ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL), ಎಕ್ಸಿಕ್ಯುಟಿವ್ ಮತ್ತು ನಾನ್-ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿಗೆ (SAIL Recruitment 2022) ಅಧಿಸೂಚನೆ ಹೊರಡಿಸಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು sailcareers.com ಅಥವಾ sail.co.in ಗೆ ಭೇಟಿ ಕೊಡುವುದರ ಮೂಲಕ ಹೆಸರು ನೋಂದಾಯಿಸಿಕೊಂಡು, ಅರ್ಜಿ ನಮೂನೆಗಳನ್ನು ಭರ್ತಿ ಮಾಡಬಹುದು. ಸಂಸ್ಥೆಯು ಒಟ್ಟು 333 ಹುದ್ದೆಗಳನ್ನು ಭರ್ತಿ ಮಾಡಲಿದೆ.
ಹುದ್ದೆಗಳ ವಿವರ :
8 ಎಕ್ಸಿಕ್ಯುಟಿವ್ ಹುದ್ದೆಗಳು ಮತ್ತು 325 ನಾನ್–ಎಕ್ಸಿಕ್ಯುಟಿವ್ ಹುದ್ದೆಗಳು ಸೇರಿದಂತೆ ಒಟ್ಟು 333 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅರ್ಭರ್ಥಿಗಳಿಗೆ, ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ (ಸೆಪ್ಟೆಂಬರ್ 30, 2022)ದಂದು ಕನಿಷ್ಠ 18 ವರ್ಷಗಳಾಗಿರಬೇಕು ಮತ್ತು ಗರಿಷ್ಠ 28 ರಿಂದ 30 ವರ್ಷಗಳೊಳಗಿರಬೇಕು.
ಅರ್ಹತೆ :
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ B.E./B.Tech ಪದವಿ ಪಡೆದಿರಬೇಕು. ಅಭ್ಯರ್ಥಿಗಳು ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?
- ಮೊದಲು ಸ್ಟೀಲ್ ಅಥೋರಟಿ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ sail.co.in ಗೆ ಹೋಗಿ.
- ನಂತರ ಮುಖಪುಟ (ಹೋಮ್ ಪೇಜ್) ದ ಮೇಲ್ಭಾಗದಲ್ಲಿರುವ ಕೆರಿಯರ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ರೂರ್ಕೆಲಾ ಸ್ಟೀಲ್ ಪ್ಲಾಂಟ್- ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ ವಿವಿಧ ತಾಂತ್ರಿಕ ಹುದ್ದೆಗಳ ನೇಮಕಾತಿ ಎಂದು ಓದುವ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ.
*ನಂತರ ಅಗತ್ಯ ಮಾಹಿತಿಗಳನ್ನು ಒದಗಿಸಿ ಲಾಗಿನ್ ಆಗಿ. - ಫಾರ್ಮ್ ಭರ್ತಿ ಮಾಡಿ.
- ಅಗತ್ಯವಿದ್ದರೆ ಶುಲ್ಕವನ್ನು ಪಾವತಿಸಿ.
- ಫಾರ್ಮ್ ಅನ್ನು ಸಲ್ಲಿಸಿ.
- ರೆಫರೆನ್ಸ್‌ಗಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಇದನ್ನೂ ಓದಿ : NavIC Navigation System: ಏನಿದು ಭಾರತದ NavIC? ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತಾ
(SAIL Recruitment 2022 today is the last date for application)