ಬ್ಯಾಂಕ್ ಆಫ್ ಬರೋಡಾದಲ್ಲಿ ಪದವೀಧರರಿಗೆ ಸುವರ್ಣಾವಕಾಶ; ಪದವೀಧರರಿಗೆ ಸುವರ್ಣಾವಕಾಶ

Bank Of Baroda recruitment 2026: ಬ್ಯಾಂಕ್ ಆಫ್ ಬರೋಡಾ (BoB) ತನ್ನ ಮಾಹಿತಿ ತಂತ್ರಜ್ಞಾನ (IT) ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 23 ಐಟಿ ವೃತ್ತಿಪರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

  • ಅರ್ಜಿ ಸಲ್ಲಿಕೆ ಆರಂಭ: ಜನವರಿ 30, 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 19, 2026.
  • ಶುಲ್ಕ ಪಾವತಿಸಲು ಕೊನೆಯ ದಿನ: ಫೆಬ್ರವರಿ 19, 2026.

ಹುದ್ದೆಗಳ ವಿವರ:

ಸೀನಿಯರ್ ಕ್ಲೌಡ್ ಇಂಜಿನಿಯರ್, ಎಐ ಇಂಜಿನಿಯರ್, ಯುಐ/ಯುಎಕ್ಸ್ ಡಿಸೈನರ್, ಅಪ್ಲಿಕೇಶನ್ ಆರ್ಕಿಟೆಕ್ಟ್ ಸೇರಿದಂತೆ ಒಟ್ಟು 23 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅರ್ಹತೆ ಮತ್ತು ವಯೋಮಿತಿ:

  • ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್/ಐಟಿ/ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ BE/B.Tech/ME/M.Tech ಅಥವಾ MCA ಪದವಿ ಹೊಂದಿರಬೇಕು.
  • ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಕನಿಷ್ಠ 28 ವರ್ಷ ಮತ್ತು ಗರಿಷ್ಠ 40 ವರ್ಷಗಳ ಒಳಗಿರಬೇಕು (ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ಇರಲಿದೆ).

ಅರ್ಜಿ ಶುಲ್ಕ:

  • ಸಾಮಾನ್ಯ / OBC / EWS ಅಭ್ಯರ್ಥಿಗಳು: ₹850.
  • SC / ST ಅಭ್ಯರ್ಥಿಗಳು: ₹175.

ಆಯ್ಕೆ ಪ್ರಕ್ರಿಯೆ:

  1. ಅರ್ಜಿಗಳ ಪರಿಶೀಲನೆ (Scrutiny).
  2. ಆನ್‌ಲೈನ್ ಪರೀಕ್ಷೆ.
  3. ಸೈಕೋಮೆಟ್ರಿಕ್ ಟೆಸ್ಟ್.
  4. ವೈಯಕ್ತಿಕ ಸಂದರ್ಶನ.

    ವಾಹನ ಸವಾರರಿಗೆ ಬಿಗ್​ ರಿಲೀಫ್​: ಫಾಸ್ಟ್​ಟ್ಯಾಗ್​ KYC ನವೀಕರಣ ನಿಯಮಾವಳಿಗಳಲ್ಲಿ ಬದಲಾವಣೆ
  • ನೇಮಕಾತಿ ಅವಧಿ: ಆರಂಭದಲ್ಲಿ 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಇದನ್ನು 10 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿರುತ್ತದೆ.
  • ಸಿಬಿಲ್ ಸ್ಕೋರ್: ಅಭ್ಯರ್ಥಿಗಳು ಕನಿಷ್ಠ 680 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ (CIBIL) ಸ್ಕೋರ್ ಹೊಂದಿರಬೇಕು. ಸಾಲ ಸುಸ್ತಿದಾರರು ಈ ಹುದ್ದೆಗೆ ಅರ್ಹರಲ್ಲ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ನ ‘Careers’ ವಿಭಾಗಕ್ಕೆ ಭೇಟಿ ನೀಡಬಹುದು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories