KL Rahul LSG : ರಾಹುಲ್ ಫೇಲ್ ಆದ್ರೆ ಎಲ್‌ಎಸ್‌ಜಿ ಧಮ್ ಕೇ ಧಾರ್ ಧಮಾಕ, ಐಪಿಎಲ್‌ನಲ್ಲಿ ಏನಿದು ವಿಚಿತ್ರ?

ಬೆಂಗಳೂರು : ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಐಪಿಎಲ್-2023 (IPL 2023) ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಬ್ಯಾಟಿಂಗ್’ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡದಿದ್ದರೂ ನಾಯಕತ್ವದಲ್ಲಿ (KL Rahul LSG) ರಾಹುಲ್ ಗಮನ ಸೆಳೆಯುತ್ತಿದ್ದಾರೆ.

ರಾಗುಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿರುವ 8 ಪಂದ್ಯಗಳಲ್ಲಿ 5ನ್ನು ಗೆದ್ದು 3ರಲ್ಲಿ ಸೋತು ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನುಳಿದ 6 ಪಂದ್ಯಗಳಲ್ಲಿ 3ನ್ನು ಗೆದ್ದರೂ ಲಕ್ನೋ ತಂಡ ಪ್ಲೇ ಆಫ್ ಹಂತಕ್ಕೇರಲಿದೆ.

ಶುಕ್ರವಾರ ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್’ಗಳಲ್ಲಿ 257 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿ, 56 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ನಾಯಕ ರಾಹುಲ್ ಕೇವಲ 12 ರನ್ನಿಗೆ ಔಟಾಗಿದ್ದರು. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ರಾಹುಲ್ ಕಡಿಮೆ ಮೊತ್ತಕ್ಕೆ ಔಟಾದಾಗಲೆಲ್ಲಾ ಈ ಬಾರಿಯ ಐಪಿಎಲ್’ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ದೊಡ್ಡ ಮೊತ್ತ ಗಳಿಸಿದೆ.

LSG ಮೊತ್ತ ಮತ್ತು ರಾಹುಲ್ ಗಳಿಸಿದ ರನ್
257 vs ಪಂಜಾಬ್ ಕಿಂಗ್ಸ್- ರಾಹುಲ್ 12 (9)
213 vs ರಾಯಲ್ ಚಾಲೆಂಜರ್ಸ್- ರಾಹುಲ್ 18 (20)
205 vs ಚೆನ್ನೈ ಸೂಪರ್ ಕಿಂಗ್ಸ್- ರಾಹುಲ್ 20 (18)
193 vs ಡೆಲ್ಲಿ ಕ್ಯಾಪಿಟಲ್ಸ್- ರಾಹುಲ್ 8 (12)

159 vs ಪಂಜಾಬ್ ಕಿಂಗ್ಸ್- ರಾಹುಲ್ 74 (56)
154 vs ರಾಜಸ್ಥಾನ್ ರಾಯಲ್ಸ್- ರಾಹುಲ್ 39 (32)
128 vs ಗುಜರಾತ್ ಟೈಟನ್ಸ್- ರಾಹುಲ್ 68 (61)
127 vs ಸನ್ ರೈಸರ್ಸ್ ಹೈದರಾಹಾದ್- ರಾಹುಲ್ 35 (31)

ಇದನ್ನೂ ಓದಿ : WFI ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 2 ಎಫ್ಐಆರ್ : ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳ ಪ್ರತಿಭಟನೆ

ಇದನ್ನೂ ಓದಿ : ಅಜಿಂಕ್ಯ ರಹಾನೆಗೆ ಟೀಮ್ ಇಂಡಿಯಾ ಟಿಕೆಟ್ ಕೊಡಿಸಿತು ಧೋನಿ ಜೊತೆಗಿನ ಅದೊಂದು ಫೋನ್ ಕಾಲ್

ಐಪಿಎಲ್’ನಲ್ಲಿ ಪ್ರತೀ ವರ್ಷ ಅಬ್ಬರಿಸುವ ರಾಹುಲ್ ಈ ಬಾರಿ ಯಾಕೋ ಅಷ್ಟಾಗಿ ಸದ್ದು ಮಾಡ್ತಿಲ್ಲ. ಆಡಿರುವ 8 ಪಂದ್ಯಗಳಿಂದ 34.25ರ ಸರಾಸರಿಯಲ್ಲಿ 114.64ರ ಸ್ಟ್ರೈಕ್’ರೇಟ್’ನಲ್ಲಿ ರಾಹುಲ್ 274 ರನ್’ಗಳನ್ನಷ್ಟೇ ಕಲೆ ಹಾಕಿದ್ದಾರೆ.

ಇದನ್ನೂ ಓದಿ : ಮಹಿಳಾ ಕ್ರಿಕೆಟ್ ತಂಡದ ಕಾಂಟ್ರಾಕ್ಟ್ ಲಿಸ್ಟ್ ಪ್ರಕಟಿಸಿದ ಬಿಸಿಸಿಐ, ಯಾರಿಗೆಷ್ಟು ಲಕ್ಷ? ಪಟ್ಟಿಯಲ್ಲಿ ಕರ್ನಾಟಕದ ಆಟಗಾರ್ತಿಯರೆಷ್ಟು?

KL Rahul LSG : Rahul fail adre LSG dham ke dhar dhamaka, what is strange in IPL?

Comments are closed.