Bus Drowned River : ಭಾರೀ ಮಳೆಯಿಂದ ನದಿಯಲ್ಲಿ ಮುಳುಗಿದ ಬಸ್‌ : 22 ಮಂದಿ ನಾಪತ್ತೆ, 6 ಮಂದಿಯ ರಕ್ಷಣೆ

ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ ಮೇಲೆಲ್ಲಾ ನೀರು ಹರಿಯುತ್ತಿದೆ. ನೀರು ತುಂಬಿದ್ದ ಸೇತುವೆಯ ಮೇಲೆ ಬಸ್‌ ಚಲಾಯಿಸಿದ ಹಿನ್ನೆಲೆಯಲ್ಲೀಗ ಬಸ್ಸು ನದಿಯಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ೨೨ ಮಂದಿ ನೀರುಪಾಲಾಗಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ.

ಮಹಾರಾಷ್ಟ್ರದ ಉಮರಖೇಡದ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸ್ಸಿನಲ್ಲಿದ್ದ 22 ಮಂದಿ ನದಿಯಲ್ಲಿ ಮುಳುಗಿದ ಬಸ್ಸಿನಲ್ಲಿ ಸಿಲುಕಿದ್ದು, ಈ ಪೈಕಿ ಆರು ಮಂದಿಯನ್ನು ಈಗಾಗಲೇ ರಕ್ಷಣೆಯನ್ನು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು, ಎನ್‌ಡಿಆರ್‌ಎಫ್‌ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿದ್ದು ರಕ್ಷಣಾ ಕಾರ್ಯವನ್ನು ನಡೆಸುತ್ತಿದ್ದಾರೆ.

ಸೇತುವೆ ಹಾಗೂ ರಸ್ತೆಯಲ್ಲಿ ನೀರು ತುಂಬಿದ್ದರೂ ಕೂಡ ಬಸ್ಸಿನ ಚಾಲಕ ನಿರ್ಲಕ್ಷ್ಯವನ್ನು ವಹಿಸಿ ಬಸ್ಸನ್ನು ಚಲಾಯಿಸಿದ್ದಾನೆ. ಸ್ಥಳೀಯರು ಬಸ್ಸನ್ನು ಚಲಾಯಿಸದಂತೆ ಮನವಿ ಮಾಡಿದ್ದಾರೆ. ಆದ್ರೂ ಚಾಲಕರ ಮಳೆಯ ನೀರಿನಲ್ಲಿ ಬಸ್ಸನ್ನು ಚಲಾಯಿಸಿದ್ದೇ ದುರಂತಕ್ಕೆ ಕಾರಣವಾಗಿದೆ. ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲೀಗ ಚಾಲಕನ ವಿರುದ್ದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇನ್ನು ಬಸ್ಸಿನಲ್ಲಿ ಒಟ್ಟು ಎಷ್ಟು ಮಂದಿ ಇದ್ದರೂ ಅನ್ನೋ ಕುರಿತು ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.

(Heavy rains in Maharashtra, bus was drowned river driver’s negligence near Umrakheda. 22 were lost and 6 were saved )

Comments are closed.