ಸಿಹಿ ನಿದ್ದೆಯಲ್ಲಿದ್ದವರ ಮೇಲೆ ಜವರಾಯನ ಅಟ್ಟಹಾಸ, ಭೀಕರ ಅಪಘಾತದಲ್ಲಿ 9 ಮಂದಿ ಸಾವು!
Chitradurga Sleeper Bus Accident: ಚಿತ್ರದುರ್ಗ: ಅವರೆಲ್ಲಾ ತಮ್ಮ ಊರಿಗೆ ಇನ್ನೇನು ತಲುಪುತ್ತೇವೆ. ಹಬ್ಬದ ರಜೆ ಇದೆ ಎಂದುಕೊಂಡಿದ್ದರು. ಅದೇ ಖುಷಿಯಲ್ಲಿ ನೆಮ್ಮದಿಯಿಂದ ಮಲಗಿದ್ದರು. ಆದ್ರೆ ವಿಧಿಯ ಲೆಕ್ಕಾಚಾರವೇ ಬೇರೆ ಆಗಿತ್ತು. ಮಲಗಿದ್ದಲ್ಲೇ 5 ಜನ ಸಜೀವ ದಹನವಾಗಿದ್ದಾರೆ. ಇನ್ನು 4 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೌದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ಅಪಘಾತ ಸಂಭವಿಸಿ ಬಸ್ ಹೊತ್ತಿ ಉರಿದಿದೆ.
ಚಿತ್ರದುರ್ಗ ಬಸ್ ಅಪಘಾತ
ಚಿತ್ರದುರ್ಗದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಈ ಅಪಘಾತದಲ್ಲಿ 9ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಅಪಘಾತದ ವಿವರ
ಸ್ಥಳ: ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48
ಬಸ್: ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ (ಏಂ 01 ಂಇ 5217)
ಪ್ರಯಾಣಿಕರು: 29 ಮಂದಿ (14 ಮಹಿಳೆಯರು ಮತ್ತು 15 ಪುರುಷರು)
ಸಾವು: 9 ಮಂದಿ
ಗಾಯಗೊಂಡವರು: ಹಲವರು
ಇದನ್ನೂ ಓದಿ: ಹೀರೋ ಸ್ಪ್ಲೆಂಡರ್ ಪ್ಲಸ್ vs ಹೋಂಡಾ ಶೈನ್ 100: ಯಾವ ಬೈಕ್ ಬೆಸ್ಟ್?
ರಕ್ಷಣಾ ಕಾರ್ಯ
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ತೆರಳಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಅಪಘಾತದ ತನಿಖೆ ನಡೆಯುತ್ತಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ.



