World population: ಪಿಲಿಪೈನ್ಸ್ ನ ಮುದ್ದಾದ ಈ ಹೆಣ್ಣುಮಗು ವಿಶ್ವದ 8 ಶತಕೋಟಿ ವ್ಯಕ್ತಿ; ಇಲ್ಲಿದೆ ನೋಡಿ ಸ್ಪೆಷಲ್ ಬೇಬಿ ಫೋಟೋ

ಪಿಲಿಪೈನ್ಸ್: ಇಂದಿಗೆ ಜಾಗತಿಕ ಜನಸಂಖ್ಯೆ (World population) 800 ಕೋಟಿ ದಾಟಿದ್ದು, ಮಾನವನ ಅಭಿವೃದ್ಧಿಯಲ್ಲಿ ಈ ದಿನ ಒಂದು ಮೈಲಿಗಲ್ಲೆಂದು ಪರಿಗಣಿಸಲಾಗಿದೆ. ಪಿಲಿಪೈನ್ಸ್ ನ ಮನಿಲಾದ ಟೊಂಡೊದಲ್ಲಿ ಇಂದು ಜನಿಸಿದ ಹೆಣ್ಣುಮಗು ವಿಶ್ವದ 8 ಶತಕೋಟಿ ವ್ಯಕ್ತಿಯಾಗಿ ಪರಿಗಣಿಸಲಾಗಿದೆ. ವಿನಿಸ್ ಮಾಬನ್ಸಾಗ್ ಎಂಬ ಹೆಸರಿನ ಈ ಮಗು ಡಾ ಜೋಸ್ ಫ್ಯಾಬೆಲ್ಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ 1.29ಕ್ಕೆ(ಸ್ಥಳೀಯ ಸಮಯ) ಜನಿಸಿದೆ. ಪಿಲಿಪೈನ್ಸ್ ನ ಜನಸಂಖ್ಯೆ ಮತ್ತು ಅಭಿವೃದ್ಧಿ ಆಯೋಗವು ತಾಯಿ ಮತ್ತು ಮಗುವಿನ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದೆ.

ಇದನ್ನೂ ಓದಿ: Kotak Mahindra Bank : ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಉತ್ತರಾಧಿಕಾರತ್ವ : ಮಗನನ್ನು ದೂರ ಇಟ್ಟ ಉದಯ ಕೋಟಕ್‌

ಜಾಗತಿಕ ಜನಸಂಖ್ಯೆಗೆ ಒಂದು ಶತಕೋಟಿ (100 ಕೋಟಿ) ಜನರನ್ನು ಸೇರಿಸಲು 12 ವರ್ಷಗಳು ಬೇಕಾಯಿತು. ಆದರೆ ಮುಂದಿನ ವರ್ಷ ಭಾರತ ದೇಶವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಗುರುತಿಸಿಕೊಳ್ಳಲಿದೆ.

ಮನಿಲಾದ ಟೊಂಡೊದಲ್ಲಿ ಜನಿಸಿದ ಹೆಣ್ಣುಮಗುವನ್ನು ಸಾಂಕೇತಿಕವಾಗಿ ವಿಶ್ವದ 800 ಕೋಟಿ ವ್ಯಕ್ತಿ ಎಂದು ಗುರುತಿಸಿದ್ದು ಜಗತ್ತು ಮತ್ತೊಂದು ಜನಸಂಖ್ಯೆಯ ಮೈಲಿಗಲ್ಲನ್ನು ತಲುಪಿದೆ ಎಂದು ಪಿಲಿಪೈನ್ಸ್ ಜನಸಂಖ್ಯೆ ಮತ್ತು ಅಭಿವೃದ್ಧಿ ಆಯೋಗವು ಪೇಸ್ ಬುಕ್ ನಲ್ಲಿ ಬರೆದುಕೊಂಡಿದೆ. ಇಂದು (ನ.15) ಡಾ ಜೋಸ್ ಫ್ಯಾಬೆಲ್ಲಾ ಮೆಮೊರಿಯಲ್ ಆಸ್ಪತ್ರೆಯಲ್ಲಿ ದಾದಿಯರು ಸೇರಿದಂತೆ ಜನಸಂಖ್ಯೆ ಮತ್ತು ಅಭಿವೃದ್ಧಿ ಆಯೋಗದ ಪ್ರತಿನಿಧಿಗಳು ದಾಖಲೆಯ ಮಗುವನ್ನು ಸ್ವಾಗತಿಸಿದರು ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಿದೆ.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) ಟ್ವೀಟ್ ಮಾಡಿದ್ದು, 8 ಶತಕೋಟಿ ಭರವಸೆಗಳು, 8 ಶತಕೋಟಿ ಕನಸುಗಳು, 8 ಶತಕೋಟಿ ಸಾಧ್ಯತೆಗಳು. ನಮ್ಮ ಗ್ರಹವು ಈಗ 8 ಶತಕೋಟಿ ಜನರಿಗೆ ನೆಲೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: Kieron Pollard Mumbai Indians : ಮುಂಬೈ ಇಂಡಿಯನ್ಸ್ ಬಿಡಲೊಪ್ಪದ ಪೊಲ್ಲಾರ್ಡ್’ಗೆ ಅಂಬಾನಿ ಭರ್ಜರಿ ಗಿಫ್ಟ್

ಕಳೆದ ಶತಮಾನದಲ್ಲಿ ವಿಶ್ವದ ಜನಸಂಖ್ಯೆಯು ಬಹಳ ವೇಗವಾಗಿ ಬೆಳೆದಿದೆ. ಕ್ರಮೇಣ ಬೆಳವಣಿಗೆಯ ನಿಧಾನಗತಿಯ ಹೊರತಾಗಿಯೂ ಜಾಗತಿಕ ಜನಸಂಖ್ಯೆಯು 2037ರ ಸುಮಾರಿಗೆ 9 ಶತಕೋಟಿ ಮತ್ತು 2018ರ ವೇಳೆಗೆ 10 ಶತಕೋಟಿ ಮೀರುತ್ತದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

World population: This cute girl from the Philippines is the 8 billionth person in the world Here is a special baby photo

Comments are closed.