Sahitya Akademi Recruitment 2022 : ಸಾಹಿತ್ಯ ಅಕಾಡೆಮಿಯಲ್ಲಿ ಸ್ಟೆನೋಗ್ರಾಫರ್ ಹಾಗೂ ಉಪ ಸಂಪಾದಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಹಿತ್ಯ ಅಕಾಡೆಮಿಯಲ್ಲಿ(Sahitya Akademi Recruitment 2022) ಖಾಲಿರುವ ಸ್ಟೆನೋಗ್ರಾಫರ್ ಮತ್ತು ಉಪ ಸಂಪಾದಕ ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೆಂಬರ್ 28,2022ರ ಮೊದಲು ಆಫ್‌ಲೈನ್‌ ಅಥವಾ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸಾಹಿತ್ಯ ಅಕಾಡೆಮಿಯಲ್ಲಿ ಖಾಲಿ ಹುದ್ದೆಗಳ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಸಾಹಿತ್ಯ ಅಕಾಡೆಮಿ (ಸಾಹಿತ್ಯ ಅಕಾಡೆಮಿ)
ಹುದ್ದೆಗಳ ಸಂಖ್ಯೆ : 10
ಉದ್ಯೋಗ ಸ್ಥಳ : ಕೋಲ್ಕತ್ತಾ – ಬೆಂಗಳೂರು – ನವದೆಹಲಿ
ಹುದ್ದೆಯ ಹೆಸರು : ಸ್ಟೆನೋಗ್ರಾಫರ್, ಉಪ ಸಂಪಾದಕ
ವೇತನ : ರೂ.25500-177500/- ಪ್ರತಿ ತಿಂಗಳು

ಸಾಹಿತ್ಯ ಅಕಾಡೆಮಿಯಲ್ಲಿ ಖಾಲಿರುವ ಹುದ್ದೆ ಹೆಸರು ಹಾಗೂ ಹುದ್ದೆಗಳ ಸಂಖ್ಯೆ ವಿವರ :
ಸಹಾಯಕ ಸಂಪಾದಕ : 1 ಹುದ್ದೆ
ಮಾರಾಟ ಮತ್ತು ಪ್ರದರ್ಶನ ಸಹಾಯಕ : 1 ಹುದ್ದೆ
ಹಿರಿಯ ಅಕೌಂಟೆಂಟ್ : 1 ಹುದ್ದೆ
ಉಪ ಸಂಪಾದಕ : 2 ಹುದ್ದೆಗಳು
ತಾಂತ್ರಿಕ ಸಹಾಯಕ : 1 ಹುದ್ದೆ
ರಿಸೆಪ್ಷನಿಸ್ಟ್ ಮತ್ತು ಟೆಲಿಫೋನ್ ಆಪರೇಟರ್ : 1 ಹುದ್ದೆ
ಸ್ಟೆನೋಗ್ರಾಫರ್ ಗ್ರೇಡ್ – II : 3 ಹುದ್ದೆ

ಸಾಹಿತ್ಯ ಅಕಾಡೆಮಿ ನೇಮಕಾತಿಯಲ್ಲಿ ಖಾಲಿರುವ ಹುದ್ದೆಗಳಿಗೆ ಅನುಸಾರವಾಗಿ ಬೇಕಾಗಿರುವ ವಿದ್ಯಾರ್ಹತೆ ವಿವರ :
ಸಹಾಯಕ ಸಂಪಾದಕ ಸ್ನಾತಕೋತ್ತರ : ಪದವಿ
ಮಾರಾಟ ಮತ್ತು ಪ್ರದರ್ಶನ ಸಹಾಯಕ : ಪದವಿ
ವಾಣಿಜ್ಯಶಾಸ್ತ್ರದಲ್ಲಿ ಹಿರಿಯ ಅಕೌಂಟೆಂಟ್ : ಪದವಿ
ಉಪ ಸಂಪಾದಕ : ಪದವಿ
ತಾಂತ್ರಿಕ ಸಹಾಯಕ : ಡಿಪ್ಲೊಮಾ, ಪದವಿ
ರಿಸೆಪ್ಷನಿಸ್ಟ್ ಮತ್ತು ಟೆಲಿಫೋನ್ ಆಪರೇಟರ್ : ಪದವಿ
ಸ್ಟೆನೋಗ್ರಾಫರ್ ಗ್ರೇಡ್ – II : ದ್ವಿತೀಯ ಪಿಯುಸಿ
ಮೇಲೆ ತಿಳಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಉತ್ತೀರ್ಣರಾಗಿರಬೇಕು.

ಸಾಹಿತ್ಯ ಅಕಾಡೆಮಿ ನೇಮಕಾತಿಯಲ್ಲಿ ಖಾಲಿರುವ ಹುದ್ದೆಗಳಿಗೆ ಅನುಸಾರವಾಗಿ ಬೇಕಾಗಿರುವ ವಯೋಮಿತಿ ವಿವರ :
ಸಹಾಯಕ ಸಂಪಾದಕ : 40 ವರ್ಷ
ಮಾರಾಟ ಮತ್ತು ಪ್ರದರ್ಶನ ಸಹಾಯಕ : 40 ವರ್ಷ
ಹಿರಿಯ ಅಕೌಂಟೆಂಟ್ : 40 ವರ್ಷ
ಉಪ ಸಂಪಾದಕ : 35 ವರ್ಷ
ತಾಂತ್ರಿಕ ಸಹಾಯಕ : 35 ವರ್ಷ
ರಿಸೆಪ್ಷನಿಸ್ಟ್ ಮತ್ತು ಟೆಲಿಫೋನ್ ಆಪರೇಟರ್ : 30 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ – II : 30 ವರ್ಷ

ಆಯ್ಕೆ ಪ್ರಕ್ರಿಯೆ :
ಸಾಹಿತ್ಯ ಅಕಾಡೆಮಿಯಲ್ಲಿ ಖಾಲಿರುವ ಹುದ್ದೆಗಳ ನೇಮಕಾತಿಯಲ್ಲಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಾಹಿತ್ಯ ಅಕಾಡೆಮಿ ನೇಮಕಾತಿಯಲ್ಲಿ ಖಾಲಿರುವ ಹುದ್ದೆಗಳಿಗೆ ಅನುಸಾರವಾಗಿ ವೇತನದ ವಿವರ :

ಸಹಾಯಕ ಸಂಪಾದಕ : ರೂ.56100-177500/-
ಮಾರಾಟ ಮತ್ತು ಪ್ರದರ್ಶನ ಸಹಾಯಕ : ರೂ.35400-112400/-
ಹಿರಿಯ ಅಕೌಂಟೆಂಟ್ : ರೂ.35400-112400/-
ಉಪ ಸಂಪಾದಕ : ರೂ.35400-112400/-
ತಾಂತ್ರಿಕ ಸಹಾಯಕ : ರೂ.35400-112400/-
ಸ್ವಾಗತಕಾರರು ಮತ್ತು ದೂರವಾಣಿ ನಿರ್ವಾಹಕರು : ರೂ.25500-81,100/-
ಸ್ಟೆನೋಗ್ರಾಫರ್ ಗ್ರೇಡ್ – II : ರೂ.25500-81,100/-

ಸಾಹಿತ್ಯ ಅಕಾಡೆಮಿ ನೇಮಕಾತಿ (ಸ್ಟೆನೋಗ್ರಾಫರ್, ಸಬ್ ಎಡಿಟರ್)ಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ :
ಸಾಹಿತ್ಯ ಅಕಾಡೆಮಿಯಲ್ಲಿ ಖಾಲಿರುವ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್‌ ಹಾಗೂ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ) ಕಾರ್ಯದರ್ಶಿ, ಸಾಹಿತ್ಯ ಅಕಾಡೆಮಿ, ರವೀಂದ್ರ ಭವನ, 35 ಫಿರೋಜ್‌ಶಾಹ್ ರಸ್ತೆ, ನವದೆಹಲಿ – 110001 ಗೆ 28-ನವೆಂಬರ್-2022ರ ಮೊದಲು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಅಂಚೆ ಪೋಸ್ಟ್‌ಗಳ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕಗಳು :
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-10-2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-11-2022

ಇದನ್ನೂ ಓದಿ : NHB Recruitment 2022 : ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರು, ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

ಇದನ್ನೂ ಓದಿ : NAAC Recruitment 2022 : ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ ಉಪ ಸಲಹೆಗಾರರ ​​ಹುದ್ದೆಗೆ ಅರ್ಜಿ ಆಹ್ವಾನ

ಸಾಹಿತ್ಯ ಅಕಾಡೆಮಿ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಆದ sahitya-akademi.gov.in ಮೂಲಕ ಸಂಪರ್ಕಿಸಬಹುದಾಗಿದೆ.

Sahitya Akademi Recruitment 2022 Applications invited for the posts of Stenographer and Deputy Editor in Sahitya Academy

Comments are closed.