UP Heartbreaking incident: ರಕ್ತದ ಮಡುವಿನಲ್ಲಿ ಬಾಲಕಿಯ ನರಳಾಟ; ಅಲ್ಲಿನ ಜನರು ಮಾಡಿದ್ದೇನು ಗೊತ್ತಾ

ಉತ್ತರ ಪ್ರದೇಶ:UP heartbreaking incident: ಯಾರಿಗೋ ಏನೋ ಅಪಘಾತಗಳಾಗೋದು.. ಸಹಾಯಕ್ಕೆ ಬೇಡುತ್ತಿದ್ರೂ ಜನ ನೋಡಿಯೂ ನೋಡದಂತೆ ಹೋಗೋದು.. ಇನ್ನೂ ಕೆಲವರು ವಿಡಿಯೋ ಮಾಡುತ್ತಾ ನಿಂತಿರೋದು .. ಇವೆಲ್ಲಾ ನಮ್ಮ ದೇಶದಲ್ಲಿ ಹೊಸತೇನಲ್ಲ.. ಜನರ ಮಾನವೀಯತೆಯನ್ನೇ ಪ್ರಶ್ನೆ ಮಾಡುವ ಮತ್ತೊಂದು ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕನೌಜ್ ಎಂಬಲ್ಲಿನ ಅತಿಥಿಗೃಹದ ಹಿಂಭಾಗ 13 ವರ್ಷದ ಬಾಲಕಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯ ತಲೆ ಸೇರಿದಂತೆ ದೇಹದ ಹಲವೆಡೆ ತೀವ್ರ ಗಾಯಗಳಾಗಿತ್ತು. ಅರೆಬರೆ ಎಚ್ಚರದಲ್ಲಿದ್ದ ಬಾಲಕಿ ಸಹಾಯಕ್ಕಾಗಿ ಪರಿ ಪರಿ ಅಂಗಲಾಚುತ್ತಿದ್ದರೂ ಅಲ್ಲಿ ಸುತ್ತಲೂ ನೆರೆದಿದ್ದ ಜನರಲ್ಲಿ ಒಬ್ಬರೂ ಸಹಾಯಕ್ಕೆ ಮುಂದಾಗಲಿಲ್ಲ. ಬದಲಾಗಿ ತಮ್ಮ ಕೈಯಲ್ಲಿದ್ದ ಮೊಬೈಲ್‍ನಿಂದ ಬಾಲಕಿಯ ವಿಡಿಯೋ ಮಾಡುತ್ತಾ ನಿಂತಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೂ ಸಾಗಿಸದೇ, ಒಂದು ಹನಿ ನೀರೂ ಕುಡಿಸದೇ ಜನ ವಿಡಿಯೋ ಮಾಡುತ್ತಾ ನಿಂತಿದ್ದು ಅಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಬಾಲಕಿಯ ಸುತ್ತಮುತ್ತ ಸುಮಾರು ಏಳೆಂಟು ಮಂದಿ ಪುರುಷರು ನೆರೆದಿದ್ದರು ಎನ್ನಲಾಗಿದೆ. ಅದರಲ್ಲಿ ಒಬ್ಬಾತ ಪೊಲೀಸರಿಗೆ ಫೋನ್ ಮಾಡುವಂತೆ ಸೂಚನೆ ನೀಡಿದ್ದಾನೆ. ಇನ್ನೊಬ್ಬ ನನ್ನ ಬಳಿ ಪೊಲೀಸರ ನಂಬರ್ ಇದೆ ಎಂದು ಹೇಳುತ್ತಾನೆ. ಇಷ್ಟೆಲ್ಲಾ ನಡೆಯುತ್ತಿದ್ರೂ ಅವರಲ್ಲಿ ಯಾರೂ ಒಬ್ಬರು ಆ ಬಾಲಕಿಯ ಮೇಲೆ ಕರುಣೆ ತೋರುವುದಿಲ್ಲ. ಕೊನೆಗೂ ಸ್ಥಳೀಯ ಪೊಲೀಸ್ ಔಟ್‍ಪೋಸ್ಟ್ ಇನ್‍ಚಾರ್ಜ್ ಮನೋಜ್ ಪಾಂಡೆ ಬಂದು ಬಾಲಕಿಯನ್ನು ತೋಳಿನಲ್ಲಿ ಎತ್ತಿಕೊಂಡು ಆಟೋದ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಮಾಹಿತಿ ನೀಡಿದ್ದಾರೆ.

ಬಾಲಕಿಯ ಕುಟುಂಬಸ್ಥರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ, ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಪೊಲೀಸರು ಈ ಆರೋಪವನ್ನು ತಳ್ಳಿಹಾಕಿದ್ದು, ಸದ್ಯಕ್ಕೆ ಯಾವುದೇ ಸ್ಪಷ್ಟನೆ ನೀಡಲು ಸಾಧ್ಯವಿಲ್ಲ ಎಂದು ಗುರ್ಸಹೈಗಂಜ್ ಪೊಲೀಸ್ ಠಾಣಾ ಉಸ್ತುವಾರಿ ಮನೋಜ್ ಪಾಂಡೆ ತಿಳಿಸಿದ್ದಾರೆ.

ಘಟನೆ ನಡೆದ ಅತಿಥಿ ಗೃಹದ ಬಳಿಯ ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಸಿಸಿ ಕ್ಯಾಮೆರಾದಲ್ಲಿ ಬಾಲಕಿ ಅಪರಿಚಿತ ವ್ಯಕ್ತಿಯ ಜೊತೆ ಮಾತನಾಡುತ್ತಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ ಬಾಲಕಿ ಕಳೆದ ಭಾನುವಾರದಂದು ಮಾರುಕಟ್ಟೆಗೆಂದು ಹೋದವಳು ಮನೆಗೆ ಹಿಂತಿರುಗಿಲ್ಲ ಎನ್ನಲಾಗಿದ್ದು, ಮನೆಮಂದಿ ಬಾಲಕಿಯ ಹುಡುಕಾಟದಲ್ಲಿದ್ದರು ಎಂದು ತಿಳಿದುಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಥ ಸಂದರ್ಭದಲ್ಲೂ ಬಾಲಕಿಯ ಮೇಲೆ ಕರುಣೆ ತೋರದೇ ವಿಡಿಯೋ ಮಾಡುತ್ತಿದ್ದ ಜನರ ಮೇಲೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Shampoos recalled: ಗ್ರಾಹಕರೇ ಎಚ್ಚರ..ಈ ಶಾಂಪೂಗಳನ್ನು ಬಳಸಿದ್ರೆ ಬರುತ್ತಂತೆ ಕ್ಯಾನ್ಸರ್..!

ಇದನ್ನೂ ಓದಿ: World’s dirtiest man: ವಿಶ್ವದ ಅತ್ಯಂತ ಕೊಳಕು ವ್ಯಕ್ತಿ 94ನೇ ವಯಸ್ಸಿಗೆ ನಿಧನ

13 year old girl found injured, bleeding seeking help to bystanders in Up

Comments are closed.