ಬೆಂಗಳೂರು ಮೆಟ್ರೋ ನೇಮಕಾತಿ 2023 : ಪದವೀಧರರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (Bangalore Metro Rail Corporation Pvt) ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.‌

ಬೆಂಗಳೂರು ಮೆಟ್ರೋ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಇಲಾಖೆ ಹೆಸರು : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ
ಹುದ್ದೆಗಳ ಸಂಖ್ಯೆ : 207 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು
ಪೋಸ್ಟ್ ಹೆಸರು : ಸ್ಟೇಷನ್‌ ಕಂಟ್ರೋಲ್‌/ಟ್ರೈನ್‌ ಆಪರೇಟರ್‌, ಸೆಕ್ಷನ್‌ ಇಂಜಿನಿಯರ್‌ ಹಾಗೂ ಮೇಂಟೇನರ್ಸ್

ವಿದ್ಯಾರ್ಹತೆ ವಿವರ :

  • ಸೆಕ್ಷನ್‌ ಇಂಜಿನಿಯರ್‌ (ಸಿಸ್ಟಮ್ಸ್‌) : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಎಂಜಿನಿಯರಿಂಗ್‌ ಪದವಿ, ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಅಥವಾ ಎಲೆಕ್ಟ್ರಾನಿಕ್‌ ಮತ್ತು ಕಮ್ಯುನಿಕೇಶನ್‌ ಇಂಜಿನಿಯರಿಂಗ್‌ ಅಥವಾ ಇನ್ಸ್ಟ್ರುಮೆಂಟೇಶನ್‌ ಮತ್ತು ಕಂಟ್ರೋಲ್‌ ಇಂಜಿನಿಯರಿಂಗ್‌ ಅಥವಾ ಮೆಕ್ಯಾನಿಕಲ್‌ ಅಥವಾ ಟೆಲಿಕಮ್ಯುನಿಕೇಶನ್‌ ಅಥವಾ ಅಪ್ಲೈಡ್‌ ಎಲೆಕ್ಟ್ರಾನಿಕ್ಸ್‌ ಮತ್ತು ಇನ್ಸ್ಟ್ರುಮೆಂಟೃಶನ್‌ ಅಥವಾ ಕಂಪ್ಯೂಟರ್‌ ಸಾಯನ್ಸ್‌ ಅಥವಾ ಎಂಜಿನಿಯರಂಗ್‌ ಪದವಿಗೆ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಸೆಕ್ಷನ್‌ ಇಂಜಿನಿಯರ್‌ (ಸಿವಿಲ್) : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಸಿವಿಲ್‌ ಇಂಜಿನಿಯರಿಂಗ್‌ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು
  • ಮೇಂಟೇನರ್ (ಸಿಸ್ಟಮ್ಸ್‌) : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಮೆಟ್ರಿಕ್ಯುಲೇಷನ್‌ ಜೊತೆಗೆ ಯಾವುದೇ ಇಂಜಿನಿಯರಿಂಗ್‌ ಟ್ರೇಡ್‌ನಲ್ಲಿ ಎರಡು ವರ್ಷಗಳ ಐಟಿಐ : ಎಲೆಕ್ಟ್ರಿಷಿಯನ್‌ ಅಥವಾ ಇನ್ಸ್ಟ್ರುಮೆಂಟ್‌ ಮೆಕ್ಯಾನಿಕ್‌ ಅಥವಾ ಮೆಕ್ಯಾನಿಕ್‌ ಇಂಡಸ್ಟ್ರಿಯಲ್‌ ಎಲೆಕ್ಟ್ರಾನಿಕ್ಸ್‌ ಅಥವಾ ಇನ್‌ ಫಾರ್ಮೇಶನ್‌ ಟೆಕ್ನಾಲಾಜಿ ಮತ್ತು ಎಲೆಕ್ಟ್ರಾನಿಕ್ಸ್‌ ಸಿಸ್ಟಮ್‌ ಮೆಂಟೆನನ್ಸ್‌ ಅಥವಾ ಮೆಕ್‌. ಕಮುನಿಕೇಶನ್‌ ಇಕ್ಯೂಪ್ಮೇಂಟ ಮೆಂಟೇನರ್ಸ್‌ ಅಥವಾ ರೆಫ್ರಿಜಿರೇಶನ್‌ ಮತ್ತು ಎಸಿ ಮೆಕ್ಯಾನಿಕ್ಸ್‌ ಅಥವಾ ಮೆಕಾಟ್ರಾನಿಕ್ಸ್‌ ಅಥವಾ ಐಟಿಐ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು.‌
  • ಮೇಂಟೇನರ್ (ಸಿವಿಲ್)‌ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಮೆಟ್ರಿಕ್ಯುಲೇಷನ್‌ ಜೊತೆಗೆ ಯಾವುದೇ ನಿರ್ದಿಷ್ಟ ಇಂಜಿನಿಯರಿಂಗ್‌ ಟ್ರೇಡ್‌ನಲ್ಲಿ ಎರಡು ವರ್ಷಗಳ ಐಟಿಐಯಲ್ಲಿ ಮ್ಯಾಸನ್ರಿ ಅಥವಾ ಕಾರ್ಪೆಂಟ್ರಿ ಅಥವಾ ಬಿಲ್ಡಿಂಗ್‌ ಅಥವಾ ಫಿಟ್ಟರ್‌ ಅಥವಾ ವೆಲ್ಡರ್‌ ಅಥವಾ ಐಟಿಐ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು.‌
  • ಸ್ಟೇಷನ್‌ ಕಂಟ್ರೋಲ್‌/ಟ್ರೈನ್‌ ಆಪರೇಟರ್‌ : ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಮೆಟ್ರಿಕ್ಯುಲೇಷನ್‌ ಜೊತೆಗೆ ಯಾವುದೇ ಬ್ಯಾಂಚ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಎಲೆಕ್ಟ್ರಿಕಲ್‌ನಲ್ಲಿ ಇಂಜಿನಿಯರಿಂಗ್‌ ಅಥವಾ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಿಕಲ್‌ ಪವರ್‌ ಎಂಜಿನಿಯರಿಂಗ್‌ ಟೆಲಿಕಮ್ಯುನಿಕೇಶನ್ಸ್‌ ಅಥವಾ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ಅಥವಾ ಎಲೆಕ್ಟ್ರಿಕಲ್‌ ಪವರ್‌ ಸಿಸ್ಟಮ್ಸ್‌ ಅಥವಾ ಇಂಡಸ್ಟ್ರಿಯಲ್‌ ಎಲೆಕ್ಟ್ರಾನಿಕ್ಸ್‌ ಅಥವಾ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಅಥವಾ ಮೂರು ವರ್ಷಗಳ ಡಿಪ್ಲೋಮಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು.‌

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ ಸಂಬಳದ ವಿವರ :
ಸ್ಟೇಷನ್‌ ಕಂಟ್ರೋಲ್‌/ಟ್ರೈನ್‌ ಆಪರೇಟರ್‌ : ರೂ. 35000 ರಿಂದ ರೂ. 82660
ಸೆಕ್ಷನ್‌ ಇಂಜಿನಿಯರ್‌ : ರೂ. 40000 ರಿಂದ ರೂ. 94500
ಮೇಂಟೇನರ್ಸ್ : ರೂ. 25000 ರಿಂದ ರೂ. 59060

ಪರೀಕ್ಷಾ ಶುಲ್ಕ :
ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ : ರೂ. 590
ಪ್ರವರ್ಗ-1 ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ -3ಬಿ : ರೂ.1180

ಆಯ್ಕೆ ಪ್ರಕ್ರಿಯೆ :

  • ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುವುದು. ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗಾಗಿ ಮತ್ತು ಕನ್ನಡ ಪರೀಕ್ಷೆಗೆ ಕರೆಯಲಾಗುವುದು. ದಾಖಲಾತಿ ಮತ್ತು ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ನಂತರ ವೈದ್ಯಕೀಯ ಫಿಟ್‌ನೆಸ್‌ ಪರೀಕ್ಷೆ ಮಾಡಲಾಗುವುದು.
  • ಲಿಖಿತ ಪರೀಕ್ಷೆಯಲ್ಲು ನಕಾರಾತ್ಮಕ ಅಂಕಗಳಿರುತ್ತದೆ.
  • ಲಿಖಿತ ಪರೀಕ್ಷೆಯ ಪಠ್ಯಕ್ರಮವು ಸಾಮಾನ್ಯವಾಗಿ ಹುದ್ದೆಗಳಿಗೆ ಸೂಚಿಸಲಾದ ಶೈಕ್ಷಣಿಕ ಮಾನದಂಡಗಳು ಅರ್ಹತೆಗಳಿಗೆ ಅನುಗುಣವಾಗಿರುತ್ತದೆ. ಪ್ರಶ್ನೆ ಪತ್ರಿಕೆಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ.

ಪ್ರಮುಖ ದಿನಾಂಕಗಳು :
ಆನ್‌ಲೈನ್‌ ಅಪ್ಲಿಕೇಶನ್‌ ಪ್ರಾರಂಭ ದಿನಾಂಕ : 24 ಮಾರ್ಚ್‌ 2023
ಆನ್‌ಲೈನ್‌ ಅಪ್ಲಿಕೇಶನ್‌ ಕೊನೆಯ ದಿನಾಂಕ : 27 ಏಪ್ರಿಲ್‌ 2023
ಪರೀಕ್ಷಾ ಶುಲ್ಕವನ್ನು ಪಾವತಿಸಲು ಪ್ರಾರಂಭ ದಿನಾಂಕ : 24 ಮಾರ್ಚ್‌ 2023
ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 27 ಏಪ್ರಿಲ್‌ 2023

ಇದನ್ನೂ ಓದಿ : UPSC ನೇಮಕಾತಿ 2023: 146 ಹುದ್ದೆಗಳಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

Bangalore Metro Rail Corporation Pvt : Bangalore Metro Recruitment 2023 : Job Vacancy for Graduates, Apply Now

Comments are closed.