DC Office Bengaluru recruitment 2023: ಪುರಸಭೆ, ನಗರಸಭೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

(DC Office Bengaluru recruitment 2023) ಜಿಲ್ಲಾಧಿಕಾರಿ ಕಚೇರಿ ಬೆಂಗಳೂರು ನೇಮಕಾತಿಯ ಅಧಿಕೃತ ಅಧಿಸೂಚನೆಯಂತೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶಗಳನ್ನು ಬಳಸಿಕೊಳ್ಳಬಹುದು. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ, ಹುದ್ದೆಗಳ ವಿವರ ಹಾಗೂ ಇನ್ನೀತರ ಮಾಹಿತಿಗಳನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಸಂಪೂರ್ಣ ಹುದ್ದೆಯ ವಿವರ;
ಸಂಸ್ಥೆಯ ಹೆಸರು: ಜಿಲ್ಲಾಧಿಕಾರಿಗಳ ಕಚೇರಿ ಬೆಂಗಳೂರು
ಒಟ್ಟು ಹುದ್ದೆಗಳ ಸಂಖ್ಯೆ: 105 ಹುದ್ದೆ
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಅರ್ಬನ್ ಲೋಡರ್ ಮತ್ತು ಕ್ಲೀನರ್ಸ್

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
*.ಲೋಡರ್‌ ಹುದ್ದೆಗೆ ಒಟ್ಟು ಖಾಲಿ ಇರುವ ಹುದ್ದೆ: 83 ಹುದ್ದೆಗಳು
ಹೆಬ್ಬಗೋಡಿ ಪುರಸಭೆಯಲ್ಲಿ : 16 ಹುದ್ದೆ
ಮಾದನಾಯಕನಹಳ್ಳಿ ನಗರಸಭೆಯಲ್ಲಿ :16 ಹುದ್ದೆ
ಆನೇಕಲ್‌ ಪುರಸಭೆಯಲ್ಲಿ : 3 ಹುದ್ದೆ
ಅತ್ತಿಬೆಲೆ ಪುರಸಭೆಯಲ್ಲಿ : 8 ಹುದ್ದೆ
ಬೊಮ್ಮಸಂದ್ರ ಪುರಸಭೆಯಲ್ಲಿ : 8 ಹುದ್ದೆ
ಚಂದಾಪುರ ಪುರಸಭೆಯಲ್ಲಿ : 8 ಹುದ್ದೆ
ಜಿಗಣಿಯಲ್ಲಿ 8 ಹುದ್ದೆ
ಹುಣಸಮಾರಣಹಳ್ಳಿಯಲ್ಲಿ 8 ಹುದ್ದೆ
ಚಿಕ್ಕಬಾಣಾವರ ದಲ್ಲಿ 8 ಹುದ್ದೆ

*.ಕ್ಲೀನರ್‌ ಹುದ್ದೆಗೆ ಒಟ್ಟು ಖಾಲಿ ಇರುವ ಹುದ್ದೆ: 22 ಹುದ್ದೆಗಳು
ಹೆಬ್ಬಗೋಡಿಯಲ್ಲಿ 4 ಹುದ್ದೆ
ಮಾದನಾಯಕನಹಳ್ಳಿಯಲ್ಲಿ 4 ಹುದ್ದೆ
ಆನೇಕಲ್‌ ನಲ್ಲಿ 4 ಹುದ್ದೆ
ಅತ್ತಿಬೆಲೆಯಲ್ಲಿ 4 ಹುದ್ದೆ
ಬೊಮ್ಮಸಂದ್ರದಲ್ಲಿ 2 ಹುದ್ದೆ
ಚಂದಾಪುರದಲ್ಲಿ 2 ಹುದ್ದೆ
ಜಿಗಣಿಯಲ್ಲಿ 2 ಹುದ್ದೆ
ಹುಣಸಮಾರಣಹಳ್ಳಿಯಲ್ಲಿ 2 ಹುದ್ದೆ
ಚಿಕ್ಕಬಾಣಾವರ ದಲ್ಲಿ 2 ಹುದ್ದೆ

ವಿದ್ಯಾರ್ಹತೆ;
ಡಿಸಿ ಕಚೇರಿ ಬೆಂಗಳೂರು ನೆಂಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸಿ ಕಚೇರಿ ಬೆಂಗಳೂರು ನಗರ ನಿಯಮಗಳ ಪ್ರಕಾರ ವಿದ್ಯಾರ್ಹತೆಯನ್ನು ಹೊಂದಿರಬೇಕು

ವಯೋಮಿತಿ ವಿವರ;
ಡಿಸಿ ಕಚೇರಿ ಬೆಂಗಳೂರು ನೆಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು ಹಾಗೂ ಗರಿಷ್ಠ 50 ವರ್ಷವನ್ನು ಮೀರಿರಬಾರದು.

ವೇತನ ಶ್ರೇಣಿ: 17,000- 28,950 ರೂ.

ಆಯ್ಕೆ ಪ್ರಕ್ರಿಯೆ:
ಕರ್ನಾಟಕ ಪುರಸಭೆಗಳ ನಿಯಮಗಳು 2021 ರ ಪ್ರಕಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಜಿಲ್ಲಾಧಿಕಾರಿ ಕಚೇರಿ ಬೆಂಗಳೂರು ನೇಮಕಾತಿ ಅಧಿಸೂಚನೆಯ ಪ್ರಕಾರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮಾರ್ಚ್‌ 15, 2023 ರಂದು ಅಥವಾ ಮೊದಲು ಈ ಕೆಳಗಿನ ವಿಳಾಸಗಳಿಗೆ ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ ಕಳುಹಿಸಬೇಕಾಗುತ್ತದೆ.

ವಿಳಾಸ: ಯೋಜನಾ ನಿರ್ದೇಶಕರು
ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ
4 ನೇ ಮಹಡಿ , ಬೆಂಗಳೂರು ನಗರ ಜಿಲ್ಲೆ

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು:
*.ಇತ್ತೀಚಿನ ಪಾಸ್‌ ಪೋರ್ಟ್‌ ಭಾವಚಿತ್ರ
*.ಜನ್ಮ ದಿನಾಂಕಕ್ಕೆ ಶೈಕ್ಷಣಿಕ ದಾಖಲೆಗಳು/ ಆಧಾರ್‌ ಕಾರ್ಡ್‌/ ಪಡಿತರ ಚೀಟಿ/ ಮತದಾರರ ಗುರುತಿನ ಚೀಟಿ ಅಥವಾ ಸಂಬಂಧಪಟ್ಟ ದೃಢೀಕರಿಸಿದ ದಾಖಲೆಗಳು
*.ಸೇವಾ ಪ್ರಮಾಣ ಪತ್ರ ದಾಖಲೆ
*.ಈ ಹಿಂದೆ ವೇತನ ಪಡೆದ ದಾಖಲಾತಿ
*.ಹಾಜರಾತಿಗೆ ಸಂಬಂಧಿಸಿದಂತೆ ದಾಖಲಾತಿಗಳು
*.ಜಾತಿ, ಆದಾಯ ಪ್ರಮಾಣ ಪತ್ರ( ಎಸ್‌ಸಿ/ ಎಸ್‌ಟಿ/2ಎ, 2ಬಿ, 3ಎ ಮತ್ತು 3ಬಿ, ಪ್ರವರ್ಗ-1 ಅಭ್ಯರ್ಥಿಗಳಿಗೆ)
*.ಮೀಸಲಾತಿ ಪ್ರಮಾಣ ಪತ್ರ
*.ವೈದ್ಯಕೀಯ ಪ್ರಮಾಣ ಪತ್ರ ( ಅಂಗವಿಕಲರಾಗಿದ್ದಲ್ಲಿ ಮಾತ್ರ)

ಇದನ್ನೂ ಓದಿ : IAF Recruitment 2023 : ಭಾರತೀಯ ವಾಯುಪಡೆ ನೇಮಕಾತಿ : ವಿವಿಧ ಅಗ್ನಿವೀರರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : BMTC ನೇಮಕಾತಿ 2023 : ವಿವಿಧ 636 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸದರಿ ಹುದ್ದೆಗೆ ಫೆಬ್ರವರಿ 08, 2023 ರಂದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಮಾರ್ಚ್‌ 15, 2023 ರಂದು ಕೊನೆಗೊಳ್ಳಲಿದೆ. ಅಷ್ಟರೊಳಗಾಗಿ ಆಸಕ್ತ ಅಭ್ಯರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.

DC Office Bengaluru Recruitment 2023: Application Invitation for Municipal, Municipal Civil Service Posts

Comments are closed.