free electricity in Punjab : ಪಂಜಾಬ್ ಜನತೆಗೆ ಗುಡ್​ನ್ಯೂಸ್​ ನೀಡಿದ ಆಪ್​ ಸರ್ಕಾರ

free electricity in Punjab : ಪಂಜಾಬ್​ನ ಆಮ್​ ಆದ್ಮಿ ಸರ್ಕಾರವು ಜುಲೈ 1ರಿಂದ ಪ್ರತಿ ಮನೆಗೆ 300 ಯೂನಿಟ್​ ವಿದ್ಯುತ್​​ನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿದೆ. ಪಂಜಾಬ್​ನ ಮುಖ್ಯಮಂಯ್ರಿ ಭಗವಂತ್​ ಮಾನ್ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಆಪ್​ ಸರ್ಕಾರವು ಜುಲೈ 1 ರಿಂದ300 ಯುನಿಟ್​ ಉಚಿತ ವಿದ್ಯುತ್​ ಸೌಕರ್ಯವನ್ನು ಜನರಿಗೆ ನೀಡಲಿದೆ ಎಂದು ಜಾಹೀರಾತುಗಳನ್ನು ಪ್ರಕಟಿಸಲಾಗಿದೆ.


ಜೂನ್ 2021 ರಲ್ಲಿ ಪಂಜಾಬ್‌ನ ಮತದಾರರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ ಮೊದಲ ಭರವಸೆ 300 ಯುನಿಟ್‌ಗಳ ಉಚಿತ ವಿದ್ಯುತ್ ಆಗಿತ್ತು. ಈ ಭರವಸೆಯು ಅವರ ಸರ್ಕಾರವು ಹೊಸ ದೆಹಲಿಯಲ್ಲಿ ಜಾರಿಗೊಳಿಸಿದ ಯೋಜನೆಯಂತೆಯೇ ಇತ್ತು. ಇದಕ್ಕೂ ಮೊದಲು, ಪಂಜಾಬ್‌ನ ಗ್ರಾಹಕರು ದೇಶದಲ್ಲೇ ಅತ್ಯಂತ ದುಬಾರಿ ವಿದ್ಯುತ್ ಪಡೆಯುತ್ತಿದ್ದರು.


ಪಂಜಾಬ್​ ಸರ್ಕಾರವು ಬಹುತೇಕ ವಿಚಾರಗಳಲ್ಲಿ ದೆಹಲಿ ಸರ್ಕಾರದ ಮಾದರಿಯನ್ನೇ ಅನುಸರಿಸುತ್ತಿದೆ. ಇದರನ್ವಯ ಪಂಜಾಬ್​ನಲ್ಲಿ ಪ್ರತಿ ತಿಂಗಳು 300 ಯೂನಿಟ್​ಗಳವರೆಗೆ ಉಚಿತ ವಿದ್ಯುತ್​ ಸೌಲಭ್ಯ ಸಿಗಲಿದೆ. ಇದಕ್ಕಿಂತ ಹೆಚ್ಚು ಯೂನಿಟ್​ ಬಳಕೆ ಮಾಡುವವರು ಹಣ ಪಾವತಿಸಬೇಕು.


ಈ ಯೋಜನೆಯು ಮಾರ್ಚ್‌ನಲ್ಲಿ ಅಧಿಕಾರಕ್ಕೆ ಆಯ್ಕೆಯಾದ ನಂತರ ಆಪ್​ ಸರ್ಕಾರ ಮಾಡಿದ ಅತಿದೊಡ್ಡ ಘೋಷಣೆಯಾಗಿದೆ.ರಾಜ್ಯದ 73.80 ಲಕ್ಷ ಗ್ರಾಹಕರಲ್ಲಿ ಸುಮಾರು 62.25 ಲಕ್ಷ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ.


ನವದೆಹಲಿಯಲ್ಲಿ ಇತ್ತೀಚೆಗೆ ಕೇಜ್ರಿವಾಲ್ ಮತ್ತು ಪಂಜಾಬ್ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಈ ವಿಚಾರವನ್ನು ಮೊದಲು ರಾಜ್ಯ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಅಜೆಂಡಾ ನಿಗದಿಯಾಗಿರುವಾಗಲೇ ಕೊನೆ ಗಳಿಗೆಯಲ್ಲಿ ಏಪ್ರಿಲ್ 16ರಂದು ಯೋಜನೆಯನ್ನು ಘೋಷಿಸಲು ನಿರ್ಧರಿಸಲಾಯಿತು.

ಇದನ್ನು ಓದಿ : ರಾಜೀನಾಮೆಗೂ ಮುನ್ನ ಈಶ್ವರಪ್ಪ ಮುಂದಿಟ್ಟಿದ್ರು ವಿಚಿತ್ರ ಬೇಡಿಕೆ: ಇಲ್ಲಿದೆ Resign Inside Story

AAP announces 300 units of free electricity in Punjab from July 1

Comments are closed.