ಪಿಕಾರ್ಡ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಬೆಂಗಳೂರು : ಕರ್ನಾಟಕದಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಲೆಕ್ಕಾಧಿಕಾರಿಗಳು, ಹಿರಿಯ ಲೆಕ್ಕಾಧಿಕಾರಿಗಳು, ಪ್ರಥಮ ದರ್ಜೆ ಸಹಕಾರು, ಕಿರಿಯ ಕ್ಷೇತ್ರಾಧಿಕಾರಿಗಳು, ಬೆರಳಚ್ಚುಗಾರ/ಗಣಕಯಂತ್ರ ನಿರ್ವಾಹಕರು, ಸಹಾಯಕರು, ಜವಾನರು ಸೇರಿದಂತೆ ಒಟ್ಟು 43 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ :
ಲೆಕ್ಕಾಧಿಕಾರಿಗಳ ಹುದ್ದೆ : ಬಿಕಾಂ/ಬಿಬಿಎಂ/ಬಿಬಿಎ/ಬಿಸಿಎ/ಪದವಿ ಪಡೆದಿರಬೇಕು.
ಹಿರಿಯ ಲೆಕ್ಕಾಧಿಕಾರಿ /ಎಫ್ ಡಿಎ ಹುದ್ದೆ : ಯಾವುದೇ ವಿಷಯದಲ್ಲಿ ಪದವಿ.
ಹಿರಿಯ ಕ್ಷೇತ್ರಾಧಿಕಾರಿ/ಬೆರಳಚ್ಚುಗಾರ ಹುದ್ದೆ : ದ್ವಿತೀಯ ಪಿಯುಸಿ
ಸಹಾಯಕ ಹುದ್ದೆ : ಎಸ್ಎಸ್ಎಲ್ ಸಿ
ಜವಾನ ಹುದ್ದೆ : 8ನೇ ತರಗತಿ ವಿದ್ಯಾರ್ಹತೆ

ವಯೋಮಿತಿ : ಅರ್ಜಿಗಳನ್ನು ಸಲ್ಲಿಸಲು ಅಭ್ಯರ್ಥಿಗೆ ಕನಿಷ್ಠ 18 ಗರಿಷ್ಠ 40 ದಾಟಿರಬಾರದು.
ಅರ್ಜಿ ಶುಲ್ಕ : ಅರ್ಜಿ ಶುಲ್ಕ 500 ರೂ. ಮತ್ತು 30 ರೂ. ಅಂಚೆ ಶುಲ್ಕ ( ಅರ್ಜಿ ಶುಲ್ಕವನ್ನು ಯಾವುದೇ ವಿದ್ಯುನ್ಮಾನ ಅಂಚೆ ಕಚೇರಿಯಲ್ಲಿ ಎಪ್ರಿಲ್ 17ರ ಒಳಗಾಗಿ ಪಾವತಿ ಮಾಡಬಹುದು)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 16
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ http://sahakara.kar.gov.in/home.html ಕ್ಲಿಕ್ ಮಾಡಿ.

Leave A Reply

Your email address will not be published.