Beautiful Train Journeys : ಜೀವನದಲ್ಲಿ ಒಮ್ಮೆಯಾದರೂ ಈ 5 ಸುಂದರ ರೈಲು ಪ್ರಯಾಣಗಳನ್ನು ಮಾಡಿ

ಭಾರತದ ಅತಿದೊಡ್ಡ ನಾಗರಿಕ ಸಂಪರ್ಕ ಮಾರ್ಗಗಳಲ್ಲಿ ರೈಲು ಮಾರ್ಗವೂ (Railway) ಒಂದು. ಸಮುದ್ರ, ಬೆಟ್ಟ, ಪ್ರಸ್ಥಭೂಮಿ, ಜಲಪಾತ, ರಾಷ್ಟ್ರೀಯ ಗಡಿಗಳುದ್ದಕ್ಕೂ ರೈಲು ಮಾರ್ಗ ವ್ಯಾಪಿಸಿದೆ. ವಿಶ್ವದ ಅತಿದೊಡ್ಡ ರೈಲು ಜಾಲಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದು ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸುತ್ತದೆ. ಹೀಗೆ ಅದು ಸಾಗುವ ಹಾದಿಗಳು ಅತ್ಯಾಕರ್ಷಕವಾಗಿದೆ (Beautiful Train Journeys). ರೈಲಿನ ಪ್ರಯಾಣ ನೀವು ತಲುಪಬೇಕಾದ ಸ್ಥಳಕ್ಕಷ್ಟೇ ಸೀಮಿತವಾಗಿಲ್ಲ, ಪ್ರಯಾಣದಲ್ಲಿ ನಿಮಗೆ ವಿಶ್ರಾಂತಿಯ ಜೊತೆಗೆ ಪ್ರಕೃತಿಯ ಸುಂದರ ದೃಶ್ಯಾವಳಿಗಳನ್ನು ನೋಡಿ ಆನಂದಿಸುವ ಅವಕಾಶ ನೀಡುತ್ತದೆ. ಇಂತಹ ಅನನ್ಯ ಅನುಭವ ನೀಡುವ ರೈಲು ಪ್ರಯಾಣಗಳು ಇವೆ. ಈ ರೈಲು ಮಾರ್ಗಗಳಲ್ಲಿ ಪ್ರವಾಸಕ್ಕೂ ಹೋಗಬಹುದು. ಅಪರೂಪದ ಸುಂದರ ಪ್ರವಾಸದ ಅನುಭವವನ್ನು ನಿಮ್ಮದಾಗಿಸಿಕೊಳ್ಳಬಹುದು.

ವಿಶಿಷ್ಟ ರೈಲು ಮಾರ್ಗಗಳ ಪ್ರವಾಸ ಕೈಗೊಳ್ಳುವ ಮನಸ್ಸಿದ್ದರೆ, ಇಲ್ಲಿ ಹೇಳಿರುವ ರೈಲು ಮಾರ್ಗಗಳನ್ನು ಆಯ್ದುಕೊಳ್ಳಬಹುದು. ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ರೈಲು ಮಾರ್ಗಗಳಿವು.

ಇದನ್ನೂ ಓದಿ : Mysore Tourist Places: ಮೈಸೂರಿನ ಈ ಅದ್ಭುತ ಪ್ರವಾಸ ತಾಣಗಳನ್ನ ಮಿಸ್ ಮಾಡದೇ ಭೇಟಿ ನೀಡಿ

  1. ಕೊಂಕಣ ರೈಲ್ವೇ :
    ಪ್ರಕೃತಿಯ ಸುಂದರ ದೃಶ್ಯದ ಅನುಭವ ಪಡೆಯಬೇಕೆಂದರೆ ಕೊಂಕಣ ರೇಲ್ವೇ ಸೂಕ್ತವಾಗಿದೆ. ಸಹ್ಯಾದ್ರಿಯ ಬೆಟ್ಟಗಳ ಸಾಲಿನ ಮಧ್ಯೆ ಸಾಗುವ ರೈಲು ನದಿ, ಹಳ್ಳ, ಜಲಪಾತ ಮತ್ತ ದುರ್ಗಮ ಕಾಡುಗಳ ಸೌಂದರ್ಯವನ್ನು ಆಸ್ವಾದಿಸಲು ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ಅನೇಕ ಸುರಂಗ ಮಾರ್ಗಗಳಲ್ಲೂ ಕೊಂಕಣ ರೇಲ್ವೆ ಸಾಗುತ್ತದೆ.
  2. ಮೆಟ್ಟುಪಾಳ್ಯಂನಿಂದ ಊಟಿ :
    ಊಟಿ ಮತ್ತು ಮೆಟ್ಟುಪಾಳ್ಯಂ ನಡುವೆ ಚಲಿಸುವ ರೈಲು ನೀಲಗಿರಿ ಪರ್ವತ ಶ್ರೇಣಿಗಳನ್ನು ಹಾದುಹೋಗುತ್ತದೆ. ಚಹಾ ತೋಟಗಳು, ಹಸಿರು ಬೆಟ್ಟಗಳು ಮತ್ತು ಎತ್ತರದ ಗ್ರೈಂಡರ್ ಸೇತುವೆಗಳ ಮೂಲಕ ಸಾಗುವ ಪ್ರಯಾಣವು ಸುಂದರವಾಗಿದೆ. ಈ ಮಾರ್ಗದಲ್ಲಿ ಸಿಗುವ ಲವ್‌ಡೇಲ್, ವೆಲ್ಲಿಂಗ್‌ಟನ್ ಮತ್ತು ಫರ್ನ್‌ಹಿಲ್ ನಿಲ್ದಾಣಗಳ ಹೆಸರುಗಳು ಸಹ ವಿಚಿತ್ರವಾಗಿದೆ. ಇದು 2005ರಲ್ಲಿ ವಿಶ್ವಪರಂಪರೆಯ ತಾಣಗಳ ಪಟ್ಟಿಗೆ ಸೇರಿದೆ. ಈ ರೈಲು ಮಾರ್ಗದಲ್ಲಿ ಅನೇಕ ಸಿನಿಮಾ ಶೂಟಿಂಗ್‌ಗಳು ನಡೆಯುತ್ತವೆ.
  3. ಕಲ್ಕಾದಿಂದ ಶಿಮ್ಲಾವರೆಗಿನ ಪ್ರಯಾಣ :
    ಶಿವಾಲಿಕ್ಸ್‌ ಮೂಲಕ ಹಾದುಹೋಗುವ ರೈಲು ಮಾರ್ಗವು, ಕಲ್ಕಾದಿಂದ ಶಿಮ್ಲಾವರೆಗಿನ ಒಂದು ಚಾರಣವೇ ಸರಿ. ಇದು ಭಾರತದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಹಿಮಾಲಯನ್‌ ಕ್ವೀನ್‌ ಟ್ರೈನ್‌ ಇದು ಅತಿ ಎತ್ತರದ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. 107 ಸುರಂಗಗಳು, 864 ಸೇತುವೆಗಳಲ್ಲಿ ಹಾದುಹೋಗುವ ರೈಲು ಹಿಮಾಲಯದ ಶಿಖರಗಳ ಮೇಲೆ ಪ್ರಯಾಣಿಸುತ್ತದೆ. ಇದು ಯುನಿಸ್ಕೋದಿಂದ ಮಾನ್ಯತೆ ಪಡೆದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸ್ಥಾನಗಳಿಸಿದೆ.
  4. ಜೈಪುರ್‌ ದಿಂದ ಜೈಸಲ್‌ಮೇರ್‌ :
    ಇದು ಡೆಸರ್ಟ್‌ ಕ್ವೀನ್‌ ರೈಲು ಮಾರ್ಗ. ಥಾರ್‌ ಮರಭೂಮಿಯಲ್ಲಿ ಚಲಿಸುವ ರೈಲು ಮರಭೂಮಿಯ ದೃಶ್ಯಗಳನ್ನು ನೋಡಲು ಅವಕಾಶ ಮಾಡಿಕೊಡುತ್ತದೆ. ಮರಳು ದಿಬ್ಬಗಳು, ಕಿಲೋಮೀಟರ್‌ಗಟ್ಟಲೆ ಕಾಣಿಸುವ ನಿರ್ಜನ ಮರಭೂಮಿ, ಪ್ರಾಣಿ ಸಂಕುಲ ಮತ್ತು ಮರಭೂಮಿಯ ಸಂಸ್ಕೃತಿ ಗಳನ್ನು ನೋಡಿ ಆನಂದಿಸಬಹುದಾಗಿದೆ.
  5. ನ್ಯೂ ಜಲ್‌ಪೈಗುರಿಯಿಂದ ಡಾರ್ಜಿಲಿಂಗ್‌ವರೆಗೆ:
    ಭಾರತದ ಅತ್ಯಂತ ಹಳೆಯ ಪರ್ವತ ರೈಲು ಮಾರ್ಗವೆಂದು ಪರಿಗಣಿಸಲಾಗಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲುಮಾರ್ಗವು ಕಾಂಚನಜುಂಗಾ ಸೇರಿದಂತೆ ಪರ್ವತ ಶ್ರೇಣಿಗಳ ರುದ್ರರಮಣೀಯ ದೃಶ್ಯಗಳನ್ನು ನೋಡುವ ಅವಕಾಶ ಕಲ್ಪಸುತ್ತದೆ. ಈ ರೈಲು ಮಾರ್ಗದ ವಿಶೇಷತೆಯಂದರೆ ಇದು ನೈಸರ್ಗಿಕ ತಿರುವುಗಳಲ್ಲಿ ಸಾಗುತ್ತದೆ. ಡಾರ್ಜಲಿಂಗ್‌ ಹಿಮಾಲಯನ್‌ ರೈಲ್ವೇ ಯುನೆಸ್ಕೋದಿಂದ ಮಾನ್ಯತೆ ಪಡೆದಿದೆ. ಇದು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದೆ.

ಇದನ್ನೂ ಓದಿ : A Trip to the Village : ನಗರಗಳಿಗೆ ಭೇಟಿ ನೀಡಿ ಬೇಜಾರಾಗಿದೆಯೇ ? ಹಾಗಾದರೆ, ಮುಂದಿನ ಸಲ ಈ ಹಳ್ಳಿಗಳಿಗೆ ಟ್ರಿಪ್‌ ಹೋಗಿ…

(Beautiful Train Journeys one should not miss this train journey)

Comments are closed.