Border-Gavaskar test series: ನಾಳೆಯಿಂದ ಪ್ರಥಮ ಟೆಸ್ಟ್, ಕಾಂಗರೂಬೇಟೆಗೆ ಹೀಗಿದೆ ಭಾರತದ ಪ್ಲೇಯಿಂಗ್ XI

ನಾಗ್ಪುರ: ಇಡೀ ಕ್ರಿಕೆಟ್ ಜಗತ್ತು ಕುತೂಹಲದಿಂದ ಎದುರು ನೋಡುತ್ತಿರುವ ಕ್ಷಣ ಬಂದೇ ಬಿಟ್ಟಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಪ್ರಥಮ ಪಂದ್ಯ ನಾಳೆ (ಗುರುವಾರ) ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾಗಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಆತಿಥೇಯ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಫೈನಲ್ ಪ್ರವೇಶಿಸಲು 4 ಪಂದ್ಯಗಳ ಸರಣಿಯನ್ನು ಭಾರತ ಕನಿಷ್ಠ 2-0 ಅಂತರದಲ್ಲಿ ಗೆಲ್ಲಲೇಬೇಕಿದೆ.

ಆಸೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆ.ಎಲ್ ರಾಹುಲ್ ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಮತ್ತು 4ನೇ ಕ್ರಮಾಂಕದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡಲಿದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡಿರುವುದರಿಂದ 5ನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಅಥವಾ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲಿದ್ದಾರೆ. ಶುಭಮನ್ ಗಿಲ್ ಟೀಮ್ ಇಂಡಿಯಾ ಪರ ಆಡಿದ ಕಳೆದ 7 ಇನ್ನಿಂಗ್ಸ್’ಗಳಲ್ಲಿ 4 ಶತಕ ಬಾರಿಸಿದ್ದಾರೆ.

ಟೀಮ್ ಇಂಡಿಯಾ ಕಳೆದ ಏಳು ಇನ್ನಿಂಗ್ಸ್’ಗಳಲ್ಲಿ ಶುಭಮನ್ ಗಿಲ್ 4 ಶತಕ ಬಾರಿಸಿದ್ದಾರೆ.
126* Vs ನ್ಯೂಜಿಲೆಂಡ್ (ಟಿ20)
112 Vs ನ್ಯೂಜಿಲೆಂಡ್ (ಏಕದಿನ)
208 Vs ನ್ಯೂಜಿಲೆಂಡ್ (ಏಕದಿನ)
116 Vs ಶ್ರೀಲಂಕಾ (ಏಕದಿನ)

ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಕೆ.ಎಸ್ ಭರತ್ ಟೀಮ್ ಇಂಡಿಯಾ ಪದಾರ್ಪಣೆಗೆ ಸಜ್ಜಾಗಿದ್ದಾರೆ. ಆಲ್ರೌಂಡರ್’ಗಳಾದ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಸ್ಪಿನ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ನಾಗ್ಪುರ ಪಿಚ್ ಸ್ಪಿನ್ನರ್’ಗಳಿಗೆ ನೆರವು ನೀಡಲಿರುವುದರಿಂದ ಭಾರತ 3 ಸ್ಪಿನ್ನರ್’ಗಳನ್ನು ಆಡಿಸಲಿದೆ. ಹೀಗಾಗಿ 3ನೇ ಸ್ಪಿನ್ನರ್ ಸ್ಥಾನಕ್ಕೆ ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಭಾರತ ತಂಡ ನಾಲ್ವರು ಸ್ಪಿನ್ನರ್’ಗಳನ್ನು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ.

ಭಾರತ Vs ಆಸ್ಟ್ರೇಲಿಯಾ ಪ್ರಥಮ ಟೆಸ್ಟ್ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಸ್ಥಳ: ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನ, ಜಮ್ತಾ; ನಾಗ್ಪುರ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಪ್ರಥಮ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ರೋಹಿತ್ ಶರ್ಮಾ (ನಾಯಕ), 2.ಮಯಾಂಕ್ ಅಗರ್ವಾಲ್ (ಉಪನಾಯಕ), 3.ಚೇತೇಶ್ವರ್ ಪೂಜಾರ, 4.ವಿರಾಟ್ ಕೊಹ್ಲಿ, 5.ಶುಭಮನ್ ಗಿಲ್/ಸೂರ್ಯಕುಮಾರ್ ಯಾದವ್, 6.ಕೆ.ಎಸ್ ಭರತ್ (ವಿಕೆಟ್ ಕೀಪರ್), 7.ರವೀಂದ್ರ ಜಡೇಜ, 8.ರವಿಚಂದ್ರನ್ ಅಶ್ವಿನ್, 9.ಅಕ್ಷರ್ ಪಟೇಲ್/ಕುಲ್ದೀಪ್ ಯಾದವ್, 10.ಮೊಹಮ್ಮದ್ ಶಮಿ, 11.ಮೊಹಮ್ಮದ್ ಸಿರಾಜ್

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವನ್ ಸ್ಮಿತ್ (ಉಪನಾಯಕ), ಡೇವಿಡ್ ವಾರ್ನರ್, ಮ್ಯಾಟ್ ರೆನ್’ಶಾ, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಸ್ಕಾಟ್ ಬೊಲಾಂಡ್, ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್’ಕಾಂಬ್, ಜೋಶ್ ಹೇಜಲ್’ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ನೇಥನ್ ಲಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ 2023ರ ವೇಳಾಪಟ್ಟಿ (India Vs Australia (Border-Gavaskar Trophy test series):
ಪ್ರಥಮ ಟೆಸ್ಟ್: ಫೆಬ್ರವರಿ 9-13 (ವಿಸಿಎ ಕ್ರೀಡಾಂಗಣ, ಜಮ್ತಾ; ನಾಗ್ಪುರ)
2ನೇ ಟೆಸ್ಟ್: ಫೆಬ್ರವರಿ 17-21 (ಫಿರೋಜ್ ಶಾ ಕ್ರೀಡಾಂಗಣ, ದೆಹಲಿ)
3ನೇ ಟೆಸ್ಟ್: ಮಾರ್ಚ್ 1-5 (HPCA ಕ್ರೀಡಾಂಗಣ, ಧರ್ಮಶಾಲಾ)
4ನೇ ಟೆಸ್ಟ್: ಮಾರ್ಚ್ 9-13 (ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್)

ಇದನ್ನೂ ಓದಿ : ಮಾರ್ಚ್ 4ರಿಂದ ಮಹಿಳಾ ಐಪಿಎಲ್; ಫೆಬ್ರವರಿ 13ಕ್ಕೆ ಆಟಗಾರ್ತಿಯರ ಹರಾಜು, ಯಾರ ಮೂಲ ಬೆಲೆ ಎಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : ಬಿಸಿಸಿಐ ಸೀನಿಯರ್ ಮಹಿಳಾ ಏಕದಿನ ಟ್ರೋಫಿ: ಫೈನಲ್‌ನಲ್ಲಿ ಮತ್ತೆ ನಿರಾಸೆ, ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟ ಕರ್ನಾಟಕದ ವನಿತೆಯರು

ಇದನ್ನೂ ಓದಿ : KL Rahul took Sai baba blessing : ಕಾಂಗರೂಬೇಟೆಗೆ ಮುನ್ನ ಸಾಯಿ ಬಾಬಾ ದರ್ಶನ ಪಡೆದ ರಾಹುಲ್, ಕನ್ನಡಿಗನಿಗೆ ಸಿಗಲಿದ್ಯಾ ಬಾಬಾ ಕೃಪೆ?

Border-Gavaskar test series : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತದ ಸಾಧನೆ :

  • 1996-97: ಭಾರತಕ್ಕೆ 1-0 ಅಂತರದಲ್ಲಿ ಸರಣಿ ಜಯ
  • 1997-98: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ
  • 1999-00: ಭಾರತಕ್ಕೆ 0-3 ಅಂತರದಲ್ಲಿ ಸರಣಿ ಸೋಲು
  • 2000-01: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ
  • 2003-04: 1-1 ಅಂತರದಲ್ಲಿ ಸರಣಿ ಸಮಬಲ
  • 2004-05: ಭಾರತಕ್ಕೆ 1-2 ಅಂತರದಲ್ಲಿ ಸರಣಿ ಸೋಲು
  • 2007-08: ಭಾರತಕ್ಕೆ 1-2 ಅಂತರದಲ್ಲಿ ಸರಣಿ ಸೋಲು
  • 2008-09: ಭಾರತಕ್ಕೆ 2-0 ಅಂತರದಲ್ಲಿ ಸರಣಿ ಜಯ
  • 2010-11: ಭಾರತಕ್ಕೆ 2-0 ಅಂತರದಲ್ಲಿ ಸರಣಿ ಜಯ
  • 2011-12: ಭಾರತಕ್ಕೆ 0-4 ಅಂತರದಲ್ಲಿ ಸರಣಿ ಸೋಲು
  • 2012-13: ಭಾರತಕ್ಕೆ 4-0 ಅಂತರದಲ್ಲಿ ಸರಣಿ ಜಯ
  • 2014-15: ಭಾರತಕ್ಕೆ 0-2 ಅಂತರದಲ್ಲಿ ಸರಣಿ ಸೋಲು
  • 2016-17: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ
  • 2018-19: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ
  • 2020-21: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ

Border-Gavaskar test series: First Test from tomorrow, India’s playing XI for kangaroo hunt

Comments are closed.