ಬ್ಯಾಂಕ್‌ ಆಫೀಸರ್‌ ಆಗುವ ಸುವರ್ಣಾವಕಾಶ: ಪಿಎಸ್‌ಬಿಯಲ್ಲಿ 1000 ಲೋಕಲ್‌ ಆಫೀಸರ್‌ ಹುದ್ದೆಗೆ ಅರ್ಜಿ ಹಾಕಿ

PSB LBO Recruitment 2026: ಬ್ಯಾಂಕ್‌ನಲ್ಲಿ ಆಫೀಸರ್‌ ಹುದ್ದೆ ಹೊಂದಬೇಕೆಂದು ತಯಾರಿ ನಡೆಸುತ್ತಿರುವವರಿಗೆ ಸಿಹಿ ಸುದ್ದಿ. ಪಂಜಾಬ್‌ ಆಂಡ್‌ ಸಿಂಧ್‌ ಬ್ಯಾಂಕ್‌ ಲೋಕಲ್‌ ಆಫಿಸರ್‌ ಹುದ್ದೆಗೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಅಧಿಕೃತ ಪ್ರಕಟಣೆಯ ಪ್ರಕಾರ ಪಿಎಸ್‌ಬಿ ದೇಶದ ವಿವಿಧ ರಾಜ್ಯಗಳಲ್ಲಿ 1000 ಲೋಕಲ್‌ ಆಫೀಸರ್‌ಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು ಏಪ್ರಿಲ್‌ 20 ರೊಳಗೆ ಅಭ್ಯರ್ಥಿಗಳು ಪಿಎಸ್‌ಬಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತೆಗಳೇನು ಎಂದು ತಿಳಿಯೋಣ.

ವಿದ್ಯಾರ್ಹತೆ

ಪಿಎಸ್‌ಬಿಯ ಲೋಕಲ್‌ ಆಫೀಸರ್‌ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಸ್ಟ್ರೀಮ್‌ನಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಹೊಂದಿರಬೇಕು. ಜೊತೆಗೆ ಯಾವುದಾದರೂ ರೂರಲ್‌ ಬ್ಯಾಂಕ್‌ನಲ್ಲಿ ಆಫೀಸರ್‌ ಆಗಿ ಕನಿಷ್ಠ 18 ತಿಂಗಳುಗಳ ಅನುಭವ ಹೊಂದಿರಬೇಕು.

ವಯೋಮಿತಿ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷಗಳು ಹಾಗೂ ಗರಿಷ್ಠ ವಯಸ್ಸು 30 ವರ್ಷಗಳು. ಅಂದರೆ ಅಭ್ಯರ್ಥಿಗಳು 2 ಮಾರ್ಚ್‌ 1996 ರಿಂದ 1 ಮಾರ್ಚ್‌ 2006 ರ ನಡುವೆ ಜನಿಸಿರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಇದನ್ನೂ ಓದಿ: ಬ್ಯಾಂಕ್‌ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಗುಡ್‌ ನ್ಯೂಸ್‌! ಬ್ಯಾಂಕ್‌ ಆಫ್‌ ಬರೋಡಾ ದಿಂದ 104 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ

ಲೋಕಲ್‌ ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಜನರಲ್‌/ಓಬಿಸಿ/ಇಡಬ್ಲ್ಯೂಎಸ್‌ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 850 ರೂ.+ ಟ್ಯಾಕ್ಸ್‌ ಸೇರಿಸಿ ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ, ಪಿಡ್ಬ್ಲೂಡಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 100 ರೂ.+ಟ್ಯಾಕ್ಸ್‌ ಪಾವತಿಸಬೇಕು.

PSB LBO Recruitment 2006
ರಾಜ್ಯವಾರು ನೇಮಕಾತಿ ಪಟ್ಟಿ

ಅರ್ಜಿ ಸಲ್ಲಿಕೆ ಹೇಗೆ?

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮೊದಲಿಗೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ ibps.in/psbmar26/ ಗೆ ಭೇಟಿ ನೀಡಿ.

  • ಅಲ್ಲಿ ‘ಕ್ಲಿಕ್‌ ಹಿಯರ್‌ ಫಾರ್‌ ನ್ಯೂ ರೆಜಿಸ್ಟ್ರೇಷನ್‌’ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಅಗತ್ಯವಿರುವ ಮಾಹಿತಿ ನೀಡಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.

  • ನಂತರ ಅರ್ಜಿ ನಮೂನೆಯಲ್ಲಿ ಕೇಳಿದ ಉಳಿದ ಮಾಹಿತಿ ಭರ್ತಿ.

  • ಬಳಿಕ ನಿಮ್ಮ ಫೋಟೋ ಅಪ್ಲೋಡ್‌ ಮಾಡಿ. ಅರ್ಜಿ ಶುಲ್ಕ ಪಾವತಿಸಿ. ಕೊನೆಯದಾಗಿ ಇನ್ನೊಮ್ಮೆ ಅರ್ಜಿ ಪರಿಶೀಲಿಸಿ ಸಲ್ಲಿಸಿ.

  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯ ಮುದ್ರಣ ತೆಗೆದುಕೊಳ್ಳಿ.

 

 

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories