KPSC ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ (KPSC Recruitment 2023) ಮಾರ್ಚ್ 2023 ರ ಅಧಿಕೃತ ಅಧಿಸೂಚನೆಯ ಮೂಲಕ ಖಾತೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ (Karnataka Public Service Commission) ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.‌

Karnataka Public Service Commission : ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :

ಸಂಸ್ಥೆಯ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
ಹುದ್ದೆಗಳ ಸಂಖ್ಯೆ : 242 ಹುದ್ದೆಗಳು
ಉದ್ಯೋಗ ಸ್ಥಳ : ಕರ್ನಾಟಕ
ಹುದ್ದೆಯ ಹೆಸರು : ಖಾತೆ ಸಹಾಯಕ ಹುದ್ದೆ ಗಳು
ವೇತನ : ರೂ.27,650-52,650/-

ಶೈಕ್ಷಣಿಕ ಅರ್ಹತೆ :
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಬಿಕಾಂ, ಬಿಬಿಎಂ, ಬಿಬಿಎ ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ :
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಏಪ್ರಿಲ್‌ 23, 2023 ರಂತೆ ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು ಹಾಗೂ ಗರಿಷ್ಠ 35 ವರ್ಷ ವಯಸ್ಸು ಮೀರಿಬಾರದು.

ವಯೋಮಿತಿ ಸಡಿಲಿಕೆ :
2A, 2B, 3A, 3B, OBC ಅಭ್ಯರ್ಥಿಗಳು : 03 ವರ್ಷಗಳು
SC, ST / ಮಾಜಿ ಸೇನಾ ಅಭ್ಯರ್ಥಿಗಳು : 05 ವರ್ಷಗಳು
PWD ಅಭ್ಯರ್ಥಿಗಳು : 10 ವರ್ಷಗಳು

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು : 600/-
2A, 2B, 3A, 3B ಅಭ್ಯರ್ಥಿಗಳು : 300/-
SC/SC (A)/ST ಅಭ್ಯರ್ಥಿಗಳು : ಯಾವುದೇ ಶುಲ್ಕವಿರುವುದಿಲ್ಲ.
ಮಾಜಿ ಸೇವಾ ಅಭ್ಯರ್ಥಿಗಳು : ರೂ.50/-

ಆಯ್ಕೆ ಪ್ರಕ್ರಿಯೆ :
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 23 ಏಪ್ರಿಲ್‌ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23 ಏಪ್ರಿಲ್ 2023
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 24 ಏಪ್ರಿಲ್‌ 2023

ಇದನ್ನೂ ಓದಿ : KPSC ನೇಮಕಾತಿ 2023 : ವಿವಿಧ ಅಕೌಂಟ್ಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಉದ್ಯೋಗಾವಕಾಶ ಕೂಡಲೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ : ಕ್ಯಾನ್ ಫಿನ್ ಹೋಮ್ಸ್ ನೇಮಕಾತಿ 2023 : ವಿವಿಧ ಅಧಿಕಾರಿ ಹುದ್ದೆಗಳಿಗೆ ಉದ್ಯೋಗಾವಕಾಶ ಕೂಡಲೇ ಅರ್ಜಿ ಸಲ್ಲಿಸಿ

ಸೂಚನೆ : ರಾಜ್ಯ ಖಾತೆಗಳ ಇಲಾಖೆಯಲ್ಲಿ ಅಕೌಂಟ್ಸ್ ಅಸಿಸ್ಟೆಂಟ್‌ಗಾಗಿ ಕರ್ನಾಟಕ ಪಿಎಸ್‌ಸಿ ಅಧಿಸೂಚನೆಯನ್ನು ಎಚ್‌ಕೆ ಅಲ್ಲದವರಿಗೆ ಪ್ರಕಟಿಸಲಾಗಿದೆ.

KPSC Recruitment 2023 : Karnataka Public Service Commission Recruitment : Application Invitation for Various Posts

Comments are closed.