ಥಿಯೇಟರ್‌ನಲ್ಲಷ್ಟೇ ಅಲ್ಲ.. ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಿದ ‘ಕಾಂತಾರ’ : ಎಲ್ಲಾ ಪಂಜುರ್ಲಿ ಮಹಿಮೆ!

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕೀರ್ತಿ ‘ಕಾಂತಾರ’ ಸಿನಿಮಾಕ್ಕೆ ಸಲ್ಲುತ್ತದೆ. ನಟ ರಿಷಬ್‌ ಶೆಟ್ಟಿ ಅಭಿನಯನದ “ಕಾಂತಾರ” ಸಿನಿಮಾ ಬಿಡುಗಡೆಯಾದ ದಿನದಿಂದಲೇ ಥಿಯೇಟರ್‌ನಲ್ಲಿ ಸದ್ದು ಮಾಡಲು ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೂ ಈ ಸಿನಿಮಾಗೆ ಹಿನ್ನೆಲೆಯಾಗಿದ್ದೇ ಇಲ್ಲ. ಒಂದು ಭಾಷೆಯಿಂದ ಆರಂಭ ಆದ ಯಶಸ್ಸಿನ ಯಾತ್ರೆ ಪ್ಯಾನ್‌ ಇಂಡಿಯಾವರೆಗೂ ಹಬ್ಬಿತ್ತು. ಕನ್ನಡ ಅಷ್ಟೇ ಅಲ್ಲ, ಹಿಂದಿ ಭಾಷೆಯಲ್ಲೂ ‘ಕಾಂತಾರ’ ಕಲೆಕ್ಷನ್ ಭರ್ಜರಿಯಾಗಿಯೇ ಇತ್ತು. ಐದು ಭಾಷೆಗಳಿಂದ ಸುಮಾರು 400 ಕೋಟಿ ರೂ. ದೋಚಿದ್ದ ಸಿನಿಮಾ ಕೆಲವೇ ತಿಂಗಳ ಹಿಂದಷ್ಟೇ ಓಟಿಟಿಗೂ ಲಗ್ಗೆ ಇಟ್ಟಿತ್ತು. ಥಿಯೇಟರ್‌ನಲ್ಲೇ ಬಹುತೇಕ ಮಂದಿ ಸಿನಿಮಾ ವೀಕ್ಷಿಸಿ ಆಗಿತ್ತು. ಇನ್ನೊಂದು ಕಡೆ ಓಟಿಟಿಯಲ್ಲೂ ಸಿನಿಮಾ ಸದ್ದು ಮಾಡಿತ್ತು. ಹೀಗಿ ಇದ್ದ ಮೇಲೆ ಕಿರುತೆರೆಯಲ್ಲಿ ಯಾರು ಸಿನಿಮಾ ನೋಡುತ್ತಾರೆ? ಅನ್ನೋ ಪ್ರಶ್ನೆಯಂತೂ ಇತ್ತು. ಆದರೆ ಇದೀಗ ಕಿರುತೆರೆಯಲ್ಲೂ (Kantara TV TRP) ‘ಕಾಂತಾರ’ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

‘ಕಾಂತಾರ’ ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಸ್ಟಾರ್ ಸುವರ್ಣ ಪಡೆದುಕೊಂಡಿತ್ತು. ಸಂಕ್ರಾಂತಿ ಹಬ್ಬಕ್ಕೆ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಕಾಂಬಿನೇಷನ್ ಸಿನಿಮಾವನ್ನು ವರ್ಲ್ಡ್‌ ಪ್ರೀಮಿಯರ್ ಮಾಡಲಾಗಿತ್ತು. ಸಂಜೆ 6 ಗಂಟೆಯಿಂದ ರಾತ್ರಿ 9.30ರವರೆಗೂ ಈ ಸಿನಿಮಾವನ್ನು ಪ್ರಸಾರ ಮಾಡಲಾಗಿತ್ತು. ರಿಷಬ್ ಶೆಟ್ಟಿ ಸಿನಿಮಾ ಕರಿಯರ್‌ನಲ್ಲೇ ‘ಕಾಂತಾರ’ ಸಿನಿಮಾ ಅತೀ ಹೆಚ್ಚು ಟಿಆರ್‌ಪಿ ಪಡೆದುಕೊಂಡಿದೆ. ಮೊದಲನೇ ಪ್ರಸಾರದಲ್ಲೇ ಸುಮಾರು 15.8 ಟಿಆರ್‌ಪಿ ಪಡೆದುಕೊಂಡು ಕಿರುತರೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ.

ಸ್ಟಾರ್ ಸುವರ್ಣ ಇತಿಹಾಸದಲ್ಲಿಯೇ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ ‘ಕಾಂತಾರ’. ಎಸ್‌ಡಿ ಹಾಗೂ ಹೆಚ್‌ಡಿ ಎರಡರಿಂದಲೂ ‘ಕಾಂತಾರ’ಗೆ 15.8 ಟಿಆರ್‌ಪಿ ಗಿಟ್ಟಿಸಿಕೊಂಡಿದೆ. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಿದ್ದ ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾ 10+ ಟಿಆರ್‌ಪಿ ಪಡೆದುಕೊಂಡಿತ್ತು. ಈ ಎರಡೂ ಸಿನಿಮಾಗಳಿಗಿಂತಲೂ ಹೆಚ್ಚು ಟಿಆರ್‌ಪಿ ‘ಕಾಂತಾರ’ಗೆ ಸಿಕ್ಕಿದೆ. ಈ ಮೂಲಕ ಹೊಸ ಕಿರುತೆರೆಯಲ್ಲೂ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

ಸ್ಟಾರ್ ಸುವರ್ಣದಲ್ಲಿ ‘ಕಾಂತಾರ’ ಸಿನಿಮಾ 9.30ಕ್ಕೆ ಮುಗಿದಿತ್ತು. ಆ ಬಳಿಕ ‘ಕಾಂತಾರ’ ಮೇಕಿಂಗ್ ಅನ್ನು ಅರ್ಧ ಗಂಟೆಗಳ ಕಾಲ ಪ್ರಸಾರ ಮಾಡಿದ್ದರು. ಈ ‘ಕಾಂತಾರ’ ಮೇಕಿಂಗ್‌ಗೂ ದಾಖಲೆ ಟಿಆರ್‌ಪಿ ಬಂದಿದೆ. ಮೇಕಿಂಗ್ 5.4 ಟಿಆರ್‌ಪಿ ಪಡೆದುಕೊಂಡಿದೆ. ಕಿರುತೆರೆಯಲ್ಲಿ ಇದೂ ಕೂಡ ದಾಖಲೆ ಅಂತಲೇ ಪಂಡಿತರು ಹೇಳುತ್ತಾರೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್‌ಗೆ ಮತ್ತೊಂದು ಸಕ್ಸಸ್ ಸಿಕ್ಕಂತಾಗಿದೆ.

ಇದನ್ನೂ ಓದಿ : Srinivas Murthy :ಸೌತ್‌ ಇಂಡಿಯಾ ಸಿನಿಮಾಗಳ ಜನಪ್ರಿಯ ಡಬ್ಬಿಂಗ್‌ ಕಲಾವಿದ ವಿಧಿವಶ

ಇದನ್ನೂ ಓದಿ : ಅಪರೂಪಕ್ಕೆ ರಾಕಿಂಗ್ ಸ್ಟಾರ್ ಯಶ್ ದರ್ಶನ : ಅಭಿಮಾನಿಗಳು ಕೇಳಿದ್ದು ಒಂದೇ ಪ್ರಶ್ನೆ!

ಇದನ್ನೂ ಓದಿ : Rolex Komal Movie : ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ : ನಾಳೆಯಿಂದ ಚಿತ್ರೀಕರಣ ಆರಂಭ

ಕಾಂತಾರ ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಮಾಡುವುದಕ್ಕೂ ಪ್ರಚಾರ ಮಾಡಿದ್ದರು. ಮಂಗಳೂರಿನ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಸ್ಯಾಂಡ್ ಆರ್ಟ್ ಮಾಡಲಾಗಿತ್ತು. ಕಿರುತೆರೆಯಲ್ಲಿ ಪ್ರಸಾರ ಆಗುವ ಸಿನಿಮಾ ಇದೇ ಮೊದಲ ಬಾರಿಗೆ ಪ್ರಚಾರ ಮಾಡಲಾಗಿತ್ತು. ಸದ್ಯ ಇದೇ ಜೋಷ್‌ನಲ್ಲಿ ಸ್ಟಾರ್ ಸುವರ್ಣ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಅನ್ನೋ ಹೊಸ ಧಾರಾವಾಹಿಯನ್ನು ಈ ಸಮಯದಲ್ಲಿ ಪ್ರಸಾರ ಮಾಡುತ್ತಿದೆ.

Not only in theatre.. ‘Kantara’ created history on TV too: All the glory of Panjurli!

Comments are closed.