SSLR Karnataka Recruitment 2023 : 2000 ಸರ್ವೇಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ವೆ ಸೆಟ್ಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕದಲ್ಲಿ ಖಾಲಿ ಇರುವ 2000 ಪರವಾನಗಿ ಪಡೆದ ಸರ್ವೇಯರ್ ಹುದ್ದೆಗಳಿಗೆ (SSLR Karnataka Recruitment 2023) ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಖಾಲಿ ಇರುವ ಹುದ್ದೆಗಳಿಗಾಗಿ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸಂಬಂಧಪಟ್ಟಂತೆ ಬೇಕಾಗುವ ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕಾಗಿದೆ.

SSLR ಕರ್ನಾಟಕ ಹುದ್ದೆಯ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಸರ್ವೆ ಸೆಟ್ಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ (SSLR)
ಹುದ್ದೆಗಳ ಸಂಖ್ಯೆ : 2000
ಉದ್ಯೋಗ ಸ್ಥಳ : ಕರ್ನಾಟಕ
ಹುದ್ದೆಯ ಹೆಸರು : ಪರವಾನಗಿ ಪಡೆದ ಸರ್ವೇಯರ್‌ಗಳು

SSLR ಕರ್ನಾಟಕ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳ ಜಿಲ್ಲೆವಾರು ಹುದ್ದೆಗಳ ವಿವರ :

  • ಉಡುಪಿ : 86 ಹುದ್ದೆಗಳು
  • ಉತ್ತರ ಕನ್ನಡ : 75 ಹುದ್ದೆಗಳು
  • ಕೊಡಗು : 25 ಹುದ್ದೆಗಳು
  • ಕೋಲಾರ : 53 ಹುದ್ದೆಗಳು
  • ಗದಗ : 54 ಹುದ್ದೆಗಳು
  • ಚಿಕ್ಕಮಗಳೂರು : 83 ಹುದ್ದೆಗಳು
  • ಚಿತ್ರದುರ್ಗ : 73 ಹುದ್ದೆಗಳು
  • ಚಾಮರಾಜನಗರ : 35 ಹುದ್ದೆಗಳು
  • ತುಮಕೂರು : 110 ಹುದ್ದೆಗಳು
  • ದಕ್ಷಿಣ ಕನ್ನಡ : 36 ಹುದ್ದೆಗಳು
  • ದಾವಣಗೆರೆ : 95 ಹುದ್ದೆಗಳು
  • ಧಾರವಾಡ : 92 ಹುದ್ದೆಗಳು
  • ಬೆಂಗಳೂರು ಗ್ರಾಮಾಂತರ : 66 ಹುದ್ದೆಗಳು
  • ಬೆಂಗಳೂರು ಜಿಲ್ಲೆ : 125 ಹುದ್ದೆಗಳು
  • ಬಿಜಾಪುರ : 32 ಹುದ್ದೆಗಳು
  • ಬೆಳಗಾವಿ : 85 ಹುದ್ದೆಗಳು
  • ಬಳ್ಳಾರಿ : 55 ಹುದ್ದೆಗಳು
  • ವಿಜಯನಗರ : 47 ಹುದ್ದೆಗಳು
  • ಬಾಗಲಕೋಟ : 47 ಹುದ್ದೆಗಳು
  • ಬೀದರ್ : 35 ಹುದ್ದೆಗಳು
  • ಮಂಡ್ಯ : 71 ಹುದ್ದೆಗಳು
  • ಮೈಸೂರು : 40 ಹುದ್ದೆಗಳು
  • ಯಾದಗಿರಿ : 20 ಹುದ್ದೆಗಳು
  • ರಾಮನಗರ : 100 ಹುದ್ದೆಗಳು
  • ರಾಯಚೂರು : 40 ಹುದ್ದೆಗಳು
  • ಶಿವಮೊಗ್ಗ ; 125 ಹುದ್ದೆಗಳು
  • ಹಾವೇರಿ : 152 ಹುದ್ದೆಗಳು
  • ಹಾಸನ : 60 ಹುದ್ದೆಗಳು
  • ಕೊಪ್ಪಳ : 28 ಹುದ್ದೆಗಳು
  • ಕಲಬುರಗಿ : 10 ಹುದ್ದೆಗಳು
  • ಚಿಕ್ಕಬಳ್ಳಾಪುರ :45 ಹುದ್ದೆಗಳು

ಶೈಕ್ಷಣಿಕ ಅರ್ಹತೆ:
ಎಸ್‌ಎಸ್‌ಎಲ್‌ಆರ್ ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸಿವಿಲ್, ಐಟಿಐನಲ್ಲಿ ಪಿಯುಸಿ, ಡಿಪ್ಲೊಮಾ, ಬಿಇ ಅಥವಾ ಬಿಟೆಕ್ ಪೂರ್ಣಗೊಳಿಸಿರಬೇಕು.

ಅನುಭವದ ವಿವರ :
ಎಸ್‌ಎಸ್‌ಎಲ್‌ಆರ್ ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ರಾಜ್ಯ ಸರಕಾರದ ಭೂಮಾಪನ ಕಂದಾಯ ವ್ಯವಸ್ಥೆಯಲ್ಲಿ ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.

ಇತರೆ ಶುಲ್ಕದ ವಿವರ :
ತರಬೇತಿ ಶುಲ್ಕ : ಅಭ್ಯರ್ಥಿಗಳು ಈ ಹುದ್ದೆಗಾಗಿ ತರಬೇತಿ ಶುಲ್ಕ ರೂ.5000/- ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕಾಗಿದೆ.
ಪರವಾನಗಿ ಶುಲ್ಕ: ಅಭ್ಯರ್ಥಿಗಳು ಈ ಹುದ್ದೆಗಾಗಿ ಪರವಾನಗಿ ಶುಲ್ಕ ರೂ.3000/- ಪಾವತಿಸಬೇಕಾಗಿದೆ.

ವಯೋಮಿತಿ ವಿವರ :
ಸರ್ವೆ ಸೆಟ್ಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಫೆಬ್ರವರಿ 20, 2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 65 ವರ್ಷ ವಯಸ್ಸು ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಸರ್ವೆ ಸೆಟ್ಲ್ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:
ಸರ್ವೆ ಸೆಟ್ಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ರೂ.1000/- ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಪಾವತಿ ವಿಧಾನ:
ಸರ್ವೆ ಸೆಟ್ಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗಿದೆ.

ಆಯ್ಕೆ ಪ್ರಕ್ರಿಯೆ:
ಸರ್ವೆ ಸೆಟ್ಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ಅಥವಾ ಲಿಖಿತ ಪರೀಕ್ಷೆ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ : ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ : ವಿವಿಧ ಹುದ್ದೆಗಳ ನೇಮಕಾತಿ

ಇದನ್ನೂ ಓದಿ : ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : ಪೋಸ್ಟ್ ಆಫೀಸ್ ನೇಮಕಾತಿ 2023 : SSLC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02 ಫೆಬ್ರವರಿ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಫೆಬ್ರವರಿ 2023

SSLR Karnataka Recruitment 2023 : Application Invitation for 2000 Surveyor Posts

Comments are closed.