ಉಡುಪಿ ಜಿಲ್ಲಾಧಿಕಾರಿ ಕಚೇರಿ ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ 04 ರ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಹಾಯಕ ಅಭಿಯಂತರರು ಮತ್ತು ಲೆಕ್ಕಾಧಿಕಾರಿ/ಲೆಕ್ಕಾಧೀಕ್ಷರ ಹುದ್ದೆಯನ್ನು (Udupi DC Office Recruitment 2023) ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಆದ್ದರಿಂದ ಈ ಕೆಳಗಿನ ಅರ್ಹತೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಅಧಿಸೂಚನೆಯ ಸಂಪೂರ್ಣ ವಿವರ :
ಇಲಾಖೆ ಹೆಸರು : ಯೋಜನಾ ನಿರ್ದೇಶಕರ ಕಚೇರಿ
ಹುದ್ದೆಯ ಸಂಖ್ಯೆ : ನಿರ್ದಿಷ್ಟಪಡಿಸಿಲ್ಲ
ಹುದ್ದೆಯ ಹೆಸರು : ಸಹಾಯಕ ಅಭಿಯಂತರು, ಲೆಕ್ಕಾಧಿಕಾರಿ/ಲೆಕ್ಕಾಧೀಕ್ಷರ ಹುದ್ದೆ
ಉದ್ಯೋಗ ಸ್ಥಳ : ರಜತಾದ್ರಿ ಮಣಿಪಾಲ, ಉಡುಪಿ

ವಿದ್ಯಾರ್ಹತೆ ಹಾಗೂ ಇತರೆ ಅರ್ಹತೆ ವಿವರ :

ಸಹಾಯಕ ಅಭಿಯಂತರು :

  • ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಿಂದ ಬಿ.ಇ ಸಿವಿಲ್‌ ಅಥವಾ ತತ್ಸಮಾನ ಪದವಿಧರರಾಗಿರಬೇಕು.
  • ಇದರೊಂದಿಗೆ ಅಭ್ಯರ್ಥಿಗಳು ಕಂಫ್ಯೂಟರ್‌ ಜ್ಞಾನದ ಜೊತೆಗೆ ಎಂ.ಎಸ್‌ ಆಫೀಸ್‌ ಹಾಗೂ ಆಟೋ ಕ್ಯಾಡ್‌ ಜ್ಞಾನವನ್ನುಹೊಂದಿರುವುದು ಕಡ್ಡಾಯವಾಗಿರುತ್ತದೆ.

ಲೆಕ್ಕಾಧಿಕಾರಿ/ಲೆಕ್ಕಾಧೀಕ್ಷರು :

  • ಈ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯಗಳಿಂದ ಎಂ.ಕಾಂನಲ್ಲಿ ಪದವಿವೀಧರಾಗಿರಬೇಕು. ಇದರೊಂದಿಗೆ ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನದ ಜೊತೆಗೆ ಎಂ.ಎಸ್‌. ಆಫೀಸ್‌ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.
  • ಅಭ್ಯರ್ಥಿಗಳು ಕಂಪ್ಯೂಟರ್‌ ಜ್ಞಾನದ ಜೊತೆಗೆ ಎಂ.ಎಸ್‌. ಆಫೀಸ್‌ ಜ್ಞಾನವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.


ಅನುಭವದ ವಿವರ :

  • ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ವಿಭಾಗ, ರಸ್ತೆ, ಚರಂಡಿ, ಕಟ್ಟಡ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವ ಅನುಭವವನ್ನು ಹೊಂದಿರಬೇಕು.
  • ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂದಾಜು ಪಟ್ಟಿಯ ಸಿದ್ಧಪಡಿಸುವುದು, EOT, Work Slip, EIRLಗಳನ್ನು ತಯಾರಿಸಿ ಮತ್ತು ಪರಿಶೀಲಿಸುವ ಅನುಭವವಿರಬೇಕು.
  • ಇ- ಪ್ರಕ್ಯೂರ್‌ಮೆಟ್‌ ಪೋರ್ಟಲ್‌ ಮುಖಾಂತರ ಟೆಂಡರ್‌ ಆಹ್ವಾನಿಸುವುದು, ತಾಂತ್ರಿಕ ಮೌಲ್ಯ ಮಾಪನ ಮತ್ತು ಆರ್ಥಿಕ ಮೌಲ್ಯ ಮಾಪನ ತಯಾರಿಸುವಲ್ಲಿ ಅನುಭವ ಹೊಂದಿರಬೇಕು.
  • ಸರಕಾರಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಭ್ಯರ್ಥಿಗಳಿಗೆ ಪ್ರಥಮ ಆಧ್ಯತೆ ನೀಡಲಾಗುತ್ತದೆ.

ಲೆಕ್ಕಾಧಿಕಾರಿ/ಲೆಕ್ಕಾಧೀಕ್ಷರು :
ಸರಕಾರದಲ್ಲಾಗಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಾಗಲಿ ಕನಿಷ್ಠ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕಾಗುತ್ತದೆ.
ಸರಕಾರಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಭ್ಯರ್ಥಿಗಳಿಎ ಪ್ರಥಮ ಆಧ್ಯತೆ ನೀಡಲಾಗುತ್ತದೆ.

ವಯೋಮಿತಿ ವಿವರ :
ಯೋಜನಾ ನಿರ್ದೇಶಕರ ಕಚೇರಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 50 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಸಲ್ಲಿಸುವ ವಿಧಾನ :
ಮೇಲ್ಕಂಡ ಅರ್ಹತೆಯುಳ್ಳ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳೊಂದಿಗೆ, ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ, ಹುಟ್ಟಿದ ದಿನಾಂಕ ಧೃಢೀಕರಣ ಪತ್ರ ಹಾಗೂ ಇನ್ನಿತರ ಸೂಕ್ತ ದಾಖಲೆಗಳೊಂದಿಗೆ ಮಾರ್ಚ್‌ 12, 2023ರ ಮೊದಲು ಯೋಜನಾ ನಿರ್ದೇಶಕರ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಯವರ ಕಾರ್ಯಲಯ, “ಎ” ಬ್ಲಾಕ್‌, ನೆಲ ಮಹಡಿ, ಕೊಠಡಿ ಸಂಖ್ಯೆ 101 ರಜತಾದ್ರಿ ಮಣಿಪಾಲ ಉಡುಪಿ 576104 ಈ ವಿಳಾಸಕ್ಕೆ ಸಲ್ಲಿಸಬೇಕಾಗಿದೆ.

ಇದನ್ನೂ ಓದಿ : KMF recruitment 2023: ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : DC Office Bengaluru recruitment 2023: ಪುರಸಭೆ, ನಗರಸಭೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : IAF Recruitment 2023 : ಭಾರತೀಯ ವಾಯುಪಡೆ ನೇಮಕಾತಿ : ವಿವಿಧ ಅಗ್ನಿವೀರರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗಾಗಿ : ಅಭ್ಯರ್ಥಿಗಳು ಈ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ 0820-2574933 ಸಂಪರ್ಕಿಸಬಹುದಾಗಿದೆ.

Udupi DC Office Recruitment 2023: Udupi DC Office Recruitment 2023: Applications invited for various posts

Comments are closed.