ಶಿಮುಲ್‌ನಲ್ಲಿ ಭರ್ಜರಿ ನೇಮಕಾತಿ: 194 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

Shimul Recruitment 2025: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಶಿಮುಲ್‌ ಶಿವಮೊಗ್ಗ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆಯ ಪ್ರಕಾರ ಒಟ್ಟು 194 ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು ಡಿಸೆಂಬರ್‌ 14 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಶಿಮುಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ಅರ್ಹತಾ ಮಾನದಂಡಗಳೇನು ಎಂದು ತಿಳಿಯೋಣ.

ಹುದ್ದೆಯ ಹೆಸರು ಮತ್ತು ವಿವರ

ಸಹಾಯಕ ವ್ಯವಸ್ಥಾಪಕರು(ಎಹೆಚ್/ಎಐ) – 17 ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು(ಆಡಳಿತ) – 01 ಹುದ್ದೆ
ಸಹಾಯಕ ವ್ಯವಸ್ಥಾಪಕರು (ಎಫ್‌ಅಂಡ್ ಎಫ್) – 03 ಹುದ್ದೆಗಳು
ಎಂಐಎಸ್ / ಸಿಸ್ಟಂ ಆಫೀಸರ್ – 01 ಹುದ್ದೆ
ಮಾರುಕಟ್ಟೆ ಅಧಿಕಾರಿ – 02 ಹುದ್ದೆಗಳು
ತಾಂತ್ರಿಕ ಅಧಿಕಾರಿ (ಅಭಿಯಂತರ) – 02 ಹುದ್ದೆಗಳು
ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – 02 ಹುದ್ದೆಗಳು
ತಾಂತ್ರಿಕ ಅಧಿಕಾರಿ(ಡಿಜಿ) – 14 ಹುದ್ದೆಗಳು
ಕೆಮಿಸ್ಟ್ ದರ್ಜೆ-1 – 04 ಹುದ್ದೆಗಳು
ವಿಸ್ತರಣಾಧಿಕಾರಿ ದರ್ಜೆ 3 – 17 ಹುದ್ದೆಗಳು
ಆಡಳಿತ ಸಹಾಯಕ ದರ್ಜೆ 2 – 17 ಹುದ್ದೆಗಳು
ಲೆಕ್ಕ ಸಹಾಯಕ ದರ್ಜೆ 2- 12 ಹುದ್ದೆಗಳು
ಮಾರುಕಟ್ಟೆ ಸಹಾಯಕ ದರ್ಜೆ 2 – 10 ಹುದ್ದೆಗಳು
ಕೆಮಿಸ್ಟ್ ದರ್ಜೆ 2 – 28 ಹುದ್ದೆಗಳು
ಮಾರುಕಟ್ಟೆ ಸಹಾಯಕ ದರ್ಜೆ 2 – 10 ಹುದ್ದೆಗಳು
ಕೆಮಿಸ್ಟ್ ದರ್ಜೆ 2 – 28 ಹುದ್ದೆಗಳು
ಕಿರಿಯ ಸಿಸ್ಟಂ ಆಪರೇಟರ್ – 13 ಹುದ್ದೆಗಳು
ಶೀಘ್ರಲಿಪಿಗಾರ ದರ್ಜೆ 2 -1 ಹುದ್ದೆ
ಕಿರಿಯ ತಾಂತ್ರಿಕರು – 50 ಹುದ್ದೆಗಳು

ವಿದ್ಯಾರ್ಹತೆ ಹಾಗೂ ವೇತನ

ಶಿಮುಲ್‌ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಸಾರವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಹುದ್ದೆಗಳಿಗೆ ಅನುಸಾರವಾಗಿ ನಿಗದಿಪಡಿಸಲಾದ ವಿದ್ಯಾರ್ಹತೆ ಹಾಗೂ ವೇತನದ ಬಗ್ಗೆ ಅರಿಯಲು ಇಲ್ಲಿ ಕ್ಲಿಕ್ಕಿಸಿ.

ವಯೋಮಿತಿ

ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಹಾಗೂ ಗರಿಷ್ಠ ವಯಸ್ಸು 40 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿಸಡಿಲಿಕೆಯಿರುತ್ತದೆ.

ಅರ್ಜಿ ಶುಲ್ಕ

ಪ.ಜಾತಿ ಪ್ರವರ್ಗ-ಎ/ಪ.ಜಾತಿ ಪ್ರವರ್ಗ-ಬಿ/ಪ.ಜಾತಿ ಪ್ರವರ್ಗ-ಸಿ/ಪ.ಪಂಗಡ ಮತ್ತು ಪ್ರವರ್ಗ1
ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ – 500 ರೂ.
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – 1000 ರೂ.

ಇದನ್ನೂ ಓದಿ: Aviation Jobs: 30000 ಜನರಿಗೆ ಉದ್ಯೋಗಾವಕಾಶ! ಈ ವೃತ್ತಿಯವರಿಗೆ ಬಂಪ‌ರ್

ಅರ್ಜಿ ಸಲ್ಲಿಕೆ ಹೇಗೆ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ಶಿಮುಲ್‌ ನ ಅಧಿಕೃತ ವೆಬ್‌ಸೈಟ್‌ shimul.coop ಗೆ ಭೇಟಿ ನೀಡಿ.

ನಂತರ ಮುಖಪುಟದಲ್ಲಿ ನೀಡಲಾದ ಶಿಮುಲ್‌ ರಿಕ್ರೂಟ್‌ಮೆಂಟ್‌ 2025 ಮೇಲೆ ಕ್ಲಿಕ್ಕಿಸಿ.

ಬಳಿಕ ನ್ಯೂ ರೆಜಿಸ್ಟ್ರೇಷನ್‌ ಮೇಲೆ ಕ್ಲಿಕ್ಕಿಸಿ. ಅಲ್ಲಿ ಕೇಳಲಾದ ಮಾಹಿತಿಯನ್ನು ನೀಡಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.

ಮತ್ತೊಮ್ಮೆ ಲಾಗಿನ್ ಆಗಿ ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ. ದಾಖಲೆಗಳನ್ನು ಅಪ್ಲೋಡ್‌ ಮಾಡಿ.

ಆಮೇಲೆ ಅರ್ಜಿ ಶುಲ್ಕ ಪಾವತಿಸಿ. ನಂತರ ಮತ್ತೊಮ್ಮೆ ಅರ್ಜಿ ನಮೂನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.

ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್ಔಟ್‌ ತೆಗೆದುಕೊಳ್ಳಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories