Resignation: ಮುಂದುವರಿದ ರಾಜೀನಾಮೆ ಪರ್ವ: ಹುದ್ದೆ ತೊರೆದ ಮೆಟಾ, ವಾಟ್ಸಪ್ ನ ಮತ್ತಿಬ್ಬರು ಮುಖ್ಯಸ್ಥರು

ನವದೆಹಲಿ: Resignation: ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರ ಸರಣಿ ರಾಜೀನಾಮೆ ಮುಂದುವರೆದಿದೆ. ಫೇಸ್ ಬುಕ್, ವಾಟ್ಸಪ್ ನ ಮಾತೃಸಂಸ್ಥೆ ಮೆಟಾ ನವೆಂಬರ್ 9ರಂದು ಸಾಮೂಹಿಕ ಉದ್ಯೋಗ ಕಡಿತ ಮಾಡಲಿದೆ ಎಂಬ ವರದಿಗಳ ಬೆನ್ನಲ್ಲೇ ವಾಟ್ಸಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಹಾಗೂ ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ ವಾಲ್ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: World population: ಪಿಲಿಪೈನ್ಸ್ ನ ಮುದ್ದಾದ ಈ ಹೆಣ್ಣುಮಗು ವಿಶ್ವದ 8 ಶತಕೋಟಿ ವ್ಯಕ್ತಿ; ಇಲ್ಲಿದೆ ನೋಡಿ ಸ್ಪೆಷಲ್ ಬೇಬಿ ಫೋಟೋ

ಕಳೆದ 2 ವಾರಗಳ ಹಿಂದೆ ಮೆಟಾ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ಅಭಿಜಿತ್ ಬೋಸ್ ಹಾಗೂ ರಾಜೀವ್ ಅಗರ್ ವಾಲ್ ಇಬ್ಬರೂ ರಾಜೀನಾಮೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸೆ. 22ರಂದು ವಾಟ್ಸಪ್ ಇಂಡಿಯಾದ ಪೇಮೆಂಟ್ ಬ್ಯುಸಿನೆಸ್ ವಿಭಾಗದ ಮುಖ್ಯಸ್ಥ ಮನೇಶ್ ಮಹಾತ್ಮೆ 18 ತಿಂಗಳಿನ ಸೇವೆಯ ಬಳಿಕ ಹುದ್ದೆ ತೊರೆದಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರ ಸರಣಿ ರಾಜೀನಾಮೆ ಇದೀಗ ಸಂಚಲನ ಮೂಡಿಸಿದೆ.

ಈ ಇಬ್ಬರ ರಾಜೀನಾಮೆ ವಿಚಾರ ಮೆಟಾ ತನ್ನ ಅಧಿಕೃತ ಹೇಳಿಕೆ ಮೂಲಕ ದೃಢಪಡಿಸಿದೆ. ವಾಟ್ಸಪ್ ಇಂಡಿಯಾದ ಮೊದಲ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಅಭಿಜಿತ್ ಬೋಸ್ ಅವರ ಅನನ್ಯ ಕೊಡುಗೆಗಳಿಗಾಗಿ ವಾಟ್ಸಪ್ ಮುಖ್ಯಸ್ಥ ವಿಲ್ ಕ್ಯಾತ್ ಕಾರ್ಟ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಅವರು, ‘ಅಭಿಜಿತ್ ಬೋಸ್ ಅವರ ಉದ್ಯಮಶೀಲ ಪ್ರಯತ್ನದಿಂದಾಗಿ ನಮ್ಮ ತಂಡವು ಲಕ್ಷಾಂತರ ಜನ ಹಾಗೂ ವ್ಯವಹಾರಗಳಿಗೆ ಪ್ರಯೋಜನಕಾರಿಯಾದ ಹೊಸ ಸೇವೆಗಳನ್ನು ನೀಡಲು ಸಾಧ್ಯವಾಗಿದೆ. ದೇಶಕ್ಕಾಗಿ ವಾಟ್ಸಪ್ ಇನ್ನೂ ಹೆಚ್ಚಿನ ಸೇವೆಗಳನ್ನು ನೀಡಬಹುದು. ಭಾರತದ ಡಿಜಿಟಲ್ ರೂಪಾಂತರವನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ ವಾಲ್ ರಾಜೀನಾಮೆ ಕುರಿತು ಪ್ರಸ್ತಾಪಿಸಿರುವ ಕ್ಯಾತ್ ಕಾರ್ಟ್, ‘ರಾಜೀವ್ ಅಗರ್ ವಾಲ್ ಅವರಿಗೆ ಮತ್ತೊಂದು ಅವಕಾಶ ಒದಗಿ ಬಂದಿದ್ದು, ಅದರಲ್ಲಿ ಮುಂದುವರಿಯುವ ಸಲುವಾಗಿ ಮೆಟಾದಲ್ಲಿನ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಅವರ ಮುಂದಿನ ಪ್ರಯತ್ನಕ್ಕೆ ಶುಭ ಹಾರೈಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Kieron Pollard Mumbai Indians : ಮುಂಬೈ ಇಂಡಿಯನ್ಸ್ ಬಿಡಲೊಪ್ಪದ ಪೊಲ್ಲಾರ್ಡ್’ಗೆ ಅಂಬಾನಿ ಭರ್ಜರಿ ಗಿಫ್ಟ್

ಭಾರತದಲ್ಲಿನ ವಾಟ್ಸಪ್ ಸಾರ್ವಜನಿಕ ನೀತಿಯ ನಿರ್ದೇಶಕ ಶಿವನಾಥ್ ತುಕ್ರಾಲ್ ಅವರನ್ನು ಭಾರತದ ಎಲ್ಲಾ ಮೆಟಾ ಬ್ರ್ಯಾಂಡ್ ಗಳಿಗೆ ಸಾರ್ವಜನಿಕ ನೀತಿಯ ನಿರ್ದೇಶಕರಾಗಿ ನೇಮಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೆ ಮೆಟಾ ಜಗತ್ತಿನಾದ್ಯಂತ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿತ್ತು.

ಈ ತಿಂಗಳ ಆರಂಭದಲ್ಲಿ ಭಾರತದ ಮೆಟಾ ಮುಖ್ಯಸ್ಥ ಅಜಿತ್ ಮೋಹನ್ ಹುದ್ದೆ ತೊರೆದಿದ್ದರು. ಬಳಿಕ ಅವರು ಸ್ನ್ಯಾಪ್ ಚಾಟ್ ಸಂಸ್ಥೆಗೆ ಸೇರ್ಪಡೆಗೊಳ್ಳಲಿರುವುದಾಗಿ ತಿಳಿದುಬಂದಿತ್ತು.

Resignation: WhatsApp India head Abhijit Bose and Director Public Policy Meta India Rajiv Aggarwal resigns

Comments are closed.