Kieron Pollard Mumbai Indians : ಮುಂಬೈ ಇಂಡಿಯನ್ಸ್ ಬಿಡಲೊಪ್ಪದ ಪೊಲ್ಲಾರ್ಡ್’ಗೆ ಅಂಬಾನಿ ಭರ್ಜರಿ ಗಿಫ್ಟ್

ಮುಂಬೈ : Kieron Pollard Mumbai Indians : ಕೆರಿಬಿಯನ್ ದೈತ್ಯ ಕೀರನ್ ಪೊಲ್ಲಾರ್ಡ್ (Kieron Pollard) ಐಪಿಎಲ್’ಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಘೋಷಿಸುತ್ತಿದ್ದಂತೆ ಪೊಲ್ಲಾರ್ಡ್ ಅವರಿಗೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಬ್ಯಾಟಿಂಗ್ ಕೋಚ್ ಸ್ಥಾನ ಸಿಕ್ಕಿದೆ. 35 ವರ್ಷದ ಕೀರನ್ ಪೊಲ್ಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡದಿಂದ ರಿಲೀಸ್ ಮಾಡಿತ್ತು. ಆದರೆ ಮುಂಬೈ ತಂಡ ತಮ್ಮನ್ನು ತಂಡದಿಂದ ಕೈ ಬಿಡುತ್ತಿದ್ದಂತೆ ಪೊಲ್ಲಾರ್ಡ್ ಅಚ್ಚರಿಯ ನಿವೃತ್ತಿ ಘೋಷಿಸಿದ್ರು. ಮತ್ತೊಂದು ಅಚ್ಚರಿ ಎಂಬಂತೆ ನಿವೃತ್ತಿ ಘೋಷಿಸಿದ ಪೊಲ್ಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.

ವೆಸ್ಟ್ ಇಂಡೀಸ್ ಆಲ್ರೌಂಡರ್ ಪೊಲ್ಲಾರ್ಡ್ 2010ರಿಂದ 2021ರವರೆಗೆ 13 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಐಪಿಎಲ್ ಪದಾರ್ಪಣೆಯಿಂದ ಹಿಡಿದು ನಿವೃತ್ತಿಯವರಗೆ ಪೊಲ್ಲಾರ್ಡ್ ಒಂದೇ ತಂಡದ ಪರ ಆಡಿದ್ದು ವಿಶೇಷ. ಮುಂಬೈ ಇಂಡಿಯನ್ಸ್ ತಂಡ 2013, 2015, 2017, 2019 ಮತ್ತು 2020ರಲ್ಲಿ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪೊಲ್ಲಾರ್ಡ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದ ಪಂದ್ಯಗಳಲ್ಲಿ ಮೈಚಳಿ ಬಿಟ್ಟು ಆಡಿದ್ದು ಪೊಲ್ಲಾರ್ಡ್ ಅವರ ವಿಶೇಷತೆ.

ನಿವೃತ್ತಿಯ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಪೊಲ್ಲಾರ್ಡ್ “ನಾನು ಇನ್ನೂ ಕೆಲ ವರ್ಷಗಳ ಕಾಲ ವೃತ್ತಿಪರ ಕ್ರಿಕೆಟ್ ಆಡಲಿದ್ದೇನೆ. ಹೀಗಾಗಿ ಐಪಿಎಲ್’ಗೆ ನಿವೃತ್ತಿ ಹೇಳುವ ನಿರ್ಧಾರ ಸುಲಭದ್ದಾಗಿರಲಿಲ್ಲ. ಆದರೆ ಮುಂಬೈ ಇಂಡಿಯನ್ಸ್ ಎಂಬ ಅದ್ಭುತ ಫ್ರಾಂಚೈಸಿ ಪರಿವರ್ತನಾ ಸಮಯದಲ್ಲಿದೆ. ಹೀಗಾಗಿ ನಾನು ಮುಂಬೈ ಇಂಡಿಯನ್ಸ್ ಪರ ಆಡಲು ಸಾಧ್ಯವಾಗದಿದ್ದರೆ, ಮುಂಬೈ ವಿರುದ್ಧ ಆಡುವುದನ್ನು ನಾನು ಬಯಸುವುದಿಲ್ಲ. Once an MI always an MI. 13 ವರ್ಷಗಳಿಂದ ಐಪಿಎಲ್’ನ ಅತ್ಯಂತ ದೊಡ್ಡ ಮತ್ತು ಯಶಸ್ವಿ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದು ಹೆಮ್ಮೆ ಮತ್ತು ಗೌರವ”, ಎಂದು ಪೊಲ್ಲಾರ್ಡ್ ಹೇಳಿದ್ದಾರೆ.

ಕೆಳ ಕ್ರಮಾಂಕದಲ್ಲಿ ಸ್ಫೋಟಕ ಆಟಕ್ಕೆ ಹೆಸರಾಗಿದ್ದ ಪೊಲ್ಲಾರ್ಡ್ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ತಂದು ಕೊಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ಪರ 13 ವರ್ಷಗಳಲ್ಲಿ ಒಟ್ಟು 189 ಪಂದ್ಯಗಳನ್ನಾಡಿರುವ ಕೀರನ್ ಪೊಲ್ಲಾರ್ಡ್ 147.32ರ ಸ್ಟ್ರೈಕ್’ರೇಟ್’ನಲ್ಲಿ 16 ಅರ್ಧಶತಕಗಳ ಸಹಿತ 3412 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, 69 ವಿಕೆಟ್’ಗಳನ್ನೂ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ಮೊದಲ ಬಾರಿ ಚಾಪಿಯನ್ ಆದ 2013ರ ಟೂರ್ನಿಯಲ್ಲಿ ಪೊಲ್ಲಾರ್ಡ್ 420 ರನ್ ಮತ್ತು 10 ವಿಕೆಟ್’ಗಳನ್ನು ಪಡೆದಿದ್ದರು. 2015ರಲ್ಲಿ ಮುಂಬೈ ತಂಡ 2ನೇ ಬಾರಿ ಐಪಿಎಲ್ ಚಾಂಪಿಯನ್ ಆದಾಗ ಪೊಲ್ಲಾರ್ಡ್ 419 ರನ್ ಗಳಿಸಿದ್ದರು. 2017ರಲ್ಲಿ 385 ರನ್, 2019ರಲ್ಲಿ 279 ರನ್ ಹಾಗೂ 2020ರಲ್ಲಿ 268 ರನ್ ಕಲೆ ಹಾಕುವ ಮೂಲಕ ಮುಂಬೈ ಇಂಡಿಯನ್ಸ್ ಐದು ಬಾರಿ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.

ಇದನ್ನೂ ಓದಿ : ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್ : ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ

ಇದನ್ನೂ ಓದಿ : Double century in VH Trophy: ಸಿಡಿಲಬ್ಬರದ ದ್ವಿಶತಕ ಬಾರಿಸಿದ ಸೌರಷ್ಟ್ರ ಆಟಗಾರ ಸಮರ್ಥ್ ವ್ಯಾಸ್

ಇದನ್ನೂ ಓದಿ : Ben Stokes : ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್ ಮೇಲೆ ಐಪಿಎಲ್ ಫ್ರಾಂಚೈಸಿಗಳ ಕಣ್ಣು, ಯಾರ ಪಾಲಾಗ್ತಾರೆ ಇಂಗ್ಲೆಂಡ್ ಆಲ್ರೌಂಡರ್?

ಕೀರನ್ ಪೊಲ್ಲಾರ್ಡ್ ಅವರ ಐಪಿಎಲ್ ಸಾಧನೆ

189 ಪಂದ್ಯ, 3412 ರನ್, 147.32 ಸ್ಟ್ರೈಕ್’ರೇಟ್, 28.67 ಸರಾಸರಿ, 16 ಅರ್ಧಶತಕ, 87* ಬೆಸ್ಟ್, 69 ವಿಕೆಟ್, 4/44 ಬೆಸ್ಟ್ ಬೌಲಿಂಗ್

Kieron Pollard Retirement for IPL 2023 Big Gift for Mumbai Indians

Comments are closed.