ಐಒಸಿಎಲ್ ನಲ್ಲಿ 501 ಅಪ್ರೈಂಟಿಸ್‌ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಈ ದಿನದ ಒಳಗೆ ಅರ್ಜಿ ಸಲ್ಲಿಸಿ
IOCL Recruitment 2026: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ದೇಶದ ವಿವಿಧ ರಾಜ್ಯಗಳಲ್ಲಿ ಅಪ್ರೈಂಟಿಸ್‌ಶಿಪ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಇದರಲ್ಲಿ ಟ್ರೇಡ್, ಗ್ರೇಜ್ಯುವೇಟ್ ಹಾಗೂ ಟೆಕ್ನಿಶಿಯನ್ ಅಪ್ರೈಂಟಿಸ್‌ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಅಭಿಯಾನದ ಮೂಲಕ ಐಒಸಿಎಲ್ ಒಟ್ಟು 501 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಜನವರಿ 12 ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಗಳನ್ನು NAPS ಮತ್ತು NATS ಪೋರ್ಟಲ್‌ಗಳ ಮೂಲಕ ಭರ್ತಿ ಮಾಡಬಹುದು. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ಅರ್ಹತಾ ಮಾನದಂಡಗಳೇನು ಎಂದು ತಿಳಿಯೋಣ.
ಯಾರು ಅರ್ಜಿ ಸಲ್ಲಿಸಬಹುದು?
ಈ ನೇಮಕಾತಿಯಲ್ಲಿ ಭಾಗವಹಿಸಲು, ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಸಂಬಂಧಿತ ಶಾಖೆಯಲ್ಲಿ ಐಟಿಐ/ಎನ್‌ಸಿವಿಟಿ ಪ್ರಮಾಣಪತ್ರ/3 ವರ್ಷಗಳ ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಡಿಪ್ಲೊಮಾ/ಬಿಬಿಎ/ಬಿಎ/ಬಿ.ಕಾಂ/ಬಿ.ಎಸ್ಸಿ/10+2 (ಇಂಟರ್ಮೀಡಿಯೇಟ್) ಜೊತೆಗೆ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ
ಐಒಸಿಎಲ್ಲ ಅಪ್ರೈಂಟಿಸ್‌ಶಿಪ್ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು 24 ವರ್ಷಗಳಿಗಿಂತ ಹೆಚ್ಚಿರಬಾರದು.
ಡಿಸೆಂಬರ್ 31, 2025 ರಂತೆ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ. ಮೀಸಲು ವರ್ಗಗಳ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: ಪಿಯುಸಿ ಪಾಸ್ ಆದವರಿಗೆ ಕೃಷಿ ಇಲಾಖೆಯಲ್ಲಿ ಕೆಲಸ; ಹೀಗೆ ಅಪ್ಲೈ ಮಾಡಿ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಹೇಗೆ?
ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಪ್ರತಿಯೊಂದು ಹುದ್ದೆಗೂ ಪ್ರತ್ಯೇಕ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬೇಕಾಗಿದೆ. ಅದಕ್ಕಾಗಿ ಪ್ರತ್ಯೇಕ ಪೋರ್ಟಲ್‌ಗಳನ್ನು ನೀಡಲಾಗಿದೆ.
- NAPS ನಲ್ಲಿ ಟ್ರೇಡ್ ಅಪ್ರೆಂಟಿಸ್‌ಶಿಪ್‌ಗಾಗಿ ಐಟಿಐ ಆದ ಅಭ್ಯರ್ಥಿಗಳು : apprenticeshipindia.gov.in ಗೆ ಭೇಟಿ ನೀಡಬೇಕು.
- ಟ್ರೇಡ್ ಅಪ್ರೆಂಟಿಸ್ – NAPS ನಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸಲು : apprenticeshipindia.gov.in
- NATS ನಲ್ಲಿ ಟೆಕ್ನಿಶಿಯನ್ ಅಪ್ರೆಂಟಿಸ್‌ಶಿಪ್‌ಗಾಗಿ ಡಿಪ್ಲೊಮಾ ಅಭ್ಯರ್ಥಿಗಳು : nats.education.gov.in/student_register.php ಗೆ ಭೇಟಿ ನೀಡಬೇಕು.
- NATS ನಲ್ಲಿ ಗ್ರಾಜ್ಯುವೇಟ್ ಅಪ್ರೆಂಟಿಸ್‌ಗಾಗಿ : nats.education.gov.in/student_register.php ಯಲ್ಲಿ ಅರ್ಜಿ ಸಲ್ಲಿಸಬಹುದು.



