Work From Home Permanent : ಸಮೀಕ್ಷೆಯಲ್ಲಿ ಬಯಲಾಯ್ತು ವರ್ಕ್​ ಫ್ರಾಮ್​ ಹೋಮ್​ ಕುರಿತ ಬಹುಮುಖ್ಯ ಮಾಹಿತಿ

Work From Home Permanent : ಹೆಚ್ಚಿನ ಕಂಪನಿಗಳಿಗೆ ವರ್ಕ್​ ಫ್ರಾಮ್​ ಹೋಮ್​​ ಅಂತ್ಯಗೊಂಡಿರುವುದರಿಂದ ಬುಧವಾರದಂದು ಸಮೀಕ್ಷೆಯ ವರದಿಯೊಂದು ಹೊರ ಬಿದ್ದಿದ್ದು ಈ ಸಮೀಕ್ಷೆಯಲ್ಲಿ 73 ಪ್ರತಿಶತ ಕಂಪನಿಗಳು ತಮ್ಮ ಸಿಬ್ಬಂದಿಗೆ ಹೈಬ್ರಿಡ್​ ಮಾದರಿಯ ಕೆಲಸವನ್ನು ನೀಡಲು ಬಯಸುತ್ತಾರೆ ಎಂದು ತಿಳಿದು ಬಂದಿದೆ. ಹೈಬ್ರಿಡ್​ ಮಾದರಿಯ ಕೆಲಸವೆಂದರೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಒಂದು ಪದ್ಧತಿಯಾಗಿದೆ. ರಿಯಲ್​ ಎಸ್ಟೇಟ್​ ಸಂಸ್ಥೆಯಾದ ಸಿಆರ್​​ಬಿಇ ಸೌತ್​ ಏಷ್ಯಾ ಪ್ರೈವೇಟ್​ ಲಿಮಿಟೆಡ್​ ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದಲ್ಲಿ 73 ಪ್ರತಿಶತಕ್ಕಿಂತ ಹೆಚ್ಚು ಕಂಪನಿಗಳು ಭಾರತದಲ್ಲಿ ಹೈಬ್ರಿಡ್​ ಮಾದರಿಯ ಕೆಲಸವನ್ನು ಜಾರಿಗೆ ತರಲು ಪ್ಲಾನ್​ ಮಾಡಿವೆ ಎಂದು ತಿಳಿದು ಬಂದಿದೆ.

ಕೋವಿಡ್​ ಸಾಂಕ್ರಾಮಿಕದ ಬಳಿಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೆಲಸವನ್ನು ಮಾಡಲು ಸೂಕ್ತವಾದ ವಾತಾವರಣವನ್ನು ಕಲ್ಪಿಸಲು ನಿರ್ಧರಿಸಿದ ಬಳಿಕ ಹೈಬ್ರಿಡ್​ ಮಾದರಿಯ ಕೆಲಸದತ್ತ ಹೆಚ್ಚು ಒಲವನ್ನು ತೋರಿವೆ ಎಂದು ಸಮೀಕ್ಷೆಯು ಹೇಳಿದೆ. ಹೆಚ್ಚಿನ ಕಚೇರಿಯ ಉದ್ಯೋಗಿಗಳು ತಮ್ಮ ಕಚೇರಿಗೆ ಮರಳಲು ಅನುಕೂಲವಾಗುವಂತೆ ನೌಕರರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಪ್ರಮುಖ ಅಂಶವಾಗಿ ಒತ್ತಿಹೇಳಿದ್ದಾರೆ.

ಸಮೀಕ್ಷೆಯ ಪ್ರಕಾರ ಸುಮಾರು 38 ಪ್ರತಿಶತದಷ್ಟು ಕಂಪನಿಗಳು ಕಚೇರಿ ಹಾಗೂ ರಿಮೋಟ್​ ಕೆಲಸದ ಮಿಶ್ರಣಕ್ಕೆ ಆದ್ಯತೆ ನೀಡಿವೆ . ಆದರೆ ಉಳಿದ 35 ಪ್ರತಿಶತ ಕಂಪನಿಗಳಲ್ಲಿ ವಾರದಲ್ಲಿ ಮೂರು ದಿನ ಕಚೇರಿಯಲ್ಲಿ ಕೆಲಸ ಮಾಡಲು ಇಂಗಿತ ವ್ಯಕ್ತಪಡಿಸಿದ್ದಾರೆ. ಹೈಬ್ರಿಡ್​ ಮಾದರಿಯ ಕೆಲಸವನ್ನು ಜಾರಿಗೆ ತರುವ ಬಹುತೇಕ ಕಂಪನಿಗಳು ಕಚೇರಿ ಆಧಾರಿತ ಹಾಗೂ ರಿಮೋಟ್​ ಕೆಲಸದ ಮಿಶ್ರಣಕ್ಕೆ ಹೆಚ್ಚು ಆದ್ಯತೆ ನೀಡಿವೆ ಎಂದು ತಿಳಿದುಬಂದಿದೆ.


ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ ಭಾರತೀಯರಲ್ಲಿ 62 ಪ್ರತಿಶತದಷ್ಟು ಜನರು ಮುಂದಿನ ಮೂರು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಪೋರ್ಟ್ಫೋಲಿಯೊಗಳ ಗಾತ್ರವನ್ನು ಹೆಚ್ಚಿಸಲು ಉದ್ದೇಶಿಸಿರುವುದರಿಂದ ಕಚೇರಿ ಬೇಡಿಕೆಯಿಂದ ಕೆಲಸವು ಬೆಳೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ.ಈ ಮಧ್ಯೆ, ಪ್ರತಿಕ್ರಿಯಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ತಮ್ಮ ಹೊಂದಿಕೊಳ್ಳುವ ಪೋರ್ಟ್‌ಫೋಲಿಯೋ ಕಾರ್ಯತಂತ್ರದ ಭಾಗವಾಗಿ ಸಹ-ಕೆಲಸ ಮಾಡುವ ಸ್ಥಳಗಳ ಮೂಲಕ ಹೊಂದಿಕೊಳ್ಳುವ ಬೇಡಿಕೆಯನ್ನು ಪೂರೈಸುವುದರ ಜೊತೆಗೆ ಕಡಿಮೆ ಸ್ಥಳಗಳಲ್ಲಿ ಏಕೀಕರಣದ ಬಗ್ಗೆ ಸುಳಿವು ನೀಡಿದ್ದಾರೆ.

ಇದನ್ನು ಓದಿ : Infosys Sudha Murty : ತಿರುಪತಿ ದೇವಸ್ಥಾನ : 42 ಲಕ್ಷ ವೆಚ್ಚದ ಧರ್ಮ ರಥ ನೀಡಿದ ಇನ್ಪೋಸಿಸ್‌ ಸುಧಾಮೂರ್ತಿ

ಇದನ್ನೂ ಓದಿ : Covid-19 precautionary dose : ಕೋವಿಡ್​ 19 ಬೂಸ್ಟರ್​ ಡೋಸ್​ ನಡುವಿನ ಅಂತರ ಇಳಿಕೆ ಮಾಡಿದ ಕೇಂದ್ರ

Work From Home Permanent: survey reveals major things

Comments are closed.