ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP Constable Recruitment 2022) ಯಲ್ಲಿರುವ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪುರುಷರು ಮತ್ತು ಟ್ರಾನ್ಸ್ಜೆಂಡರ್ ಈ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ. ಒಟ್ಟು 3484 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಸೆಪ್ಟೆಂಬರ್ 19, 2022 ರಿಂದ ಕರ್ನಾಟಕ್ ರಾಜ್ಯ ಪೊಲೀಸ್ ನೇಮಕಾತಿಯ ಅಧಿಕೃತ ವೆಬ್‌ಸೈಟ್ ksp.karnataka.gov.in ಮೂಲಕ ಖಾಲಿ ಇರುವ ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಅಕ್ಟೋಬರ್ 31, 2022. ಅಭ್ಯರ್ಥಿಗಳಿಗೆ ಶುಲ್ಕವನ್ನು ಪಾವತಿಸಲು ನವೆಂಬರ್ 3, 2022 ರವರೆಗೆ ಕಾಲಾವಕಾಶ ನೀಡಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವಿರ :
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ( CAR/DAR) – ಒಟ್ಟೂ 3484 ಹುದ್ದೆಗಳು
ಅರ್ಹತೆ :
ಅಭ್ಯರ್ಥಿಗಳು SSLC/ 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ :
ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿಯು 25 ವರ್ಷಗಳಾಗಿದೆ. SC, ST, OBC (2A, 2B, 3A, 3B)ಯವರಿಗೆ ಗರಿಷ್ಠ ವಯೋಮಿತಿಯು 27 ವರ್ಷಗಳು. ಕರ್ನಾಟಕದ ಬುಡಕಟ್ಟು ಜನಾಂಗ (ST)ದವರಿಗೆ ಗರಿಷ್ಠ ವಯೋಮಿತಿಯು 30 ವರ್ಷಗಳು.
ಪ್ರಮುಖ ದಿನಾಂಕ :
ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭ ದಿನಾಂಕ ಸೆಪ್ಟೆಂಬರ್ 19, 2022
ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31, 2022
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ https://ksp.karnataka.gov.in ಅಥವಾ https://ksp-recruitment.in ಗೆ ಭೇಟಿಕೊಡಿ.
- ಅಪ್ಲೈ ನೌ ಮೇಲೆ ಕ್ಲಿಕ್ಕಿಸಿ.
- ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಭರ್ತಿ ಮಾಡಿ.
- ಭರ್ತಿ ಮಾಡಿದ ನಂತರ ಪ್ರಿಂಟ್‌ಔಟ್ ತೆಗದುಕೊಳ್ಳಿ.
ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಳ್ಳಿ.
ಇದನ್ನೂ ಓದಿ : Mysore Palace :ಸಾರ್ವಜನಿಕರ ಗಮನಕ್ಕೆ : ಈ ದಿನದಂದು ಮೈಸೂರು ಅರಮನೆ ದರ್ಶನಕ್ಕೆ ಇರಲಿದೆ ನಿರ್ಬಂಧ
(KSP Constable Recruitment 2022 applies for over 3000 posts at Karnataka state police dept.)