RBI Recruitment 2022: ರಿಸರ್ವ್ ಬ್ಯಾಂಕ್‌ನಲ್ಲಿ 950 ಹುದ್ದೆಗಳು ಖಾಲಿ; 36,091 ರೂ.ವರೆಗೂ ಸಂಬಳ, ಇನ್ನಷ್ಟು ವಿವರ ಓದಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿವಿಧ ಸ್ಥಳಗಳಲ್ಲಿರುವ ತನ್ನ ಕಚೇರಿಗಳಲ್ಲಿ ಸಹಾಯಕರ ಹುದ್ದೆಗೆ (Employment News 2022) ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹುದ್ದೆಗಳಿಗೆ ಅರ್ಹರಾಗಿರುವ ಉದ್ಯೋಗಾಕಾಂಕ್ಷಿಗಳು (RBI Recruitment 2022) ಅಧಿಕೃತ ವೆಬ್‌ಸೈಟ್, rbi.org.in ಮೂಲಕ ನಿಗದಿತ ಸ್ವರೂಪದ ಪ್ರಕಾರ ಅರ್ಜಿ ಸಲ್ಲಿಸಬಹುದು.

ಅಧಿಕೃತ ಅಧಿಸೂಚನೆಯ ಪ್ರಕಾರ RBI ಸಹಾಯಕ ನೇಮಕಾತಿ 2022 ನೋಂದಣಿಗಳು ಫೆಬ್ರವರಿ 17, 2022 ರಿಂದ ಪ್ರಾರಂಭವಾಗುತ್ತವೆ. ಆನ್‌ಲೈನ್ ಅರ್ಜಿ ನಮೂನೆಗಳನ್ನು ಸಲ್ಲಿಸಲು ಮತ್ತು ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ ಮಾರ್ಚ್ 8, 2022 ಆಗಿದೆ. ಒಟ್ಟು 950 ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಆರ್‌ಬಿಐ ಸಹಾಯಕ ನೇಮಕಾತಿಗಾಗಿ ಅರ್ಹತೆ, ವೇತನ ಮತ್ತು ಇತರ ವಿವರಗಳ ವಿವರವಾದ ಜಾಹೀರಾತನ್ನು ಫೆಬ್ರವರಿ ಮೂರನೇ ವಾರದಲ್ಲಿ ಆರ್‌ಬಿಐ- www.rbi.org.in ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ಎಂಪ್ಲಾಯ್‌ಮೆಂಟ್ ನ್ಯೂಸ್‌ನಲ್ಲಿಯೂ ಲಭ್ಯವಿರುತ್ತದೆ ಎಂದು ಬ್ಯಾಂಕ್ ಪ್ರಕಟಿಸಿರುವ  ಕಿರು ಸೂಚನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

RBI ಸಹಾಯಕ ನೇಮಕಾತಿ 2022 ರ ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ ಮತ್ತು ಶುಲ್ಕ ಪಾವತಿ: ಫೆಬ್ರವರಿ 17, 2022.

ಆನ್‌ಲೈನ್ ಅಪ್ಲಿಕೇಶನ್‌ನ ಕೊನೆಯ ದಿನಾಂಕ: ಮಾರ್ಚ್ 8, 2022.

RBI ಸಹಾಯಕ ಆನ್‌ಲೈನ್ ಪರೀಕ್ಷೆಯ ದಿನಾಂಕ (ತಾತ್ಕಾಲಿಕವಾಗಿ): ಮಾರ್ಚ್ 26-27, 2022.

ಹುದ್ದೆಯ ವಿವರಗಳು
ಒಟ್ಟು ಸಹಾಯ ಪೋಸ್ಟ್‌ಗಳು- 950

ಸಂಬಳದ ವಿವರಗಳು
ಆಯ್ಕೆಯಾದ ಅಭ್ಯರ್ಥಿಯು 36091/- (ತಿಂಗಳಿಗೆ) ಮೂಲ ವೇತನವನ್ನು ಪಡೆಯುತ್ತಾರೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

RBI ಸಹಾಯಕ ನೇಮಕಾತಿ 2022 ಗಾಗಿ ಅರ್ಹತಾ ಮಾನದಂಡಗಳು

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಯು ಯಾವುದೇ ವಿಭಾಗದಲ್ಲಿ ಕನಿಷ್ಠ 50% ಅಂಕಗಳೊಂದಿಗೆ (SC/ST/PWD ಅಭ್ಯರ್ಥಿಗಳಿಗೆ ಉತ್ತೀರ್ಣ ವರ್ಗ) ಪದವಿಯನ್ನು ಹೊಂದಿರಬೇಕು.

RBI ಸಹಾಯಕ ನೇಮಕಾತಿ 2022 ರ ವಯಸ್ಸಿನ ಮಿತಿ

ಅರ್ಜಿದಾರರ ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು

ಆಯ್ಕೆ ಪ್ರಕ್ರಿಯೆ

ಈ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ರಾಷ್ಟ್ರವ್ಯಾಪಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಸಲಾಗುವುದು. ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯಲಿದೆ – ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಂತರ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT).

RBI ಸಹಾಯಕ ನೇಮಕಾತಿ 2022 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು RBI ವೆಬ್‌ಸೈಟ್ rbi.org.in ಮೂಲಕ ಫೆಬ್ರವರಿ 17, 2022 ರಿಂದ ಮಾರ್ಚ್ 08, 2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಬ್ಯಾಂಕ್‌ನ ವೆಬ್‌ಸೈಟ್-– rbi.org.in ಮೂಲಕ ಆನ್‌ಲೈನ್ ಮೋಡ್‌ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕಾಗುತ್ತದೆ.

Gen/EWS/OBC ಅಭ್ಯರ್ಥಿಗಳಿಗೆ: 450.

SC/ST/PWD/EXS. (ಇಟಿಮೇಶನ್ ಶುಲ್ಕಗಳು): ರೂ.50/-

ಸಿಬ್ಬಂದಿ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಮತ್ತು ಮಾಹಿತಿ ಶುಲ್ಕಗಳ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.

ಇದನ್ನೂ ಓದಿ: Job Alert 2022: ತಾಳೆಗರಿ ಓಲೆಗಳ ಸಂರಕ್ಷಣೆ, ಛಾಯಾ ಡಿಜಿಟಲೀಕರಣ, ಗ್ರಂಥಸೂಚಿ ಕೆಲಸಕ್ಕೆ ಮೈಸೂರಿನಲ್ಲಿ ಇದೆ ಉದ್ಯೋಗಾವಕಾಶ

(RBI Recruitment 2022 apply for 950 Assistant Posts check salary and work culture details)

Comments are closed.