100 ಮೀಟರ್‌ ಓಟದಲ್ಲಿ 2 ಚಿನ್ನ ಗೆದ್ದ 92 ವರ್ಷದ ಮಡಿಕೇರಿಯ ಪಾಲೆಕಂಡ ಬೋಪಯ್ಯ

ಬೆಂಗಳೂರು : ಸಾಧನೆಗೆ ವಯಸ್ಸಿನ ಅಡ್ಡಿ ಇಲ್ಲ ಅನ್ನುವುದನ್ನು ಕೊಡಗಿನ ಪಾಲೆಕಂಡ ಬೋಪಯ್ಯ ಅವರು ತೋರಿಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯ ಒಲಿಂಪಿಕ್ಸ್‌ ಪಾರ್ಕ್‌ನಲ್ಲಿ (Sydney Olympics Park) ನಡೆದ ಆಸ್ಟ್ರೇಲಿಯನ್‌ ಮಾಸ್ಟರ್ಸ್‌ ಇಂಟರ್‌ನ್ಯಾಷನಲ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ (Australian Masters International Athletics Championship) ಭಾರತವನ್ನು ಪ್ರತಿನಿಧಿಸಿದ್ದ ಕೊಡಗಿನ 92 ವರ್ಷದ ಪಾಲೆಕಂಡ ಬೋಪಯ್ಯ ಅವರು ಎರಡು ಚಿನ್ನದ ಪಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

90+ ವಯೋಮಿತಿಯ ವಿಭಾಗದಲ್ಲಿ ಬೋಪಯ್ಯ ಅವರು 100 ಮೀ. ಓಟ ಹಾಗೂ ಜಾವೆಲಿನ್‌ ಎಸೆತದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ ಎಂದು ಪಾನ್‌ ಇಂಡಿಯಾ ಮಾಸ್ಟರ್ಸ್‌ ಗೇಮ್ಸ್‌ ಫೆಡರೇಷನ್‌ನ ಕಾರ್ಯದರ್ಶಿ ನಟರಾಜ್‌ ಜಿ.ಎ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಚಾಂಪಿಯನ್‌ಷಿಪ್‌ನಲ್ಲಿ ಬೋಪಯ್ಯ ಅವರು ಇತರ ಎಂಟು ಕ್ರೀಡಾಪಟುಗಳೊಂದಿಗೆ ಭಾರತವನ್ನು ಪ್ರತಿನಿಧಿಸಿದ್ದರು.

ಬೋಪಯ್ಯ ಅವರ ಕಿರಿಯ ಸಹೋದರ ಪಾಲೆಕಂಡ ಬೆಳ್ಳಿಯಪ್ಪ ಅವರು 75+ ವಯೋಮಿತಿಯ ವಿಭಾಗದ 1500 ಮೀ ನಡಿಗೆಯಲ್ಲಿ ಚಿನ್ನ ಹಾಗೂ 100 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 78 ವರ್ಷದ ಕೊಡಗಿನ ಮಾಚಮ್ಮ ಜಾವೆಲಿನ್‌ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಪದಕ ಗೆದ್ದ ಎಲ್ಲ ಸಾಧಕರನ್ನು ಪಾನ್‌ ಇಂಡಿಯಾ ಮಾಸ್ಟರ್ಸ್‌ ಗೇಮ್ಸ್‌ ಫೆಡರೇಷನ್‌ನ ಹಿರಿಯ ಉಪಾಧ್ಯಕ್ಷ ಡಾ. ಟಿ. ವಿ. ರಾವ್‌ ಹಾಗೂ ಕಾರ್ಯದರ್ಶಿ ನಟರಾಜ್‌ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು ಸ್ವಾಗತಿಸಿದರು.

ಇದನ್ನೂ ಓದಿ : Ellyse Perry : ರಾಯಲ್ ಚಾಲೆಂಜರ್ಸ್ ತಂಡ ಈ ಆಸೀಸ್ ಸ್ಟಾರ್ ಆಟಗಾರ್ತಿಯ ವಿಶೇಷ ಗುಣಕ್ಕೆ ನೀವು ಕ್ಲೀನ್ ಬೌಲ್ಡ್ ಆಗ್ತೀರಿ!

ಫಲಿತಾಂಶ:

  • ಪಿ.ಪಿ. ಬೋಪಯ್ಯ(90+ ವಯೋಮಿತಿ) : 100 ಮೀ. ಓಟದಲ್ಲಿ ಚಿನ್ನ ಹಾಗೂ ಜಾವೆಲಿನ್‌ ಎಸೆತದಲ್ಲಿ ಚಿನ್ನ.
  • ಪಿ.ಪಿ. ಬೆಳ್ಳಿಯಪ್ಪ (75+ ವಯೋಮಿತಿ) : 1500 ಮೀ. ನಡಿಗೆಯಲ್ಲಿ ಚಿನ್ನ ಹಾಗೂ 100 ಮೀ. ಓಟದಲ್ಲಿ ಕಂಚು.
  • ಮಾಚಮ್ಮ ಪೊನ್ನಪ್ಪ: (75+ ವಯೋಮಿತಿ) : ಜಾವೆಲಿನ್‌ ಎಸೆತದಲ್ಲಿ ಬೆಳ್ಳಿ ಪದಕ.
  • ದಾಧಿಬಾಲ್‌ ಸಿಂಗ್‌ ಚೌಹಾಂದ್‌ (55+ ವಯೋಮಿತಿ) : 1500 ಮೀ. ನಡಿಗೆಯಲ್ಲಿ ಚಿನ್ನ, 5000 ಮೀ. ನಡಿಗೆಯಲ್ಲಿ ಚಿನ್ನ, ಪೋಲ್‌ವಾಲ್ಟ್‌ನಲ್ಲಿ ಬೆಳ್ಳಿ ಪದಕ.
  • ಮೋಹನ್‌ ರೆಡ್ಡಿ, (30+ ವಯೋಮಿತಿ) : ಲಾಂಗ್‌ಜಂಪ್‌ನಲ್ಲಿ ಚಿನ್ನ ಹಾಗೂ ಟ್ರಿಪಲ್‌ ಜಂಪ್‌ನಲ್ಲಿ ಚಿನ್ನ.
  • ಬಿ.ಸಿ. ಕೃಷ್ಣ (80+ ವಯೋಮಿತಿ) : ಡಿಸ್ಕಸ್‌ ಎಸೆತದಲ್ಲಿ ಬೆಳ್ಳಿ, ಹ್ಯಾಮರ್‌ ಎಸೆತದಲ್ಲಿ ಬೆಳ್ಳಿ, ಜಾವೆಲಿನ್‌ ಎಸೆತದಲ್ಲಿ ಕಂಚು.

ಇದನ್ನೂ ಓದಿ : Will Jacks out : ಐಪಿಎಲ್ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್‌ಗೆ ಶಾಕ್, ಸ್ಟಾರ್ ಆಟಗಾರ ಟೂರ್ನಿಯಿಂದಲೇ ಔಟ್

ಇದನ್ನೂ ಓದಿ : ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್’ಗೆ ಡೇವಿಡ್ ವಾರ್ನರ್ ನಾಯಕ

International Athletics Championship: 92-year-old Palekanda Bopaiah of Madikeri won 2 golds in 100 meters race.

Comments are closed.