Mysore District Court Recruitment 2023 : 10 ನೇ ತರಗತಿ ಪಿಯುಸಿ, ಡಿಪ್ಲೊಮಾ ಪಾಸಾದವರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

ಮೈಸೂರು ಜಿಲ್ಲಾ ನ್ಯಾಯಾಲಯದ ನೇಮಕಾತಿ (Mysore District Court Recruitment 2023) ಅಧಿಕೃತ ಅಧಿಸೂಚನೆ ಏಪ್ರಿಲ್ 2023 ರ ಮೂಲಕ ಪ್ಯೂನ್, ಸ್ಟೆನೋಗ್ರಾಫರ್, ಟೈಪಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.‌

ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಮೈಸೂರು ಜಿಲ್ಲಾ ನ್ಯಾಯಾಲಯ
ಹುದ್ದೆಗಳ ಸಂಖ್ಯೆ : 59 ಹುದ್ದೆಗಳು
ಉದ್ಯೋಗ ಸ್ಥಳ : ಮೈಸೂರು
ಹುದ್ದೆಯ ಹೆಸರು : ಪ್ಯೂನ್, ಸ್ಟೆನೋಗ್ರಾಫರ್, ಟೈಪಿಸ್ಟ್
ವೇತನ : ರೂ.17000-52650/- ಪ್ರತಿ ತಿಂಗಳು

ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ವಿವರ :
ಪ್ಯೂನ್ : 45 ಹುದ್ದೆಗಳು
ಟೈಪಿಸ್ಟ್ : 3 ಹುದ್ದೆಗಳು
ಸ್ಟೆನೋಗ್ರಾಫರ್ ಗ್ರೇಡ್-III : 11 ಹುದ್ದೆಗಳು

ವಿದ್ಯಾರ್ಹತೆ ವಿವರ :
ಮೈಸೂರು ಜಿಲ್ಲಾ ನ್ಯಾಯಾಲಯದ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿ ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್‌ನಲ್ಲಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ ವಿವರ :
ಮೈಸೂರು ಜಿಲ್ಲಾ ನ್ಯಾಯಾಲಯದ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಜೂಲಾಯಿ 04, 2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ :
SC/ST/Cat-I ಅಭ್ಯರ್ಥಿಗಳು : 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳು : 03 ವರ್ಷಗಳು
PH/ವಿಧವೆ ಅಭ್ಯರ್ಥಿಗಳು : 10 ವರ್ಷಗಳು

ಪ್ಯೂನ್ ಹುದ್ದೆಗಳಿಗೆ ಅರ್ಜಿ ಶುಲ್ಕ:
SC/ST/Cat-I & PH ಅಭ್ಯರ್ಥಿಗಳು : ಇಲ್ಲ
Cat-2A/2B/3A & 3B ಅಭ್ಯರ್ಥಿಗಳು : ರೂ.100/-
ಸಾಮಾನ್ಯ ಅಭ್ಯರ್ಥಿಗಳು : ರೂ.200/-

ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಶುಲ್ಕ:
PH ಅಭ್ಯರ್ಥಿಗಳು : ಇಲ್ಲ
ಕ್ಯಾಟ್-2ಬಿ ಅಭ್ಯರ್ಥಿಗಳು : ರೂ.150/-
ಸಾಮಾನ್ಯ ಅಭ್ಯರ್ಥಿಗಳು : ರೂ.300/-

ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಶುಲ್ಕ :
SC/ST/Cat-I & PH ಅಭ್ಯರ್ಥಿಗಳು : ಇಲ್ಲ
Cat-2A/2B/3A & 3B ಅಭ್ಯರ್ಥಿಗಳು : ರೂ.150/-
ಸಾಮಾನ್ಯ ಅಭ್ಯರ್ಥಿಗಳು : ರೂ.300/-

ಪಾವತಿ ವಿಧಾನ :
ಮೈಸೂರು ಜಿಲ್ಲಾ ನ್ಯಾಯಾಲಯದ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಆನ್‌ಲೈನ್/ಚಲನ್‌ ರೂಪದಲ್ಲಿ ಪಾವತಿಸಬೇಕಾಗಿದೆ.

ಆಯ್ಕೆ ಪ್ರಕ್ರಿಯೆ:
ಮೈಸೂರು ಜಿಲ್ಲಾ ನ್ಯಾಯಾಲಯದ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ಸಂಬಳ (ತಿಂಗಳಿಗೆ)ದ ವಿವರ :
ಪ್ಯೂನ್ : ರೂ.17000-28950/-
ಬೆರಳಚ್ಚುಗಾರ : ರೂ.21400-42000/-
ಸ್ಟೆನೋಗ್ರಾಫರ್ ಗ್ರೇಡ್-III : ರೂ.27650-52650/-

ಇದನ್ನೂ ಓದಿ : KSEDCL ನೇಮಕಾತಿ 2023 : ಸಹಾಯಕ ಹುದ್ದೆಗಳಿಗೆ ಉದ್ಯೋಗಾವಕಾಶ, ವೇತನ 97100 ರೂ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05 ಜೂನ್‌ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04 ಜುಲೈ 2023
ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 08 ಜುಲೈ 2023

Mysore District Court Recruitment 2023 : Job opportunity for 10th PUC, Diploma pass, apply immediately

Comments are closed.