IT Raid Bangalore : ಫೈನಾನ್ಶಿಯರ್‌ಗಳ ಮನೆ ಮೇಲೆ ಐಟಿ ದಾಳಿ : 20 ಕೋಟಿ ರೂಪಾಯಿ ಜಪ್ತಿ

ಬೆಂಗಳೂರು : IT Raid Bangalore : ಚುನಾವಣಾ ಅಭ್ಯರ್ಥಿಗಳಿಗೆ ಫಂಡಿಂಗ್‌ ಮಾಡಲು ಹಣ ಸಂಗ್ರಹಿಸಿದ್ದ ಫೈನಾನ್ಶಿಯರ್‌ಗಳ ನಿವಾಸಗಳ ಮೇಲೆ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಈ ದಾಳಿ ನಡೆದಿದ್ದು, ಸುಮಾರು 20 ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ. ಸುಮಾರು 15 ಕೋಟಿ ರೂಪಾಯಿ ನಗದು ಹಾಗೂ ಐದು ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ಬೆಳಗ್ಗೆ ಏಕಾಕಾಲದಲ್ಲಿ ದಾಳಿ ನಡೆಸಲಾಗಿದ್ದು, ಎರಡು ದಿನಗಳ ಕಾಲ ನಿಂತರವಾಗಿ ಪರಿಶೀಲನೆಯನ್ನು ನಡೆಸಲಾಗಿದೆ. ಬೆಂಗಳೂರಿನ (IT Raid Bangalore) ಶಿವಾಜಿನಗರ, ಆರ್‌ವಿಎಂ ಬಡಾವಣೆ , ಸದಾಶಿವನಗರ, ಕುಮಾರ ಪಾರ್ಕ್‌ ವೆಸ್ಟ್, ಶಾಂತಿನಗರ, ಕಾಕ್ಸ್‌ಟೌನ್‌ನಲ್ಲಿರುವ ಮನೆಗಳ ಮೇಲೆ ಈ ದಾಳಿ ನಡೆದಿದೆ. ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹಣವನ್ನು ಫಂಡಿಂಗ್‌ ಮಾಡಲು ಈ ಹಣವನ್ನು ಸಂಗ್ರಹ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಇದರಲ್ಲಿ ಯಾವೆಲ್ಲಾ ಕ್ಷೇತ್ರದ ಅಭ್ಯರ್ಥಿಗಳಿದ್ದಾರೆ ಅನ್ನೋದು ಮಾತ್ರ ತಿಳಿದು ಬಂದಿಲ್ಲ.

ಹಣವನ್ನು ವಶಕ್ಕೆ ಪಡೆದಿರುವ ಐಟಿ ಇಲಾಖೆಯ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಶ ಪಡಿಸಿಕೊಂಡಿರುವ ಹಣವೆಲ್ಲವೂ 500 ರೂಪಾಯಿ ಮುಖಬೆಲೆಯ ನೋಟ್‌ಗಳಾಗಿವೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮೇ ೧೦ರಂದು ನಡೆಯಲಿದ್ದು, ಅಂತಿಮ ಹಂತದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ರಾಜಕೀಯ ಪಕ್ಷಗಳು ಜನರ ಬೆಂಬಲ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅಂತಿಮ ದಿನಗಳಂದು ಮತದಾರರಿಗೆ ಹಣದ ಆಮಿಷವೊಡ್ಡುವ ಸಲುವಾಗಿ ಹಣವನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಲಾಗಿದೆ ಎನ್ನಲಾಗುತ್ತಿದೆ.

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಅಕ್ರಮ ಪತ್ತೆಯಾಗುತ್ತಿದ್ದು, ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಇನ್ನೂರು ಕೋಟಿಗೂ ಅಧಿಕ ಹಣವನ್ನು ಈಗಾಗಲೇ ಚುನಾವಣಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ಐಟಿ ದಾಳಿ ನಡೆಸಿದ ಅಧಿಕಾರಿಗಳೇ ಶಾಕ್‌ ಆಗಿದ್ದರು. ಐಟಿ ದಾಳಿಯ ಮಾಹಿತಿ ಪಡೆದು ಮನೆಯಂಗಳದಲ್ಲಿರುವ ಗಿಡದಲ್ಲಿ ಮಾವಿನಹಣ್ಣಿನ ಬಾಕ್ಸ್‌ನಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಬಚ್ಚಿಡುವ ಕಾರ್ಯವನ್ನು ಮಾಡಲಾಗಿತ್ತು.

ಇದನ್ನೂ ಓದಿ : ಮಗನನ್ನು ಲಾಯರ್ ಮಾಡ್ತಿರೋದ್ಯಾಕೆ ಡಿಕೆ ಶಿವಕುಮಾರ್ ? ಇಲ್ಲಿದೆ Exclusive Story

ಇದನ್ನೂ ಓದಿ : Prime Minister Kisan Yojana : ಪಿಎಂ ಕಿಸಾನ್‌ ಯೋಜನೆಯ 14ನೇ ಕಂತು ಜಮೆ ಆಗಿದ್ಯಾ ? ಚೆಕ್‌ ಮಾಡಲು ಕ್ಲಿಕ್‌ ಮಾಡಿ

Comments are closed.