KL Rahul: ಕೆ.ಎಲ್ ರಾಹುಲ್‌ಗೆ ಪ್ಲೇಯಿಂಗ್ XIನಿಂದ ಕೊಕ್, ಕನ್ನಡಿಗನ ಬದಲು ಸ್ಥಾನ ಪಡೆದ ಗಿಲ್ ಫೇಲ್

ಇಂದೋರ್: (KL Rahul) ಹೋಳ್ಕರ್ ಮೈದಾನದಲ್ಲಿ ಆರಂಭಗೊಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರನ್ನು ಟೀಮ್ ಇಂಡಿಯಾದ ಆಡುವ ಬಳಗದಿಂದ ಕೈ ಬಿಡಲಾಗಿದೆ. ರಾಹುಲ್ ಬದಲು ಸ್ಥಾನ ಪಡೆದ ಯುವ ಬ್ಯಾಟ್ಸ್’ಮನ್ ಶುಭಮನ್ ಗಿಲ್ (Shubman Gill) ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಟೀಮ್ ಇಂಡಿಯಾ ಇನ್ನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಕೇವಲ 21 ರನ್ ಗಳಿಸಿ ಔಟಾಗಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಜೊತೆ ಕನ್ನಡಿಗ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಆಡಿದ 3 ಇನ್ನಿಂಗ್ಸ್’ಗಳಲ್ಲಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ನಾಗ್ಪುರದಲ್ಲಿ ನಡೆದ ಪ್ರಥಮ ಟೆಸ್ಟ್’ನಲ್ಲಿ 20 ರನ್ ಗಳಿಸಿ ಔಟಾಗಿದ್ದ ರಾಹುಲ್, ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 17 ರನ್ ಮತ್ತು 1 ರನ್ ಗಳಿಸಿ ಔಟಾಗಿದ್ದರು. ಮೊದಲರೆಡು ಟೆಸ್ಟ್ ಪಂದ್ಯಗಳ ವೈಫಲ್ಯದ ನಂತರ ರಾಹುಲ್ ಅವರನ್ನು ಟೀಮ್ ಇಂಡಿಯಾ ಉಪನಾಯಕನ ಸ್ಥಾನದಿಂದ ಕೆಳಗಳಿಸಲಾಗಿತ್ತು. ಇದೀಗ 3ನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಪ್ಲೇಯಿಂಗ್ XIನಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

https://twitter.com/mufaddal_vohra/status/1630809374888448002?s=20

ತೃತೀಯ ಟೆಸ್ಟ್ ಪಂದ್ಯಕ್ಕೂ ಮುನ್ನ ರಾಹುಲ್ ಕಳೆದ ಭಾನುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಪತ್ನಿ ಆತಿಯಾ ಶೆಟ್ಟಿ ಜೊತೆ ಮಹಾಕಾಳೇಶ್ವರನ ದರ್ಶನ ಪಡೆದಿದ್ದ ರಾಹುಲ್ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದರು.

https://twitter.com/kunaalyaadav/status/1629740290637705216?s=20

ಇಂದೋರ್’ನ ಹೋಳ್ಕರ್ ಮೈದಾನದಲ್ಲಿ ಆರಂಭಗೊಂಡ ಆಸೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಾಟಕೀಯ ಕುಸಿತ ಕಂಡಿದೆ. ಮೊದಲ ವಿಕೆಟ್’ಗೆ 27 ರನ್’ಗಳ ಜೊತೆಯಾಟದ ನಂತರ ಭಾರೀ ಕುಸಿದ ಕಂಡ ಭಾರ 45 ರನ್’ಗಳ ಅಂತರದಲ್ಲಿ 5 ವಿಕೆಟ್’ಗಳನ್ನು ಕಳೆದುಕೊಂಡಿತು. 22 ರನ್ ಗಳಿಸಿ ಆಡುತ್ತಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ 70ರ ಮೊತ್ತದಲ್ಲಿ ಔಟಾದರು.

ಇದನ್ನೂ ಓದಿ : India Vs Australia test series : ನಾಳೆಯಿಂದ ಭಾರತ Vs ಆಸೀಸ್ 3ನೇ ಟೆಸ್ಟ್; ರಾಹುಲ್ Vs ಗಿಲ್, ರೋಹಿತ್ ಜೊತೆ ಯಾರು ಓಪನರ್?

ಇದನ್ನೂ ಓದಿ : WPLಗೆ ಕೌಂಟ್ ಡೌನ್; ಇಲ್ಲಿದೆ RCB ಮಹಿಳಾ ತಂಡದ ಸಂಭಾವ್ಯ ಪ್ಲೇಯಿಂಗ್ XI, ವೇಳಾಪಟ್ಟಿ, ಕೀ ಪ್ಲೇಯರ್ಸ್ ಡೀಟೇಲ್ಸ್

ಇದನ್ನೂ ಓದಿ : Sachin Tendulkar statue : ಸಚಿನ್ ತೆಂಡೂಲ್ಕರ್ 50ನೇ ಹುಟ್ಟುಹಬ್ಬಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ವಿಶೇಷ ಉಡುಗೊರೆ

KL Rahul: Gill fails to replace Kok, Kannadiga from the playing XI for KL Rahul

Comments are closed.