ಸೌತ್‌ ಈಸ್ಟ್‌ ಸೆಂಟ್ರಲ್‌ ರೈಲ್ವೆಯಲ್ಲಿ ಅಪ್ರೆಟಂಟಿಸ್‌ಶಿಪ್‌ ನೇಮಕಾತಿ ಪ್ರಕಟ : ITI, SSLC ಆದವರು ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಿ

ಸೌತ್‌ ಈಸ್ಟ್‌ ಸೆಂಟ್ರಲ್‌ ರೈಲ್ವೆ ಖಾಲಿ ಇರುವ 1,079 ಅಪ್ರೆಂಟಿಸ್‌ಶಿಪ್‌ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬುದು ಬಹಳಷ್ಟು ಜನರ ಕನಸು. ಅದಕ್ಕಾಗಿ ಹಲವು ದಿನಗಳವರೆಗೆ ತಯಾರಿ ನಡೆಸುವವರೂ ಇದ್ದಾರೆ. ಪ್ರತಿವರ್ಷ ರೈಲ್ವೆ ಇಲಾಖೆ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಘೋಷಿಸುತ್ತಲೇ ಇರುತ್ತದೆ. ಅದೇ ರೀತಿ ಇದೀಗ ನಾಗ್ಪುರದ ಸೌತ್‌ ಈಸ್ಟ್‌ ಸೆಂಟ್ರಲ್‌ ರೈಲ್ವೆ ಖಾಲಿ ಇರುವ 1,079 ಅಪ್ರೆಂಟಿಸ್‌ಶಿಪ್‌ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಜೂನ್‌ 18 ಕೊನೆಯ ದಿನವಾಗಿದೆ. ಅಪ್ರೆಂಟಿಸ್‌ಶಿಪ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು apprenticeshipindia.gov.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ಅರ್ಹತಾ ಮಾನದಂಡಗಳನ್ನು ತಿಳಿದುಕೊಳ್ಳಿ.

ಅರ್ಜಿ ಶುಲ್ಕ

ಈ ನೇಮಕಾತಿಯಲ್ಲಿ ಎಲ್ಲ ವರ್ಗಗಳ ಅಬ್ಯರ್ಥಿಗಳು ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10 ನೇ ತರಗತಿ / ಮೆಟ್ರಿಕ್ಯುಲೇಷನ್‌ನಲ್ಲಿ ಉತ್ತೀರ್ಣರಾಗಿರಬೇಕು. ಹೆಚ್ಚುವರಿಯಾಗಿ, ಅವರು ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷದವರಾಗಿರಬೇಕು ಹಾಗೂ 24 ವರ್ಷಗಳ ಒಳಗೆ ಇರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಇದನ್ನೂ ಓದಿ: ಐಟಿಐ ಉತ್ತೀರ್ಣರಾದವರಿಗೆ ಸರ್ಕಾರಿ ನೌಕರಿ : CSIR-CIMFR ನಲ್ಲಿ ಟೆಕ್ನಿಷಿಯನ್ ಗ್ರೇಡ್ 2 ಹುದ್ದೆಗಳಿಗೆ ಅರ್ಜಿ ಹಾಕಿ

ಆಯ್ಕೆ ವಿಧಾನ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಅರ್ಹತೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್‌ ಮಾಡಲಾಗುತ್ತದೆ. ಮೆರಿಟ್‌ ಪಟ್ಟಿಯಲ್ಲಿ ಆಯ್ಕೆಯಾದವರು ದಾಖಲೆ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ನೇಮಕಾತಿ ಪತ್ರ ನೀಡುವ ಮೊದಲು ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ಈ ನೇಮಕಾತಿಗೆ ಅರ್ಜಿಗಳನ್ನು ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಸಲ್ಲಿಸಬಹುದು. ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ನಂತರ ಲಾಗಿನ್‌ ಆಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಿಸಿ. ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿರುವುದರಿಂದ ಯಾವುದೇ ರೀತಿಯ ಶುಲ್ಕ ಪಾವತಿ ಇರುವುದಿಲ್ಲ. ಅರ್ಜಿ ಸಲ್ಲಿಸುವ ಮೊದಲು ಫಾರಂ ಅನ್ನು ಸಂಪೂರ್ಣವಾಗಿ ತುಂಬಿ ಕೊನೆಯಲ್ಲಿ ಅರ್ಜಿ ಸಲ್ಲಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories