ಸೌತ್‌ ಇಂಡಿಯನ್‌ ಬ್ಯಾಂಕ್‌ ಪಿಒ ಪೋಸ್ಟ್‌ಗೆ ಅರ್ಜಿ ಆಹ್ವಾನ : ಸಿಎ ಆದವರು ಕೂಡಲೇ ಅರ್ಜಿ ಸಲ್ಲಿಸಿ

ಸೌತ್‌ ಇಂಡಿಯನ್‌ ಬ್ಯಾಂಕ್‌ ಪಿಒ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಅರ್ಹತೆಗಳಿರುವ ಆಸಕ್ತ ಅಭ್ಯರ್ಥಿಗಳು ಜುಲೈ 29 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಚಾರ್ಟೆಡ್‌ ಅಕೌಂಟೆಂಟ್‌ (CA) ಪರೀಕ್ಷೆ ಪಾಸಾದ ಯುವಕ/ಯುವತಿಯರಿಗೆ ಗುಡ್‌ನ್ಯೂಸ್‌. ಸೌತ್‌ ಇಂಡಿಯನ್‌ ಬ್ಯಾಂಕ್‌ ಖಾಲಿ ಇರುವ ಪ್ರೊಬೇಷನರಿ ಆಫೀಸರ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಅಭಿಯಾನದಲ್ಲಿ ಅರ್ಜಿ ಸಲ್ಲಿಸಲು ಜುಲೈ 29, 2026 ಕೊನೆಯ ದಿನಾಂಕವಾಗಿದೆ.

ಶೈಕ್ಷಣಿಕ ಅರ್ಹತೆ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಐಸಿಎಐ ನಡೆಸುವ ಸಿಎ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ವಯೋಮಿತಿ

ಸೌತ್‌ ಇಂಡಿಯನ್‌ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 30 ವರ್ಷಕ್ಕೆ ಮೀರಿರಬಾರದು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಅರ್ಜಿ ಶುಲ್ಕ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ: ಪದವೀಧರರಿಗೆ ಲೋಕಲ್‌ ಬ್ಯಾಂಕ್‌ ಆಫೀಸರ್‌ ಆಗುವ ಸುವರ್ಣಾವಕಾಶ : ಪಿಎನ್‌ಬಿಯ 545 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿ

ವೇತನ

ಸೌತ್‌ ಇಂಡಿಯನ್‌ ಬ್ಯಾಂಕ್‌ನ ಪ್ರೊಬೇಷನರಿ ಆಫೀಸರ್‌ ಹುದ್ದೆ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಲಕ್ಷಕ್ಕೂ ಅಧಿಕ ಸಂಬಳ ನೀಡಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?

  • ಅರ್ಜಿ ಸಲ್ಲಿಸಲು ಮೊದಲಿಗೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ recruit.southindianbank.bank.in ಭೇಟಿ ನೀಡಿ.
  • ಮುಖಪುಟದಲ್ಲಿರುವ Apply Now ಮೇಲೆ ಕ್ಲಿಕ್ಕಿಸಿ.
  • ಈ ಫಾರ್ಮ್‌ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ನಿಮ್ಮ ಫೋಟೋ ಮತ್ತು ಸಿಗ್ನೇಚರ್‌ ಅಪ್‌ಲೋಡ್‌ ಮಾಡಿ. ಅಪ್‌ಲೋಡ್‌ ಮಾಡುವ ಮೊದಲು ನಿಮ್ಮ ಫೋಟೋ ಕ್ಯಾಶುವಲ್‌ ಫೋಟೋ ಆಗಿದ್ದು, ವೈಟ್ ಬ್ಯಾಕ್‌ಗ್ರೌಂಡ್‌ ಇರಬೇಕು, ಜೊತೆಗೆ ಫೋಟೋ ಸೈಜ್‌ 50ಕೆಬಿ ಮೀರಿರಬಾರದು. ಅದೇ ರೀತಿ ನಿಮ್ಮ ಸಿಗ್ನಿಚರ್‌ ಅನ್ನು ಬಿಳಿ ಕಾಗದದ ಮೇಲೆ ಕಪ್ಪು ಇಂಕ್‌ ಪೆನ್‌ನಲ್ಲಿ ಸಹಿ ಮಾಡಿದ ಫೋಟೋ ತೆಗೆದು ಅಪ್‌ಲೋಡ್ ಮಾಡಿ. ಅದರ ಸೈಜ್‌ ಕೂಡಾ 50ಕೆಬಿ ಗಿಂತ ಹೆಚ್ಚಿರಬಾರದು.
  • ಕೊನೆಯದಾಗಿ ಇನ್ನೊಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಫಾರ್ಮ್‌ನ ಪ್ರಿಂಟ್‌ ತೆಗೆದುಕೊಳ್ಳಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.