IRCTC ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ, ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ (IRCTC Recruitment 2023) ಮಾರ್ಚ್ 2023 ರ ಅಧಿಕೃತ ಅಧಿಸೂಚನೆಯ ಮೂಲಕ ಪ್ರವಾಸೋದ್ಯಮ ಮಾನಿಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.‌

ಐಆರ್‌ಸಿಟಿಸಿ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)
ಹುದ್ದೆಗಳ ಸಂಖ್ಯೆ : 6 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು, ಚೆನ್ನೈ ಹಾಗೂ ತಿರುವನಂತಪುರ
ಹುದ್ದೆಯ ಹೆಸರು : ಪ್ರವಾಸೋದ್ಯಮ ಮಾನಿಟರ್
ಸಂಬಳ : ರೂ.30000-35000/- ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ :
ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ ವಿವರ :
ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಗರಿಷ್ಠ ವಯಸ್ಸು ಏಪ್ರಿಲ್‌ 01, 2023 ರಂತೆ 28 ವರ್ಷ ವಯಸ್ಸು ಮೀರಿರಬಾರದು.

ವಯೋಮಿತಿ ಸಡಿಲಿಕೆ :
OBC ಅಭ್ಯರ್ಥಿಗಳು : 03 ವರ್ಷಗಳು
SC/ST ಅಭ್ಯರ್ಥಿಗಳು : 05 ವರ್ಷಗಳು
PwBD ಅಭ್ಯರ್ಥಿಗಳು : 10 ವರ್ಷಗಳು

ಆಯ್ಕೆ ಪ್ರಕ್ರಿಯೆ :
ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

IRCTC ನೇಮಕಾತಿ (ಟೂರಿಸಂ ಮಾನಿಟರ್) ಉದ್ಯೋಗಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು
ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ ನೇಮಕಾತಿ ಅಧಿಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್‌ 13, 2023 ರಂದು ಕೆಳಗಿನ ಸ್ಥಳಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

IRCTC ವಾಕ್-ಇನ್ ಸಂದರ್ಶನ ಸ್ಥಳದ ವಿವರಗಳು :
ಬೆಂಗಳೂರು – ಕರ್ನಾಟಕ : ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, MS ಬಿಲ್ಡಿಂಗ್ ಮತ್ತು SKSJTI ಹಾಸ್ಟೆಲ್ ಹತ್ತಿರ, SJ ಪಾಲಿಟೆಕ್ನಿಕ್ ಕ್ಯಾಂಪಸ್, ಬೆಂಗಳೂರು-560001
ಚೆನ್ನೈ – ತಮಿಳುನಾಡು : ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, 4 ನೇ ಅಡ್ಡರಸ್ತೆ, CIT ಕ್ಯಾಂಪಸ್, ತಾರಾಮಣಿ, ಚೆನ್ನೈ – 600113
ತಿರುವನಂತಪುರಂ – ಕೇರಳ : ಇನ್‌ಸ್ಟಿಟ್ಯೂಟ್ ಆಫ್ ಹಾಸ್ಟೆಲ್ ಮ್ಯಾನೇಜ್‌ಮೆಂಟ್, ಜಿ.ವಿ.ರಾಜ ರಸ್ತೆ, ಕೋವಲಂ, ತಿರುವನಂತಪುರಂ – 695527

ಪ್ರಮುಖ ದಿನಾಂಕಗಳು :
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ : 17 ಮಾರ್ಚ್‌ 2023
ವಾಕ್-ಇನ್ ದಿನಾಂಕ : 13-ಏಪ್ರಿಲ್-2023

ಇದನ್ನೂ ಓದಿ : ECHS ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ : ವಿವಿಧ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : UAS ಬೆಂಗಳೂರು ನೇಮಕಾತಿ 2023 : ವಿವಿಧ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

IRCTC ಸ್ಥಳದ ಹೆಸರು ವಾಕ್-ಇನ್ ಸಂದರ್ಶನ ದಿನಾಂಕದ ವಿವರಗಳು :
ಬೆಂಗಳೂರು – ಕರ್ನಾಟಕ 13-ಏಪ್ರಿಲ್-2023
ಚೆನ್ನೈ – ತಮಿಳುನಾಡು 10 ಮತ್ತು 11 ಏಪ್ರಿಲ್ 2023
ತಿರುವನಂತಪುರಂ – ಕೇರಳ 06-ಏಪ್ರಿಲ್-2023

IRCTC Recruitment 2023 : Direct Interview for Various Posts, Apply Now

Comments are closed.