ವಾಹನ ಸವಾರರಿಗೆ ಬಿಗ್ ರಿಲೀಫ್: ಫಾಸ್ಟ್ಟ್ಯಾಗ್ KYC ನವೀಕರಣ ನಿಯಮಾವಳಿಗಳಲ್ಲಿ ಬದಲಾವಣೆ
ದೇಶವ್ಯಾಪಿ ಜಾರಿಯಲ್ಲಿರುವ ಫಾಸ್ಟ್ಟ್ಯಾಗ್ ವ್ಯವಸ್ಥೆಯಿಂದಾಗಿ ಟೋಲ್ ಸುಂಕ ಪಾವತಿಯು ಅತ್ಯಂತ ಪಾರದರ್ಶಕ ಮಾತ್ರವಲ್ಲದೇ ವೇಗವನ್ನೂ ಪಡೆದುಕೊಂಡಿದೆ. ಇದೀಗ ವಾಹನ ಸವಾರರಿಗೆ ಫಾಸ್ಟ್ಟ್ಯಾಗ್ ಕೆವೈಸಿ ನಿಯಮಾವಳಿ ವಿಚಾರದಲ್ಲಿ ಬಿಗ್ ರಿಲೀಫ್ ದೊರಕಿದೆ. ವಾಹನ ಸವಾರರ ಬಹುದಿನಗಳ ಬೇಡಿಕೆಯಾಗಿದ್ದ ಕೆವೈಸಿ ನವೀಕರಣ ವಿಚಾರದಲ್ಲಿ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಈ ಮೊದಲೆಲ್ಲ ಪ್ರತಿ ವರ್ಷ ವಿವಿಧ ದಾಖಲೆಗಳನ್ನು ಸಲ್ಲಿಸಿ ಪ್ರತಿ ವರ್ಷ KYC ನವೀಕರಣ ಮಾಡುವುದು ಪ್ರತಿಯೊಬ್ಬ ವಾಹನ ಸವಾರರಿಗೂ ಕಡ್ಡಾಯವಾಗಿತ್ತು. ಆದರೆ ಈಗ ಈ ನಿಯಮಾವಳಿಗಳಲ್ಲಿ ಸರಳತೆಯನ್ನು ತಂದಿರುವ ಕೇಂದ್ರ ಸರ್ಕಾರವು ಇನ್ಮುಂದೆ ಪ್ರತಿ ವರ್ಷ KYC ನವೀಕರಣ ಮಾಡುವ ಅಗತ್ಯ ಇಲ್ಲ ಎಂದು ಹೇಳಿದೆ.
ಅಲ್ಲದೇ ಹೊಸ ಬಾರಿ ವಾಹನ ಖರೀದಿ ಮಾಡಿದ ಸಂದರ್ಭದಲ್ಲಿ ಅಥವಾ ಮೊಟ್ಟ ಮೊದಲ ಬಾರಿಗೆ ಫಾಸ್ಟ್ಟ್ಯಾಗ್ಗೆ ನೋಂದಣಿಯಾದ ಸಂದರ್ಭದಲ್ಲಿ ಒಮ್ಮೆ KYC ಸಲ್ಲಿಸಿದರೆ ಮತ್ತೊಮ್ಮೆ ನವೀಕರಣ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ತಿಳಿಸಿದೆ. ಇದರಿಂದ ವಾಹನ ಸವಾರರಿಗೆ ಫಾಸ್ಟ್ಟ್ಯಾಗ್ ಬಳಕೆ ಮತ್ತಷ್ಟು ಸರಳೀಕೃತಗೊಂಡಂತೆ ಆಗಿದೆ.



