ಎಲ್‌ಐಸಿ ಎಎಒ ಪ್ರಿಲಿಮ್ಸ್‌ ಪರೀಕ್ಷೆ 2025 ಫಲಿತಾಂಶ ಪ್ರಕಟ

LIC AAO Prelims Result 2025: ಭಾರತೀಯ ಜೀವ ವಿಮಾ ನಿಗಮವು (LIC) ಅಕ್ಟೋಬರ್‌ನಲ್ಲಿ ನಡೆಸಿದ್ದ ಎಲ್‌ಐಸಿ ಎಎಒ ಪ್ರಿಲಿಮ್ಸ್‌ ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ಎಲ್‌ಐಸಿಯು ಎಎಒ ಹುದ್ದೆಗೆ ಅಕ್ಟೋಬರ್‌ 3 ರಂದು ವಿವಿಧ ಕೇಂದ್ರಗಳಲ್ಲಿ ನಾಲ್ಕು ಸೆಷನ್‌ನಲ್ಲಿ ಪರೀಕ್ಷೆ ನಡೆಸಿತ್ತು. ಆನ್‌ಲೈನ್‌ ಮುಖಾಂತರ ನಡೆಸಲಾದ ಪರೀಕ್ಷೆಯನ್ನು ವಸ್ತುನಿಷ್ಠ ಸ್ವರೂಪದಲ್ಲಿ ನಡೆಸಲಾಗಿತ್ತು.

ಅದರಲ್ಲಿ ತಾರ್ಕಿಕ ಸಾಮರ್ಥ್ಯ, ಪರಿಮಾಣಾತ್ಮಕ ಸಮಾರ್ಥ್ಯ ಮತ್ತು ಇಂಗ್ಲೀಷ್‌ ಭಾಷೆ ಸೇರಿದಂತೆ ಮೂರು ವಿಭಾಗಗಳಾಗಿ ಪರೀಕ್ಷೆ ನಡೆಸಿತ್ತು. ಈಗ ಈ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ.

ಪರೀಕ್ಷೆಯನ್ನು ಎದುರಿಸಿದ್ದ ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಿಕೊಂಡು ಮುಂದಿನ ಹಂತಕ್ಕೆ ತಯಾರಿ ನಡೆಸಬಹುದಾಗಿದೆ.

ಎಲ್‌ಐಸಿ ಎಎಒ ಪರೀಕ್ಷೆ ಫಲಿತಾಂಶ ಚೆಕ್‌ ಮಾಡುವುದು ಹೇಗೆ?

ಎಲ್‌ಐಸಿ ಎಎಒ ಪ್ರಿಲಿಮ್ಸ್‌ ಫಲಿತಾಂಶ 2025 ಚೆಕ್‌ ಮಾಡಲು ಹೀಗೆ ಮಾಡಿ:

ಮೊದಲಿಗೆ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ licindia.in ಗೆ ಭೇಟಿ ನೀಡಿ.

ಅಲ್ಲಿ ಮುಖಪುಟದಲ್ಲಿ ಲಭ್ಯವಿರುವ ಕೆರಿಯರ್ಸ್‌ ಲಿಂಕ್‌ ಮೇಲೆ ಕ್ಲಿಕ್ಕಿಸಿ.

ಬಳಿಕ ತೆರೆದುಕೊಳ್ಳುವ ಪುಟದಲ್ಲಿ ಕಾಣಿಸುವ ಎಲ್‌ಐಸಿ ಎಎಒ ಫಲಿತಾಂಶ 2025 ಮೇಲೆ ಕ್ಲಿಕ್ಕಿಸಿ.

ಅಲ್ಲಿ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.

ಭವಿಷ್ಯದ ಉಲ್ಲೇಖಕ್ಕಾಗಿ ಡೌನ್‌ಲೋಡ್‌ ಮಾಡಿಕೊಳ್ಳಿ.

ಇದನ್ನೂ ಓದಿ: ಎಸ್‌ಬಿಐನಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಆಗುವ ಸುವರ್ಣಾವಕಾಶ: ನವೆಂಬರ್ 17 ರ ಒಳಗೆ ಅರ್ಜಿ ಸಲ್ಲಿಸಿ

ಎಲ್‌ಐಸಿ ಎಎಒ ಪ್ರಿಲಿಮ್ಸ್‌ 2025 ಆಯ್ಕೆ ಪ್ರಕ್ರಿಯೆ ಹೇಗೆ?

ಎಲ್‌ಐಸಿ ಎಎಒ ಪ್ರಿಲಿಮ್ಸ್‌ನ ಪ್ರಾಥಮಿಕ ಪರೀಕ್ಷೆಯಲ್ಲಿ ಯಾವುದೇ ಋಣಾತ್ಮಕ ಅಂಕಗಳು ಅನ್ವಯವಾಗುವುದಿಲ್ಲ. ಆದರೆ ಮುಂದಿನ ಹಂತಕ್ಕೆ ತೆರಳಲು ಪ್ರತಿಯೊಂದು ವಿಭಾಗದಲ್ಲೂ ಕನಿಷ್ಠ ಅಂಕ ಗಳಿಸಿರಬೇಕು.

ಅದರ ಆಧಾರದ ಮೇಲೆ ಅಂಕಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ನಂತರ ಸಂದರ್ಶನ ಸುತ್ತಿನ ಶಾರ್ಟ್‌ಲಿಸ್ಟ್ ಅನ್ನು ಸಹ ನಿರ್ಧರಿಸಲಾಗುತ್ತದೆ.

ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಇವೆರಡರ ಅಂಕಗಳನ್ನು ಸೇರಿಸಿ ಅಂತಿಮ ಮೆರಿಟ್‌ ಪಟ್ಟಿ ಸಿದ್ಧಪಡಿಸುತ್ತಾರೆ.

ಇದನ್ನೂ ಓದಿ: ಗುಪ್ತಚರ ಸಂಸ್ಥೆಯಲ್ಲಿ ಟೆಕ್ ಗ್ರೇಡ್ II ನೇಮಕಾತಿ: ಎಂಜಿನಿಯರಿಂಗ್ ಪದವೀಧರರು ಇಂದೇ ಅರ್ಜಿ ಸಲ್ಲಿಸಿ

(LIC AAO Prelims Result 2025 out follow these steps to check your result)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories