World’s dirtiest man: ವಿಶ್ವದ ಅತ್ಯಂತ ಕೊಳಕು ವ್ಯಕ್ತಿ 94ನೇ ವಯಸ್ಸಿಗೆ ನಿಧನ

ಇರಾನ್​ : World’s dirtiest man : ಬರೋಬ್ಬರಿ ಅರ್ಧ ಶತಮಾನಕ್ಕೂ ಅಧಿಕ ಕಾಲ ಸ್ನಾನ ಮಾಡದ ಕಾರಣಕ್ಕೆ ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದು ದಾಖಲೆ ಸೃಷ್ಟಿಸಿದ್ದ ಇರಾನಿನ ಸನ್ಯಾಸಿ ತಮ್ಮ 94ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಮೌ ಹಾಜಿ ಎಂದು ಪ್ರೀತಿಯಿಂದ ಕರೆಯಿಸಿಕೊಳ್ತಿದ್ದ ಈ ಕೊಳಕು ವ್ಯಕ್ತಿಯು ದಕ್ಷಿಣ ಪ್ರಾಂತ್ಯದ ಫಾರ್ಸ್​ನ ದೇಜ್ಗಾ ಗ್ರಾಮದಲ್ಲಿ ಭಾನುವಾರ ನಿಧನರಾಗಿದ್ದಾರೆ ಎಂದು ಇರ್ನಾ ಸುದ್ದಿ ಸಂಸ್ಥೆಯು ವರದಿ ಮಾಡಿದೆ.


ಹಾಜಿ ಕಳೆದ ಅರವತ್ತು ವರ್ಷಗಳಿಂದ ನೀರು ಅಥವಾ ಯಾವುದೇ ಸಾಬೂನುಗಳನ್ನು ಬಳಕೆ ಮಾಡಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯುವಕನಾಗಿದ್ದ ವೇಳೆಯಲ್ಲಿ ಅಮೌ ಹಾಜಿ ಭಾವನಾತ್ಮಕವಾಗಿ ಆಘಾತಕ್ಕೊಳಗಾದ ಬಳಿಕ ತಮ್ಮ ದೇಹಕ್ಕೆ ನೀರನ್ನು ತಾಗಿಸಲೇಬಾರದು ಎಂಬ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. 2014ರಲ್ಲಿ ಅಮೌ ಹಾಜಿ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಶುಚಿತ್ವದಿಂದ ಇದ್ದರೆ ಅನಾರೋಗ್ಯ ಬರುತ್ತೆ ಎಂಬುದು ಅಮೌ ಹಾಜಿ ನಂಬಿಕೆಯಾಗಿತ್ತು. ಅಮೌ ಹಾಜಿ ಒಂದೇ ಬಾರಿಗೆ ಹಲವಾರು ಸಿಗರೇಟ್​ಗಳನ್ನು ಸೇದುತ್ತಿರುವ ಫೊಟೋಗಳನ್ನು ವೈರಲ್​ ಆಗಿದ್ದವು.


ಆದರೆ ಕೆಲವು ತಿಂಗಳ ಹಿಂದೆ ಇಲ್ಲಿನ ಗ್ರಾಮಸ್ಥರು ಮೊಟ್ಟ ಮೊದಲ ಬಾರಿಗೆ ಸ್ನಾನ ಮಾಡಲು ಅಮೌ ಹಾಜಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಅಮೌ ಹಾಜಿ ಮರಣವನ್ನು ಒಪ್ಪಿರುವ ಹಿನ್ನೆಲೆಯಲ್ಲಿ ವಿಶ್ವದ ಅತ್ಯಂತ ಕೊಳಕು ವ್ಯಕ್ತಿ ಎಂಬ ಸ್ಥಾನವು ಭಾರತೀಯ ವ್ಯಕ್ತಿಗೆ ಸಿಗುವ ಸಾಧ್ಯತೆಯಿದೆ. ಹೌದು..! 2009ರಲ್ಲಿ ಪವಿತ್ರ ನಗರವಾದ ವಾರಣಾಸಿಯ ಹೊರಭಾಗದ ಗ್ರಾಮದ ನಿವಾಸಿಯಾದ ಕೈಲಾಶ್​ ಕಲಾವ್​ ಸಿಂಗ್​, ರಾಷ್ಟ್ರವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು 30 ವರ್ಷಗಳಿಂದ ಅಧಿಕ ಕಾಲ ಸ್ನಾನ ಮಾಡದೇ ಇದ್ದಾರೆ. ಕಲಾವೋ ಸ್ನಾನವನ್ನು ಮಾಡೋದಿಲ್ಲ. ಪ್ರತಿದಿನ ಸಂಜೆ ಗ್ರಾಮಸ್ಥರು ಸೇರುವ ಸಂದರ್ಭದಲ್ಲಿ ದೀಪೋತ್ಸವವನ್ನು ಮಾಡುತ್ತಾನೆ . ಗಾಂಜಾವನ್ನು ಸೇದುತ್ತಾನೆ ಹಾಗೂ ಶಿವನನ್ನು ಪ್ರಾರ್ಥಿಸುತ್ತಾ ಒಂದೇ ಕಾಲಿನ ಮೇಲೆ ನಿಲ್ಲುತ್ತಾನೆ .

ಇದನ್ನು ಓದಿ : new britain pm rishi sunak :ಬ್ರಿಟನ್​ ಪ್ರಧಾನಿ ಪಟ್ಟಕ್ಕೇರಿದ ರಿಷಿ ಸುನಕ್​ರ ಮುಂದಿದೆ ಈ ಸವಾಲುಗಳು

ಇದನ್ನೂ ಓದಿ : Shampoos recalled: ಗ್ರಾಹಕರೇ ಎಚ್ಚರ..ಈ ಶಾಂಪೂಗಳನ್ನು ಬಳಸಿದ್ರೆ ಬರುತ್ತಂತೆ ಕ್ಯಾನ್ಸರ್..!

‘World’s dirtiest man’ dies in Iran at 94 a few months after first wash

Comments are closed.