Tata Starts Scrapping Facility Center: ಟಾಟಾದಿಂದ ಮೊದಲ ಸ್ಕ್ರ್ಯಾಪಿಂಗ್‌ ಸೆಂಟರ್‌ ಪ್ರಾರಂಭ; ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತಾ…

ದೇಶದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ (Tata), ತನ್ನ ಮೊದಲ ನೋಂದಾಯಿತ ಸ್ಕ್ರ್ಯಾಪಿಂಗ್ ಸೆಂಟರ್‌ ಅನ್ನು ಮಂಗಳವಾರ ಆರಂಭಿಸಿದೆ. ಇದನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು. ಟಾಟಾ ಮೋಟಾರ್ಸ್‌ ಪ್ರಾರಂಭಿಸಿರುವ ಸ್ಕ್ರ್ಯಾಪಿಂಗ್ ಸೆಂಟರ್‌ (Tata Starts Scrapping Facility Center) ಸಂಪೂರ್ಣವಾಗಿ ಡಿಜಿಟಲ್ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಇದು ಟೈರ್, ಬ್ಯಾಟರಿ, ಇಂಧನ, ತೈಲ ಮತ್ತು ಅದರ ಇತರ ಭಾಗಗಳನ್ನು ಬೇರ್ಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನು ಉದ್ಘಾಟಿಸಿದ ನಂತರ, ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ವಾಹನ ಸ್ಕ್ರ್ಯಾಪಿಂಗ್ ನೀತಿಯ ಮೂಲಕ ನಿಗದಿಪಡಿಸಿದ ನಿಯಮಗಳ ಪ್ರಕಾರ ಹಂತ ಹಂತವಾಗಿ ಅವಧಿ ಮುಗಿದ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕುವ ಬಗ್ಗೆ ಮಾತನಾಡಿ, ಸ್ಕ್ರ್ಯಾಪಿಂಗ್‌ ಸೆಂಟರ್‌ ಕಾರ್ಬನ್‌ ನ್ಯೈಟ್ರಲೈಜೇಷನ್‌ನಲ್ಲೂ ಸಹಾಯ ಮಾಡುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಕೇಂದ್ರಗಳನ್ನು ದೇಶದಲ್ಲಿ ಪ್ರಾರಂಭಿಸಲಾಗುವುದು ಎಂದೂ ಹೇಳಿದರು.

ಸ್ಕ್ರ್ಯಾಪಿಂಗ್ ಸೌಲಭ್ಯದ ಉದ್ದೇಶವೇನು?
ಟಾಟಾ ಮೋಟಾರ್ಸ್ ಸ್ಥಾಪಿಸಿರುವ ಸ್ಕ್ರ್ಯಾಪಿಂಗ್ ಸೆಂಟರ್‌ನ ಉದ್ದೇಶವು, ದೇಶದಲ್ಲಿ ಜಂಕ್ (ಗುಜರಿ) ಆಗಿರುವಂತಹ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದಾಗಿದೆ. ಇದರೊಂದಿಗೆ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ಸಹ ಸ್ಕ್ರ್ಯಾಪ್‌ ಮಾಡಲಾಗುವುದು. ಅಂತಹ ವಾಹನಗಳಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಆದ್ದರಿಂದಲೇ ಸರಕಾರದಿಂದ ರದ್ದತಿ ನೀತಿ (ಸ್ಕ್ರ್ಯಾಪಿಂಗ್‌ ಪಾಲಿಸಿ) ಜಾರಿ ಮಾಡಿದ್ದು, ನಿಧಾನವಾಗಿ ಜಾರಿಯಾಗುತ್ತಿದೆ.

ಇದನ್ನೂ ಓದಿ : Realme GT3 : ಅಲ್ಟ್ರಾ ಫಾಸ್ಟ್‌ ಚಾರ್ಜಿಂಗ್‌ ಸಾಮರ್ಥ್ಯದ ರಿಯಲ್‌ಮಿ GT3 ಅನಾವರಣ; 10 ನಿಮಿಷದ ಒಳಗೆ ಚಾರ್ಜ್‌ ಆಗಲಿದೆಯಂತೆ ಈ ಫೋನ್‌…

ಸಂಪೂರ್ಣ ಡಿಜಿಟಲೀಕರಣದ ಸೌಲಭ್ಯ:
ಟಾಟಾ ಮೋಟಾರ್ಸ್‌ನ ಸ್ಕ್ರ್ಯಾಪಿಂಗ್‌ ಸೌಲಭ್ಯವು ಸಂಪೂರ್ಣವಾಗಿ ಡಿಜಿಟಲ್‌ ರೀತಿಯಲ್ಲಿ ತಯಾರಿಸಲಾಗಿದೆ. ಇದು ಟಾಯರ್‌, ಬ್ಯಾಟರಿ, ಇಂಧನ, ತೈಲ್‌, ಮತ್ತು ಅದರ ಇತರ ಭಾಗಗಳನ್ನು ಬೇರ್ಪಡಿಸುವ ಸಾಮರ್ಥ್ಯ ಹೊಂದಿದೆ.

ಕಾರ್ಬನ್‌ ನ್ಯೂಟ್ರಲ್‌ ಮಾಡಲು ಸಹಾಯ:
ಇಡೀ ದೇಶದಲ್ಲಿ ಸರ್ಕಾರದ ಪರವಾಗಿ ಕಾರ್ಬನ್ ನ್ಯೂಟ್ರಲ್ ಮಾಡಲು ಈ ಸ್ಕ್ರ್ಯಾಪಿಂಗ್‌ ಸೆಂಟರ್‌ ಸಾಕಷ್ಟು ಸಹಾಯ ಮಾಡುತ್ತದೆ. ಏಕೆಂದರೆ ಈ ಮೂಲಕ ರಸ್ತೆಗಳಲ್ಲಿ ನಿಂತಿರುವ ಹಳೆಯ ವಾಹನಗಳಿಂದ ನಿಗದಿತ ನಿಯಮಗಳ ಪ್ರಕಾರ ಅವಧಿ ಮುಗಿದ ವಾಹನಗಳನ್ನು ಅದರಲ್ಲಿ ಸ್ಕ್ರ್ಯಾಪ್ ಮಾಡಲಾಗುತ್ತದೆ. ಇದರಿಂದ ಮಾಲಿನ್ಯ ತಡೆಗಟ್ಟಲು ಸಹಾಯವಾಗುತ್ತದೆ.

ಇದನ್ನೂ ಓದಿ : Tata Dark Red Edition Cars: ಟಾಟಾದ ಮೂರು ಡಾರ್ಕ್‌–ರೆಡ್‌ ಎಡಿಷನ್‌ ಎಸ್‌ಯುವಿ ಕಾರುಗಳು

(Tata Starts its first vehicle Scrapping Facility Center. What you must know about this?)

Comments are closed.